ಕಾರವಾರಕ್ಕೆ ಹೋಗಿದ್ದ ಮುಂಡಗೋಡದ ಪ್ರಿಯಾ ರಾಠೋಡ್ ಅವರು ಕೊರಳಿನಲ್ಲಿದ್ದ ಚಿನ್ನದ ಸರ ಕಳೆದುಕೊಂಡಿದ್ದಾರೆ. ಅಪರಿಚಿತ ಬೈಕ್ ಸವಾರನೊಬ್ಬ ಅವರ ಕತ್ತಿಗೆ ಕೈ ಹಾಕಿ ಚಿನ್ನ ಅಪಹರಿಸಿದ್ದಾರೆ.
ಮುಂಡಗೋಡು ಕುಸೂರಿನ ಪ್ರಿಯಾ ರೂಪಸಿಂಗ್ ರಾಠೋಡ್ ಅವರು ಕಾರವಾರದ ಖುರ್ಸವಾಡದಲ್ಲಿ ವಾಸವಾಗಿದ್ದಾರೆ. ಅಲ್ಲಿ ಪ್ಯಾರಾಮೆಡಿಕಲ್ ವಿದ್ಯಾಬ್ಯಾಸ ಮಾಡುತ್ತಿದ್ದಾರೆ. ಫೆಬ್ರವರಿ 16ರಂದು ಮುಂಡಗೋಡಿನಿoದ ಅವರು ಕಾರವಾರಕ್ಕೆ ಆಗಮಿಸಿದ್ದು, ಕೋರ್ಟ ಸರ್ಕಲ್ ಬಳಿ ಅವರು ನಡೆದು ಹೋಗುತ್ತಿದ್ದರು.
ಮಧ್ಯಾಹ್ನ ರೂಮಿನ ಕಡೆ ಹೊರಟಿದ್ದ ಪ್ರಿಯಾ ರಾಠೋಡ್ ಅವರನ್ನು ಅಪರಿಚಿತ ವ್ಯಕ್ತಿಯೊಬ್ಬರು ಹಿಂಬಾಲಿಸಿದರು. ಬೈಕಿನಲ್ಲಿದ್ದ ಆ ಅಪರಿಚಿತ ವ್ಯಕ್ತಿ ಹಿಂದೆ-ಮುAದೆ ಸುತ್ತಾಟ ನಡೆಸಿದರು. ತಹಶೀಲ್ದಾರ್ ಕಚೇರಿ ದಾಟಿ ಗಿಡ್ಡಾರೋಡಿನ ಮೂಲಕ ಖುರ್ಸೆವಾಡಕ್ಕೆ ಹೋಗುವ ಬಿಸಿಎಂ ಹಾಸ್ಟೇಲ್ ಬಳಿ ಪ್ರಿಯಾ ರಾಠೋಡ್ ಅವರನ್ನು ಅಡ್ಡಗಟ್ಟಿದರು. ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದ ಆ ವ್ಯಕ್ತಿ ನೇರವಾಗಿ ಪ್ರಿಯಾ ರಾಠೋಡ್ ಅವರ ಕೊರಳಿಗೆ ಕೈ ಹಾಕಿದರು.
ಪ್ರಿಯಾ ರಾಠೋಡ್ ಅವರ ಕೊರಳಿನಲ್ಲಿ 5 ಗ್ರಾಂ ತೂಕದ ಚಿನ್ನದ ಸರವಿತ್ತು. 70 ಸಾವಿರ ರೂ ಮೌಲ್ಯದ ಸರವನ್ನು ದೋಚಿದ ಡಕಾಯಿತ ಪಲ್ಸರ್ ಬೈಕಿನಲ್ಲಿ ಪರಾರಿಯಾದರು. ಇದರಿಂದ ಆಘಾತಕ್ಕೆ ಒಳಗಾಗಿದ್ದ ಪ್ರಿಯಾ ರಾಠೋಡ್ ಕಳ್ಳನ ವಿರುದ್ಧ ಪೊಲೀಸರಿಗೆ ಮಾಹಿತಿ ನೀಡಿದ್ದು, ಕಾರವಾರ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದರು. ಕಳ್ಳನಿಗಾಗಿ ಶೋಧ ಶುರು ಮಾಡಿದರು.
`ಒಂಟಿಯಾಗಿ ಓಡಾಡುವಾಗ ಅತಿಯಾದ ಆಭರಣ ಧರಿಸಬೇಡಿ’