`ಜೆಡಿಎಸ್ ಮುಖಂಡೆ ಚೈತ್ರಾ ಕೋಠಾರಕರ್ ಅವರ ಪುತ್ರ ಚಿರಾಗ ಕೋಠಾರಕರ್ ಹಾಗೂ ಕಾಂಗ್ರೆಸ್ ಕಾರ್ಯಕರ್ತೆ ರೀನಾ ಡಿಸೋಜಾ ಅವರ ಪುತ್ರಿ ರೀಶಲ್ ಡಿಸೋಜಾ ಪರಸ್ಪರ ಪ್ರೀತಿಸುತ್ತಿದ್ದು, ಆ ಪ್ರೀತಿಗೆ ವಿರೋಧವಾಗಿದ್ದೇ ರೀಶಲ್ ಡಿಸೋಜಾ ಅವರ ಸಾವಿಗೆ ಕಾರಣ’ ಎಂದು ಕೋಠಾರಕರ್ ಕುಟುಂಬದವರು ಹೇಳಿದ್ದಾರೆ.
`ಕಾರವಾರದ ಚಿರಾಗ್ ಹಾಗೂ ಕದ್ರಾದ ರೀಶೆಲ್ ನಡುವೆ ಪ್ರೀತಿ ಅಪಾರವಾದ ಪ್ರೀತಿ ಇತ್ತು. ಅದು ಪವಿತ್ರವಾದ ಪ್ರೀತಿಯಾಗಿತ್ತೇ ವಿನಃ ಅದರಲ್ಲಿ ಬೇರೆ ಏನೂ ಇರಲಿಲ್ಲ. ರಿಶೇಲ್ ಹಾಗೂ ಚಿರಾಗ್ ನಡುವೆ ಪ್ರೀತಿ-ಪ್ರೇಮ ನಡೆದಿರುವುದು ಎರಡೂ ಕುಟುಂಬಕ್ಕೆ ತಿಳಿದಿತ್ತು. ರೀಶಾಲ್ ಸಹ ಅನೇಕ ಬಾರಿ ಚಿರಾಗ್ ಮನೆಗೆ ಬರುತ್ತಿದ್ದರು. ಅನೇಕ ಕಾರ್ಯಕ್ರಮಕ್ಕೆ ರಿಶೇಲ್ ಹಾಗೂ ಚಿರಾಗ್ ಒಟ್ಟಿಗೆ ಬಂದಿದ್ದರು. ಆದರೆ, ರೀಶೇಲ್ ಅವರ ತಾಯಿ ಆ ಪ್ರೀತಿಯನ್ನು ವಿರೋಧಿಸಿದ್ದರು. ಆ ವಿರೋಧವೇ ರೀಶೆಲ್ ಅವರ ಸಾವಿಗೆ ಕಾರಣ’ ಎಂದು ಚಿರಾಗ ಕೋಠಾರಕರ್ ಅವರ ಚಿಕ್ಕಮ್ಮನೂ ಆಗಿರುವ ಕಿನ್ನರ ಗ್ರಾಮದ ಸೀಮಾ ಕೊಠಾರಕರ್ ಅವರು ಹೇಳಿದ್ದಾರೆ.
`ಕಾರವಾರದ ಕದ್ರಾ ಗ್ರಾಮದ ರಿಶೇಲ್ ಸಾವಿನ ವಿಚಾರವನ್ನ ರಾಜಕೀಯ ದ್ವೇಷ ಸಾಧನೆಗೆ ಬಳಸಿಕೊಳ್ಳಲಾಗುತ್ತಿದೆ. ಆದರೆ, ರೀಶೆಲ್ ಅವರಿಗೆ ಅವರ ತಾಯಿಯೇ ಕಿರುಕುಳ ನೀಡಿದ್ದು, ಅದೇ ನೋವಿನಲ್ಲಿ ರೀಶೆಲ್ ಸಾವನಪ್ಪಿದ್ದಾರೆ’ ಎಂದವರು ದೂರಿದ್ದಾರೆ. `ರಿಶೇಲ್ ಆತ್ಮಹತ್ಯೆಯ ನಂತರ ಚಿರಾಗ್ ಮಾನಸಿಕವಾಗಿ ಕುಗ್ಗಿದ್ದಾನೆ. ಪ್ರೀತಿ ಮಾಡುತ್ತಿದ್ದ ಹುಡಗಿ ಆತ್ಮಹತ್ಯೆ ಮಾಡಿಕೊಂಡಿರುವುದು ಆತನ ಮನಸ್ಸಿಗೆ ಗಾಸಿಯಾಗಿದೆ. ರಿಶೇಲ್ ಸಾವಿನ ದುರುಪಯೋಗ ಪಡೆಯಲು ಕೇವಲ ದುಷ್ಟ ಶಕ್ತಿಗಳು ಪ್ರಯತ್ನಿಸುತ್ತಿದೆ. ಇದಕ್ಕೆ ಜಾತಿಯ ಬಣ್ಣವನ್ನ ಸಹ ಕೊಡಲಾಗುತ್ತಿದೆ’ ಎಂದು ದೂರಿದರು.
`ಚಿರಾಗ ಅತ್ಯಂತ ಮುಗ್ದನಾಗಿದ್ದು, ಆತ ಮುಗ್ದ ಎಂದು ತೋರಿಸಲು ಅನೇಕ ಸಾಕ್ಷಾಧಾರಗಳಿವೆ. ಅದನ್ನು ಪೊಲೀಸ್ ತನಿಖೆ ವೇಳೆ ನೀಡಲಾಗುತ್ತದೆ. ಚಿರಾಗ್ ಅವರ ಪ್ರೇಯಸಿ ರೀಶಲ್ ಸಾವಿನ ವಿಷಯವಾಗಿ ಅನಗತ್ಯವಾಗಿ ಚೈತ್ರಾ ಕೋಠಾರಕರ್ ಅವರ ಫೋಟೋ ಬಳಸಲಾಗುತ್ತಿದ್ದು, ಕಾನೂನು ಕ್ರಮ ಜರುಗಿಸುವುದು ಅನಿವಾರ್ಯ’ ಎಂದು ಎಚ್ಚರಿಸಿದರು. ಕಿನ್ನರ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಮುನ್ನಾ ಕೊಠಾರಕರ್, ವೀಣಾ ಕೊಠಾರಕರ್, ಶೈಲಾ ಚಿಂಚ್ರೇಕರ್, ಪ್ರಶಾಂತ್ ನಾಯ್ಕ, ಮಾನ್ಯ ಕೊಠಾರಕರ್, ಸುನೀಲ್ ಅನ್ವೇಕರ್, ಪ್ರಮೋದ್ ತಳೇಕರ್, ಸಂತೋಷ್ ಕಲ್ಗುಟ್ಕರ್, ಮಂಜುನಾಥ್ ಅನ್ವೇಕರ್, ಸಂಗೀತ ಗೋವೆಕರ್ ಅವರು `ಚಿರಾಗ್ ಕೋಠಾರಕರ್ ಅವರ ತಪ್ಪಿಲ್ಲ’ ಎಂದು ಸಮರ್ಥಿಸಿಕೊಂಡರು.