ಕಾರವಾರದ ವೈದ್ಯಕೀಯ ಸಿಬ್ಬಂದಿಯೊಬ್ಬರು ಅಡುಗೆ ಮಾಡುವಾಗ ಬೆಂಕಿ ತಗುಲಿ ಸಾವನಪ್ಪಿದ್ದಾರೆ. ಸುಟ್ಟ ಗಾಯಗಳಿಂದ ನರಳಾಡುತ್ತಿದ್ದ ಅವರನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಕಾರವಾರದ ಸಾಯಿನಗರ ಬಳಿಯ ಗಿಂಡಿವಾಡದಲ್ಲಿ ಜೋಸ್ನಾ ವಿಜಯ ಮಾಂಗ್ರೇಕರ್ (38) ಅವರು ವಾಸವಾಗಿದ್ದರು. ವೈದ್ಯಕೀಯ ಸೇವೆಯಲ್ಲಿ ಪರಿಣಿತಿಪಡೆದಿದ್ದ ಜೋಸ್ನಾ ಮಾಂಗ್ರೇಕರ್ ಅವರು ಹಲ್ಲಿನ ಡಾಕ್ಟರ್ ಒಬ್ಬರ ಬಳಿ ಕೆಲಕ್ಕಿದ್ದರು. 2025ರ ಡಿಸೆಂಬರ್ 12ರಂದು ಅವರು ಮನೆಯಲ್ಲಿ ಅಡುಗೆ ಮಾಡುವಾಗ ಸೀರೆ ಸೆರಗಿಗೆ ಬೆಂಕಿ ತಗುಲಿತು. ಬೆಂಕಿಯ ಜ್ವಾಲೆ ಅವರ ಇಡೀ ದೇಹವನ್ನು ಆವರಿಸಿತು.
ನೀರು ತಾಗಿಸಲು ಇರಿಸಿದ್ದ ಗ್ಯಾಸ್ ಸ್ಟೌವ್ ಉರಿಯೂ ಅವರ ದೇಹ ಸ್ಪರ್ಶಿಸಿದ್ದು, ತೊಡೆ, ಬುಜ, ಕೈ ಸೇರಿ ವಿವಿಧ ಕಡೆ ಗಂಭೀರ ಪ್ರಮಾಣದಲ್ಲಿ ಗಾಯವಾಗಿತ್ತು. ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆದ ಅವರನ್ನು ಉನ್ನತ ಚಿಕಿತ್ಸೆಗಾಗಿ ಮಂಗಳೂರು ಕೆ ಎಸ್ ಹೆಗಡೆ ಆಸ್ಪತ್ರೆಗೆ ಸೇರಿಸಲಾಯಿತು.
ಆದರೆ, ಒಂದುವರೆ ತಿಂಗಳುಗಳ ಕಾಲ ನೋವು ಅನುಭವಿಸಿದ ಅವರು ಜನವರಿ 30ರ ರಾತ್ರಿ ಕೊನೆಯುಸಿರೆಳೆದರು. ಅವರ ಸಾವಿನ ಬಗ್ಗೆ ಸಿದ್ದಾಂತ ಮಹದೇವ್ ಮಾಂಗ್ರೇಕರ್ ಅವರು ಕಾರವಾರ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದರು.
`ಅಡುಗೆ ಮಾಡುವಾಗ ಮುನ್ನಚ್ಚರಿಕೆವಹಿಸಿ’