ಮುಂಡಗೋಡ ರಾಮಾಪುರದ ಸಂತೋಷ ಕಾರಗಿ ಅವರು ಸ್ನೇಹಿತ ಮನೆಯ ಕಾರ್ಯಕ್ರಮಕ್ಕೆ ಹೋಗದ ಕಾರಣ ಹೊಡತ ತಿಂದಿದ್ದಾರೆ. ಸಂಬAಧಿಯೂ ಆಗಿರುವ ಸ್ನೇಹಿತ ವಿಜಯಕುಮಾರ ಕಾರಗಿ ಅವರ ಮನೆ ನೋಡಲು ಹುಡುಗಿ ಕಡೆಯುವರು ಆಗಮಿಸಿದ್ದು, ಆ ದಿನ ಆಮಂತ್ರಣ ಇಲ್ಲದ ಕಾರಣ ಸಂತೋಷ ಕಾರಗಿ ಅವರು ಹೋಗಿರಲಿಲ್ಲ. ಇದೇ ವಿಷಯಕ್ಕೆ ಸಿಟ್ಟಾದ ಬಸವರಾಜ ಕಾರಗಿ, ವಿನಾಯಕ ಕಾರಗಿ ಹಾಗೂ ಪ್ರದೀದ ಕಲವತ್ತಿ ಸೇರಿ ಸಂತೋಷ ಕಾರಗಿ ಅವರ ಮೇಲೆ ಕೈ ಮಾಡಿದ್ದಾರೆ.
ಮುಂಡಗೋಡಿನ ರಾಮಾಪುರದಲ್ಲಿ ಸಂತೋಷ ಸಿದ್ದಲಿಂಗಪ್ಪ ಕಾರಗಿ ಅವರು ಕೃಷಿ ಕೆಲಸ ಮಾಡಿಕೊಂಡಿದ್ದಾರೆ. ಫೆಬ್ರವರಿ 19ರಂದು ಅವರು ಬೈಕಿನ ಮೇಲೆ ಹೊರಟಾಗ ರಾಮಾಪುರದ ಬಸವರಾಜ ಕಾರಗಿ ಹಾಗೂ ವಿನಾಯಕ ಕಾರಗಿ ಅವರು ಬೈಕಿಗೆ ಅಡ್ಡಲಾಗಿ ಕೈ ಮಾಡಿದ್ದಾರೆ. ಆಗ, ಸಂತೋಷ ಕಾರಗಿ ಅವರು ಬೈಕ್ ನಿಲ್ಲಿಸಿದ್ದು, `ವಿಜಯಕುಮಾರ ಕಾರಗಿ ಅವರ ಮನೆ ನೋಡಲು ಹೆಣ್ಣಿನ ಕಡೆಯವರು ಬಂದಾಗ ನೀ ಏಕೆ ಬರಲಿಲ್ಲ?’ ಎಂದು ಪ್ರಶ್ನಿಸಿದ್ದಾರೆ. ಆಗ, `ವಿಜಯಕುಮಾರ ನನಗೆ ಆಮಂತ್ರಣ ನೀಡಿಲ್ಲ’ ಎಂದು ಸಂತೋಷ ಕಾರಗಿ ಅವರು ಹೇಳಿದ್ದಾರೆ.
ಆಗ, ಅಲ್ಲಿದ್ದ ಲಕ್ಷವ್ವ ಕಾರಗಿ ಅವರು ಸಂತೋಷ ಕಾರಗಿ ಅವರಿಗೆ ಕೆಟ್ಟದಾಗಿ ಬೈದಿದ್ದಾರೆ. ಬಸವರಾಜ ಕಾರಗಿ ಅವರು ಸಹ ಸಂತೋಷ ಕಾರಗಿ ಅವರನ್ನು ನಿಂದಿಸಿದ್ದಾರೆ. ಅದೇ ಸಿಟ್ಟಿನಲ್ಲಿ ಎಲ್ಲರೂ ಮನೆಗೆ ಹೋಗಿದ್ದಾರೆ. ಮರುದಿನ ಸಂತೋಷ ಕಾರಗಿ ಅವರು ತಮ್ಮ ಬೈಕಿನಲ್ಲಿ ಹನುಮಂತ ಕಾರಗಿ ಹಾಗೂ ನಿಂಗಪ್ಪ ಬಾಳೆಕಾಯಿ ಅವರನ್ನು ಕೂರಿಸಿಕೊಂಡು ಹೊರಟಿದ್ದು, ಕಮಲವ್ವಾ ಕಾರಗಿ ಅವರ ಮನೆ ಬಳಿ ನಿಂತಿದ್ದ ಬಸವರಾಜ ಕಾರಗಿ ಅವರು ಆ ಬೈಕಿಗೆ ಅಡ್ಡಲಾಗಿ ಕೈ ಮಾಡಿದ್ದಾರೆ. ಆಗ, ಸಂತೋಷ ಕಾರಗಿ ಅವರು ಬೈಕ್ ನಿಲ್ಲಿಸಿಲ್ಲ. ಇದರಿಂದ ಸಿಟ್ಟಾದ ಲಕ್ಷವ್ವ ಕಾರಗಿ, ವಿನಾಯಕ ಕಾರಗಿ ಹಾಗೂ ಶಿವಮೊಗ್ಗದ ಪ್ರದೀಪ ಕಲವತ್ತಿ ಸೇರಿ ಬೈಕನ್ನು ಹಿಂಬಾಲಿಸಿಕೊAಡು ಬಂದಿದ್ದಾರೆ.
ಸAತೋಷ ಕಾರಗಿ ಅವರು ಮನೆಗೆ ಬಂದಿದ್ದು, ಅಲ್ಲಿಗೂ ಆಗಮಿಸಿದ ಬಸವರಾಜ ಕಾರಗಿ ಕೆಟ್ಟದಾಗಿ ಬೈದಿದ್ದಾರೆ. ಅವರ ಜೊತೆಯಿದ್ದ ಲಕ್ಷವ್ವ ಕಾರಗಿ, ವಿನಾಯಕ ಕಾರಗಿ ಹಾಗೂ ಪ್ರದೀಪ ಕಲವತ್ತಿ ಸೇರಿ ಹನುಮಂತ ಕಾರಗಿ ಅವರಿಗೆ ದೊಣ್ಣೆಯಿಂದ ಹೊಡೆದಿದ್ದಾರೆ. ಬಿಡಿಸಲು ಹೋದ ಸಂತೋಷ ಕಾರಗಿ ಅವರ ಮೇಲೆಯೂ ದಾಳಿ ಮಾಡಿದ್ದಾರೆ. ಊರಿನ ಜನ ಆಗಮಿಸಿ ಈ ಹೊಡೆದಾಟ ಬಿಡಿಸಿದ್ದು, ತಮಗಾದ ಅನ್ಯಾಯದ ಬಗ್ಗೆ ಸಂತೋಷ ಕಾರಗಿ ಅವರು ಪೊಲೀಸರ ಮೊರೆ ಹೋಗಿದ್ದಾರೆ. ಮುಂಡಗೋಡು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಶುರು ಮಾಡಿದ್ದಾರೆ.