ಗೋಕರ್ಣ ಕಡಲತೀರ ಬಳಿ ನಿಲ್ಲಿಸಿದ್ದ ಕಾರಿನ ಮೇಲೆ ಕಿಡಿಗೇಡಿಗಳು ಕಡ್ಡಿ ಗೀರಿದ್ದಾರೆ. ಇದರಿಂದ ವಾಹನ ಮಾಲಕರು ಗಲಾಟೆ ಮಾಡಿದ್ದಾರೆ.
ಚಿಕ್ಕಮಂಗಳೂರಿನ ಕುಟುಂಬವೊoದು ಬುಧವಾರ ಗೋಕರ್ಣ ಪ್ರವಾಸಕ್ಕೆ ಬಂದಿತ್ತು. ಆ ಕುಟುಂಬದವರು ತಮ್ಮ ಕಾರನ್ನು ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿ ಶುಲ್ಕ ಪಾವತಿ ಮಾಡಿದ್ದರು. ಕಡಲ ತೀರದ ಸೊಬಗು ಸವಿದು ಮರಳಿದ ಕುಟುಂಬಕ್ಕೆ ಆಘಾತ ಕಾದಿತ್ತು. ಅವರ ಕಾರಿನ ಮೇಲೆ ಕಿಡಿಗೇಡಿಗಳು ಗೀಚಿದ್ದರು. ಇದರಿಂದ `30 ಸಾವಿರ ರೂ ಹಾನಿ ಆಗಿದ್ದು, ಅದನ್ನು ಕಾರು ನಿಲುಗಡೆಗೆ ಶುಲ್ಕಪಡೆದವರು ಭರಿಸಿಕೊಡಬೇಕು’ ಎಂದು ಪ್ರವಾಸಿಗರು ಗಲಾಟೆ ಮಾಡಿದರು.
`ಲಕ್ಷಾಂತರ ರೂ ವೆಚ್ಚ ಮಾಡಿ ಕಾರು ಖರೀದಿಸುತ್ತೇವೆ. ಅದನ್ನು ಸುರಕ್ಷಿತವಾಗಿ ನಿಲ್ಲಿಸಲು ಶುಲ್ಕವನ್ನು ಕೊಡುತ್ತೇವೆ. ಅದಾಗಿಯೂ, ಶುಲ್ಕಪಡೆದವರು ಗಮನಹರಿಸಿಲ್ಲ’ ಎಂದು ಅಸಮಧಾನವ್ಯಕ್ತಪಡಿಸಿದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಸಮಾಧಾನ ಮಾಡಿದ್ದು, ಶುಲ್ಕ ವಸೂಲಿ ಮಾಡಿದ ಟೆಂಡರದಾರರಿAದ ಅಲ್ಪ ಪ್ರಮಾಣದ ಪರಿಹಾರ ಕೊಡಿಸಿದರು. ಅದಾದ ನಂತರ ಪಕ್ಕದಲ್ಲಿದ್ದ ಬೇರೆ ರಾಜ್ಯದ ಕಾರಿಗೂ ಕಿಡಿಗೇಡಿಗಳು ಕಡ್ಡಿ ತಾಗಿಸಿರುವುದು ಗಮನಕ್ಕೆ ಬಂದಿದ್ದು, ಆ ಕಾರಿನಲ್ಲಿದ್ದವರು ಸಹ ಗಲಾಟೆ ಶುರು ಮಾಡಿದರು. ಅವರು ಪರಿಹಾರಕ್ಕಾಗಿ ಪಟ್ಟುಹಿಡಿದಿದ್ದು, ಕೊನೆಗೆ ರಾಜಿ ಸೂತ್ರಕ್ಕೆ ಒಪ್ಪಿದರು.