ಕಾರವಾರದ ಚಿರಾಗ್ ಕೋಠಾರಕರ್ ಅವರು ಕದ್ರಾದ ರೀಶೆಲ್ ಡಿಸೋಜಾ ಅವರನ್ನು ಪ್ರೀತಿಸುವಂತೆ ಬೆನ್ನು ಬಿದ್ದಿದ್ದು, ಚಿರಾಗ ಕೋಠಾರಕರ್ ಅವರ ಕಾಟ ಸಹಿಸಲಾಗದೇ ರೀಶೆಲ್ ಡಿಸೋಜಾ ಅವರು ಸಾವಿಗೆ ಶರಣಾಗಿದ್ದಾರೆ.
ಕಾರವಾರದ ಬಾಡ ನಂದನಗದ್ದಾದಲ್ಲಿ ಚಿರಾಗ ಚಂದ್ರಹಾಸ ಕೋಠಾರಕರ್ ಅವರು ವಾಸವಾಗಿದ್ದಾರೆ. ಚಿರಾಗ ಕೋಟಾರಕರ್ ಅವರು ಕಾರವಾರ ಕದ್ರಾದ ರೀಶೆಲ್ ಡಿಸೋಜಾ (20) ಅವರನ್ನು ಪ್ರೀತಿಸುತ್ತಿದ್ದರು. ರೀಶೆಲ್ ಡಿಸೋಜಾ ಅವರು ಕಾಲೇಜು ವಿದ್ಯಾರ್ಥಿಯಾಗಿದ್ದು, ಅವರು ಕಾಲೇಜಿಗೆ ಹೋಗಿ ಬರುವಾಗಲೆಲ್ಲ ಚಿರಾಗ ಕೋಟಾರಕರ್ ಅಡ್ಡಗಟ್ಟಿ ಪ್ರೀತಿಸುವಂತೆ ಕಾಡಿಸುತ್ತಿದ್ದರು. ಆದರೆ, ಆ ಪ್ರೀತಿಯನ್ನು ರೀಶೆಲ್ ಡಿಸೋಜಾ ಅವರು ಮನ್ನಿಸಿರಲಿಲ್ಲ.
ಅದಾಗಿಯೂ, ಚಿರಾಗ ಕೋಠಾರಕರ್ ಅವರು ರೀಶೆಲ್ ಡಿಸೋಜಾ ಅವರನ್ನು ಬಿಟ್ಟಿರಲಿಲ್ಲ. ರೀಶೆಲ್ ಡಿಸೋಜಾ ಅವರಿಗೆ ಚಿರಾಗ ಕೋಠಾಕರ್ ಅವರು ಪದೇ ಪದೇ ಫೋನ್ ಮಾಡುತ್ತಿದ್ದರು. ರೀಶೆಲ್ ಡಿಸೋಜಾ ಅವರ ಮನೆಯವರೆಗೂ ಬಂದು ಸುತ್ತಾಡುತ್ತಿದ್ದರು. ರೀಶೆಲ್ ಡಿಸೋಜಾ ಅವರನ್ನು ಅನಗತ್ಯವಾಗಿ ಕಾಡಿಸುತ್ತಿದ್ದರು.
ಆದರೆ, ಚಿರಾಗ ಕೋಠಾರಕರ್ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯ ಇಲ್ಲದ ಕಾರಣ ರೀಶೆಲ್ ಡಿಸೋಜಾ ಆ ಪ್ರೀತಿಯನ್ನು ನಿರಾಕರಿಸಿದ್ದರು. ಚಿರಾಗ ಕೋಠಾರಕರ್ ಅವರಿಂದ ಆಗುವ ಹಿಂಸೆಯ ಬಗ್ಗೆ ತಂದೆ ಕಿಸ್ಟೋಡ್ ಡಿಸೋಜಾ ಅವರ ಬಳಿಯೂ ಹೇಳಿಕೊಂಡಿದ್ದರು. ಪ್ರೀತಿ ನಿರಾಕರಿಸಿದ ರೀಶೆಲ್ ಡಿಸೋಜಾ ಅವರಿಗೆ ಚಿರಾಗ ಕೋಠಾರಕರ್ ಅತ್ಯಂತ ಕೆಟ್ಟದಾಗಿ ನಿಂದಿಸಿದರು. `ನೀ ಬದುಕಿ ಪ್ರಯೋಜನವೇ ಇಲ್ಲ. ಬದುಕುವುದಕ್ಕಿಂತ ಸತ್ತರೆ ಒಳಿತು’ ಎಂದು ಬೈದಿದ್ದರು.
ಚಿರಾಗ ಕೋಠಾರಕರ್ ಅವರ ಬೈಗುಳದಿಂದ ಬೇಸತ್ತ ರೀಶೆಲ್ ಡಿಸೋಜಾ ಅವರು ಆತ್ಮಹತ್ಯೆಯ ನಿರ್ಧಾರ ಮಾಡಿದರು. ಜನವರಿ 9ರಂದು ಬೆಡ್ ರೂಮಿನ ಒಳಗೆ ಪ್ರವೇಶಿದ ಅವರು ಫ್ಯಾನಿಗೆ ನೇಣು ಹಾಕಿಕೊಂಡು ಕೊನೆಯುಸಿರೆಳೆದರು. ಈ ಎಲ್ಲಾ ವಿದ್ಯಮಾನಗಳ ಬಗ್ಗೆ ಕಿಸ್ಟೋಡ್ ಡಿಸೋಜಾ ಅವರು ಮಾಹಿತಿ ನೀಡಿದರು.