ಕಾರವಾರದ ರೀಶೆಲ್ ಡಿಸೋಜಾ ಆತ್ಮಹತ್ಯೆ ನಂತರ ಪರಾರಿಯಾಗಿದ್ದ ಚಿರಾಗ ಕೋಠಾರಕರ್ ಚೆನೈಯಲ್ಲಿರುವ ಅಂಕಲ್ ಮನೆಯಲ್ಲಿ ಅಡಗಿದ್ದು ಗೊತ್ತಾಗಿದೆ. ಈ ಹಿನ್ನಲೆ ಪೊಲೀಸರು ಅಲ್ಲಿಗೆ ಹೋಗಿ ಚಿರಾಗ ಕೋಠಾರಕರ್ ಅವರನ್ನು ವಶಕ್ಕೆಪಡೆದಿದ್ದಾರೆ.
ಕಾರವಾರದ ಕದ್ರಾದ ರಿಶೇಲ್ ಡಿಸೋಜಾ ಅವರು ಆತ್ಮಹತ್ಯೆಗೆ ಶರಣಾಗಿದ್ದರು. ಆಕೆಯನ್ನು ಪ್ರೀತಿಸುತ್ತಿದ್ದ ಚಿರಾಗ ಕೋಠಾರಕರ್ ಅವರ ಕಾಟ ಸಹಿಸಲಾಗದೇ ರೀಶೆಲ್ ಡಿಸೋಜಾ ಸಾವನಪ್ಪಿದ ಬಗ್ಗೆ ಆರೋಪಿಸಲಾಗಿತ್ತು. ಅದಾದ ನಂತರ ರೀಶೆಲ್ ಡಿಸೋಜಾ ಮೇಲೆ ಅತ್ಯಾಚಾರ ನಡೆದ ಬಗ್ಗೆ ಅವರ ಕುಟುಂಬದವರು ಆರೋಪಿಸಿದ್ದರು. ಚಿರಾಗ ಕೋಠಾರಕರ್ ಬಂಧನಕ್ಕೆ ಆಗ್ರಹಿಸಿ ಭಾರೀ ಪ್ರಮಾಣದಲ್ಲಿ ಪ್ರತಿಭಟನೆಗಳು ನಡೆದಿದ್ದವು.
ಆರೋಪಿ ಚಿರಾಗ ಕೋಠಾರಕರ್ ಜಿಲ್ಲಾ ಪಂಚಾಯತ ಮಾಜಿ ಸದಸ್ಯೆಯೂ ಆಗಿರುವ ಜೆಡಿಎಸ್ ಮುಖಂಡೆ ಚೈತ್ರಾ ಕೋಠಾರಕರ್ ಪುತ್ರರಾಗಿರುವ ಕಾರಣ ಪ್ರಕರಣ ಇನ್ನಷ್ಟು ಗಂಭೀರವಾಗಿತ್ತು. ಜೊತೆಗೆ ವಿವಿಧ ರಾಜಕೀಯ ಒತ್ತಡಗಳು ಕೆಲಸ ಮಾಡಿದ್ದವು. ಅದರ ಪರಿಣಾಮ ಈ ಪ್ರಕರಣದಲ್ಲಿ ಪಿಸೈ ಸುನೀಲ ಬಂಡಿವಡ್ಡರ್ ಅವರನ್ನು ಅಮಾನತು ಮಾಡಲಾಗಿತ್ತು. ಸದ್ಯ ಚಿರಾಗ ಕೊಠಾರಕರ ಅವರನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.
ಕಳೆದ ಎರಡು ವಾರಗಳಿಂದ ಪೊಲೀಸ್ ಅಧಿಕಾರಿಗಳ ತಂಡವು ಗೋವಾ, ಮಹಾರಾಷ್ಟ್ರ ಸೇರಿದಂತೆ ಹೊರ ರಾಜ್ಯಗಳಲ್ಲಿ ಚಿರಾಗ ಕೋಠಾರಕರ್ ಅವರಿಗಾಗಿ ಹುಡುಕಾಟ ನಡೆಸಿದ್ದು, ಈ ದಿನ ಚಿರಾಗ್ ಸಿಕ್ಕಿ ಬಿದ್ದಿದ್ದಾರೆ.