ವಕ್ ಪ್ರಂ ಹೋಂ ಕೆಲಸಕ್ಕೆ ಸೇರಿದ ದಿನವೇ 500ರೂ ಸಂಪಾದಿಸಿದ ಮುಂಡಗೋಡಿನ ಅಕ್ಷಯ ರೇವಣಕರ್ ಅವರು ಅದಾದ ನಂತರ ಆಮೀಷಕ್ಕೆ ಒಳಗಾಗಿ 1.57 ಲಕ್ಷ ರೂ ಕಳೆದುಕೊಂಡಿದ್ದಾರೆ!
ಮುoಡಗೋಡದ ಮಳಗಿಯಲ್ಲಿ ಅಕ್ಷಯ ಸುರೇಶ ರೇವಣಕರ್ ಅವರು ವಾಸವಾಗಿದ್ದಾರೆ. ಡಿಸೆಂಬರ್ 30ರಂದು ಅವರು ಟೆಲಿಗ್ರಾಂ ಬಳಸುವಾಗ `ವರ್ಕ ಪ್ರಂ ಹೋಂ’ ಎಂಬ ಜಾಹೀರಾತು ನೋಡಿದ್ದಾರೆ. ಆ ಬಗ್ಗೆ ಅವರು ವಿಚಾರಿಸಿದಾಗ ನಿಶಾ ಮೇತ್ರಾ ಎಂಬಾತರು ನಯವಾಗಿ ಮಾತನಾಡಿದ್ದಾರೆ. ನಿಶಾ ಮೇತ್ರಾ ಅವರು ಸುರೇಶ ಮೆಲ್ತೋರಾ ಎಂಬಾತರನ್ನು ಪರಿಚಯಿಸಿದ್ದು, ಅವರ ಸೂಚನೆ ಮೇರೆಗೆ ಅಕ್ಷಯ ರೇವಣಕರ್ ಅವರು `ವರ್ಕ ಪ್ರಂ ಹೋಂ’ ಕೆಲಸ ಶುರು ಮಾಡಿದ್ದಾರೆ.
ಕೆಲಸಕ್ಕೆ ಸೇರಿದ ಮೊದಲ ದಿನ ಅಕ್ಷಯ ರೇವಣಕರ್ ಅವರಿಗೆ ವೆಬ್ಸೈಟಿನಲ್ಲಿರುವ ಉತ್ಪನ್ನಗಳ ಬಗ್ಗೆ ರಿವ್ಯು ಬರೆಯುವ ಸೂಚನೆ ಬಂದಿದೆ. ಆ ಕೆಲಸವನ್ನು ಅಚ್ಚುಕಟ್ಟಾಗಿ ಪೂರೈಸಿದ ಕಾರಣ ಅಕ್ಷಯ ರೇವಣಕರ್ ಅವರ ಖಾತೆಗೆ 500ರೂ ಜಮಾ ಆಗಿದೆ. ಅದಾದ ನಂತರ ನಿಶಾ ಮೇತ್ರಾ ಅವರು `ತಾವು ಹೇಳಿದ ಕಡೆ ಹಣ ಹೂಡಿಕೆ ಮಾಡಿದರೆ ಒಳ್ಳೆಯ ಲಾಭ ಸಿಗಲಿದೆ’ ಎಂದು ನಂಬಿಸಿದ್ದಾರೆ. ಆ ಮಾತು ನಂಬಿದ ಅಕ್ಷಯ ರೇವಣಕರ್ ಅವರು 700ರೂ ಹೂಡಿಕೆ ಮಾಡಿದ್ದು, ಅದಕ್ಕೆ ಪ್ರತಿಯಾಗಿ ಅವರಿಗೆ 920ರೂ ಸಿಕ್ಕಿದೆ.
ಹಣ ಸಿಕ್ಕಿದ ನಂಬಿಕ ಆಧಾರದಲ್ಲಿಯೇ ಅಕ್ಷಯ ರೇವಣಕರ್ ಅವರು 157,800ರೂ ಹೂಡಿಕೆ ಮಾಡಿದ್ದಾರೆ. ಆದರೆ, ಆಗ ಆ ಹಣವೂ ಮರಳಿ ಬಂದಿಲ್ಲ. ಲಾಭವೂ ಸಿಕ್ಕಿಲ್ಲ. ಮೋಸ ಹೋಗಿರುವುದನ್ನು ಅರಿತ ಅವರು ಸೈಬರ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಾಕಷ್ಟು ಜಾಗೃತಿ ಮೂಡಿಸಿದರೂ ಮೋಸ ಹೋದ ಅಕ್ಷಯ ಅವರ ಬಗ್ಗೆ ಅನೇಕರು ಮರುಕವ್ಯಕ್ತಪಡಿಸಿದ್ದಾರೆ.
`ಆಮೀಷಕ್ಕೆ ಒಳಗಾಗಬೇಡಿ. ಮೋಸ ಹೋಗಬೇಡಿ’