ದೇವರ ಪೂಜೆಗಾಗಿ ಹೂವು ಕೀಳುತ್ತಿದ್ದ ಕಾರವಾರದ ದೇವಪ್ಪ ಭಾನಾವಳಿಕರ್ ಅವರು ಮಹಡಿ ಮೇಲಿಂದ ಬಿದ್ದು ಸಾವನಪ್ಪಿದ್ದಾರೆ.
ಕಾರವಾರದ ಕೋಡಿಭಾಗ ಸರ್ವೋದಯ ನಗರದಲ್ಲಿ ದೇವಪ್ಪ ಈರು ಭಾನಾವಳಿಕರ್ (77) ಅವರು ವಾಸವಾಗಿದ್ದರು. ಸರ್ಕಾರಿ ನೌಕರಿಯಲ್ಲಿದ್ದ ಅವರು ನಿವೃತ್ತಿ ನಂತರ ನೆಮ್ಮದಿಯ ಬದುಕು ಕಂಡಿಕೊoಡಿದ್ದರು. ಮನೆ ಮಹಡಿ ಮೇಲೆ ಅವರು ಹೂವಿನ ಗಿಡಗಳನ್ನು ಬೆಳೆದಿದ್ದರು. ನಿತ್ಯದ ಪೂಜೆಗಾಗಿ ಅವರು ಅಲ್ಲಿಂದಲೇ ಹೂವುಪಡೆಯುತ್ತಿದ್ದರು.
ಫೆಬ್ರವರಿ 4ರಂದು ದೇವರ ಪೂಜೆಗಾಗಿ ಅವರು ಹೂವು ಕೀಳಲು ಮಹಡಿ ಮೇಲೆ ಹೋಗಿದ್ದರು. ಹೂವು ಕೀಳುವಾಗ ಮಹಡಿ ಮೇಲಿಂದ ಕೆಳಗೆ ಬಿದ್ದರು. ಕಾಲು ಜಾರಿ ಬಿದ್ದ ಪರಿಣಾಮ ತಲೆಗೆ ಗಂಭೀರ ಪ್ರಮಾಣದಲ್ಲಿ ಗಾಯವಾಯಿತು. ಕಾರವಾರ ಜಿಲ್ಲಾಸ್ಪತ್ರೆಗೆ ಅವರನ್ನು ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎಜೆ ಆಸ್ಪತ್ರೆ ಕರೆದೊಯ್ಯಲಾಯಿತು. ಆಗ, ಅಲ್ಲಿನ ವೈದ್ಯರು `ತಲೆಯೊಳಗೆ ರಕ್ತ ಹೆಪ್ಪುಗಟ್ಟಿದೆ’ ಎಂಬ ವಿಷಯ ತಿಳಿಸಿದರು.
`ಬಿಪಿ ಹಾಗೂ ಶುಗರ್ ಪ್ರಮಾಣ ಕಡಿಮೆ ಆಗಿದ್ದರಿಂದ ಚಿಕಿತ್ಸೆ ನೀಡುವುದು ಕಷ್ಟ’ ಎಂದು ಆಸ್ಪತ್ರೆಯವರು ಹೇಳಿದರು. ಹೀಗಾಗಿ ಫೆ 6ರಂದು ದೇವಪ್ಪ ಭಾನಾವಳಿಕರ್ ಅವರನ್ನು ಮತ್ತೆ ಕಾರವಾರ ಆಸ್ಪತ್ರೆಗೆ ಕರೆ ತರಲಾಯಿತು. ಫೆಬ್ರವರಿ 7ರಂದು ಅವರು ಸಾವನಪ್ಪಿದರು. ತಂದೆಯ ಸಾವಿನ ಬಗ್ಗೆ ನಿವೃತ್ತ ಸೈನಿಕ ನಾಗರಾಜ ಭಾನಾವಳಿಕರ್ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕಾರವಾರ ಶಹರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದರು.
`ಅಪಾಯಕಾರಿ ಸ್ಥಳಗಳಿಗೆ ಹೋಗಬೇಡಿ’