ಸಿದ್ದಾಪುರ ಬಿದ್ರಕಾನಿನ ಸಾತ್ವಿಕ್ ಹೆಗಡೆ ಅವರು ಪ್ರೀತಿ-ಪ್ರೇಮದ ವಿಷಯವಾಗಿ ತಲೆಕೆಡಿಸಿಕೊಂಡಿದ್ದು, ಅದೇ ನೋವಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸಿದ್ದಾಪುರ ಬಿದ್ರಕಾನ್ ಬಳಿಯ ಮುಂಡುಸರದ ಸಾತ್ವಿಕ ಶೇಷಗಿರಿ ಹೆಗಡೆ (25) ಅವರು ವಾಸವಾಗಿದ್ದರು. ಗ್ರಾಫಿಕ್ ಡಿಸೈನರ್ ಆಗಬೇಕು ಎಂದು ಕನಸು ಕಂಡಿದ್ದ ಅವರು ಅದೇ ವಿಷಯವಾಗಿ ತರಬೇತಿಪಡೆಯುತ್ತಿದ್ದರು. ದಿನದ ಹೆಚ್ಚಿನ ಸಮಯ ಅವರು ತಮ್ಮ ಮನೆಯ ಕೋಣೆಯಲ್ಲಿ ಬಂಧಿಯಾಗಿರುತ್ತಿದ್ದರು. ಅಲ್ಲಿಯೇ ಅವರು ತಮ್ಮ ಕಲಿಕೆಯ ಬಗ್ಗೆ ಅಭ್ಯಾಸ ಮಾಡುತ್ತಿದ್ದರು.
ಈ ನಡುವೆ ಸಾತ್ವಿಕ್ ಹೆಗಡೆ ಅವರು ಪ್ರೀತಿ-ಪ್ರೇಮದ ವಿಷಯವಾಗಿ ತಲೆಕೆಡಿಸಿಕೊಂಡಿದ್ದರು. ಕೊಂಚ ಮಂಕಾಗಿದ್ದ ಅವರನ್ನು ಕುಟುಂಬದವರು ಹೆಚ್ಚಿಗೆ ಪ್ರಶ್ನೆ ಮಾಡಿರಲಿಲ್ಲ. ಬೇಸರದಲ್ಲಿದ್ದ ಸಾತ್ವಿಕ್ ಹೆಗಡೆ ಅವರಿಗೆ ಸೂಕ್ತ ರೀತಿಯಲ್ಲಿ ಆಪ್ತ ಸಮಾಲೋಚನೆ ಸಿಗಲಿಲ್ಲ. ಮಾನಸಿಕ ನೆಮ್ಮದಿ ನೀಡುವ ಭರವಸೆಯ ಮಾತುಗಳು ದೊರೆಯಲಿಲ್ಲ. ಕೋಣೆಯೊಳಗೆ ಕುಳಿತು ಅಭ್ಯಾಸ ಮಾಡುತ್ತಿದ್ದ ಅವರು ಏಕಾಂಕಿಯಾಗಿದ್ದು, ಜೀವನದಲ್ಲಿ ಸೋತ ಅನುಭವಕ್ಕೆ ಒಳಗಾಗಿದ್ದರು.
ಅದೇ ನೋವಿನಲ್ಲಿ ಸಾತ್ವಿಕ್ ಹೆಗಡೆ ಅವರು ದುಡುಕು ನಿರ್ಧಾರ ಮಾಡಲು ನಿರ್ಧರಿಸಿದರು. ಪ್ಯಾಂಟಿಗೆ ಹಾಕುವ ಬೆಲ್ಟನ್ನು ಕುತ್ತಿಗೆಗೆ ಕಟ್ಟಿಕೊಂಡ ಅವರು ರೂಮಿನಲ್ಲಿದ್ದ ಫ್ಯಾನಿಗೆ ಉರುಳು ಹಾಕಿಕೊಂಡರು. ಫೆಬ್ರವರಿ 15ರ ಮಧ್ಯಾಹ್ನ ಶೇಷಗಿರಿ ಹೆಗಡೆ ಅವರು ಕೋಣೆಗೆ ಬಂದು ನೋಡುವಷ್ಟರಲ್ಲಿ ಮಗ ಸಾತ್ವಿಕ್ ಹೆಗಡೆ ಅವರು ಸಾವನಪ್ಪಿದ್ದರು.
ಮಗನನ್ನು ಕಳೆದುಕೊಂಡ ನೋವನ್ನು ಶೇಷಗಿರಿ ಹೆಗಡೆ ಅವರು ಸಿದ್ದಾಪುರ ಪೊಲೀಸರಿಗೆ ತಿಳಿಸಿದರು. ಪೊಲೀಸರು ಸ್ಥಳ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದು, ಕಾನೂನು ಪ್ರಕಾರ ಪ್ರಕರಣ ದಾಖಲಿಸಿದರು.
`ಆತ್ಮಹತ್ಯೆ ಮಾಡಿಕೊಳ್ಳುವುದು ಅಪರಾಧ’