ಕುಮಟಾದ ಕೇಶವ ಅಂಬಿಗ ಕುಟುಂಬದ ಬಹಿಷ್ಕಾರದ ವಿಷಯ ಹೊಸ ತಿರುವುಪಡೆದಿದೆ. `ಆ ಕುಟುಂಬಕ್ಕೆ ಬಹಿಷ್ಕಾರ ಹಾಕಿಲ್ಲ’ ಎಂದು ಊರಿನವರು ಹೇಳಿದ್ದು, ಅದನ್ನು ಕೇಶವ ಅಂಬಿಗ ಕುಟುಂಬದವರು ಅಲ್ಲಗಳೆದಿದ್ದಾರೆ.
`ಬಹಿಷ್ಕಾರದ ವಿಷಯ ಪ್ರಸ್ತಾಪಿಸಿದರೆ ಅದಕ್ಕೆ ಕೋಮು ಬಣ್ಣ ಬಡಿಯಲಾಗುತ್ತಿದೆ. ಮತಾಂತರದ ವಿಷಯ ಮುಂದೆ ಮಾಡಿ ತನಿಖೆಯ ದಿಕ್ಕು ತಪ್ಪಿಸಲಾಗುತ್ತಿದೆ’ ಎಂದು ಕೇಶವ ಅಂಬಿಗ ಅವರು ದೂರಿದ್ದಾರೆ. `75 ಕುಟುಂಬದವರು ತಮ್ಮೊಂದಿಗೆ ಮಾತನಾಡುತ್ತಿಲ್ಲ. ಮಾತನಾಡಿದರೆ 5 ಸಾವಿರ ರೂ ದಂಡ ಕಟ್ಟಬೇಕು’ ಎಂದು ಗಂಗಾಧರ ಅಂಬಿಗ ಅವರು ಬೆದರಿಕೆ ಹಾಕಿದ್ದಾರೆ. ಹೀಗಾಗಿ 9 ತಿಂಗಳಿನಿAದ ನಮ್ಮ ಸಮುದಾಯದ ಯಾರೂ ನೆರವಿಗೆ ಬಂದಿಲ್ಲ’ ಎಂದವರು ಅಳಲು ತೋಡಿಕೊಂಡಿದ್ದಾರೆ.
`ನ್ಯಾಯಕ್ಕಾಗಿ ನಾವು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರವನ್ನು ಸಂಪರ್ಕಿಸಿದ್ದು, ಅಲ್ಲಿನ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಅವರು ಕ್ರಿಶ್ಚಿಯನ್ ಎಂಬ ಕಾರಣಕ್ಕೆ ಮತಾಂತರದ ಆರೋಪ ಮಾಡುತ್ತಿದ್ದಾರೆ. ನಮ್ಮ ಊರಿಗೆ ಸಂಬAಧವೇ ಇಲ್ಲದ ಮಿರ್ಜಾನಿನ ಗಣೇಶ ಅಂಬಿಗ ಅವರು ಅನಗತ್ಯ ಆರೋಪ ಮಾಡುತ್ತಿದ್ದಾರೆ’ ಎಂದು ದೂರಿದ್ದಾರೆ.
ಆಗ್ನೇಲ್ ರೋಡ್ರಿಗಸ್ ಮಾತನಾಡಿ `ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರ ಯಾವುದೇ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಲ್ಲ’ ಎಂದರು. ನಿವೃತ್ತ ಸರಕಾರಿ ನೌಕರ ನಾಗೇಶ್ ಹುಲಾಸ್ವಾರ ಮಾತನಾಡಿ ಗಣೇಶ ಅಂಬಿಗ ಅವರ ವಿರುದ್ಧ ಕಿಡಿಕಾರಿದರು. ಪ್ರಮುಖರಾದ ಕೃಷ್ಣ ಪಟಗಾರ, ಗಣಪತಿ ಅಂಬಿಗ, ಸುಬ್ಬಿ ಅಂಬಿಗ, ಸುಧಾಕರ್ ನಾಯ್ಕ, ನಾಗೇಶ್ ಹುಲಾಸ್ವಾರ, ಕೃಷ್ಣ ನಾರಾಯಣ ಪಟಗಾರ, ಹನುಮ ಪಟಗಾರ, ಪುರ್ಸು ಹರಿಕಂತ್ರ, ರತ್ನಾಕರ್ ಭಟ್, ಈಶ್ವರ್ ನಾಯ್ಕ್ ಇದ್ದರು.