ಕಾರವಾರ ನಂದನಗದ್ದಾದ ಜೈನಬಾ ಮುಲ್ಲಾ ಅವರು ಆನ್‌ಲೈನ್ ಉದ್ಯೋಗದ ವ್ಯಾಮೋಹಕ್ಕೆ ಸಿಲುಕಿ 12.43 ಲಕ್ಷ ರೂ ಕಳೆದುಕೊಂಡಿದ್ದಾರೆ.
ಕಾರವಾರ ನಂದನಗದ್ದಾದ ಸಣ್ಣ ಮಸೀದಿ ಬಳಿಯ ಮುಲ್ಲಾ ಅಲಿ ಹೌಸ್ ಬಳಿ ಜೈನಬಾ ಸುಲ್ತಾನ್ ಮುಲ್ಲಾ (31) ಅವರು ವಾಸವಾಗಿದ್ದಾರೆ. ಜನವರಿ 5ರಂದು ಇನಸ್ಟಾಗ್ರಾಮಿನ ರೀಲ್ಸ ನೋಡುವಾಗ ಅವರಿಗೆ ಅಲ್ಲಿ `ಪಾರ್ಟ ಟೈಂ ಜಾಬ್’ ಬಗ್ಗೆ ಮಾಹಿತಿ ಸಿಕ್ಕಿದೆ. ಆ ಬಗ್ಗೆ ಆಸಕ್ತಿವಹಿಸಿದ ಅವರಿಗೆ ರುಕ್ಸನಾ ಖಾನ್ ಎಂಬ ಮಹಿಳೆ ಪರಿಚಯವಾಗಿದ್ದಾರೆ.
ರುಕ್ಸನಾ ಖಾನ್ ಅವರು ಜೈನಬಾ ಮುಲ್ಲಾ ಅವರಿಗೆ ಮರಳು ಮಾಡಿದ್ದು, ವಿಐಪಿ ಎಂಬ ವೆಬ್ ಸೈಟಿನ ಉತ್ಪನ್ನಗಳಿಗೆ ರೇಟಿಂಗ್ ಕೊಡುವ ಉದ್ಯೋಗ ಕೊಟ್ಟಿದ್ದಾರೆ. ಅದಾದ ನಂತರ ತಾವು ಹೇಳಿದ ಕಡೆ ಹೂಡಿಕೆ ಮಾಡಿದರೆ ಲಾಭ ಸಿಗುವ ಆಮೀಷ ಒಡ್ಡಿದ್ದಾರೆ. 700ರೂ ಹೂಡಿಕೆ ಮಾಡಿದ ಜೈನಬಾ ಮುಲ್ಲಾ ಅವರಿಗೆ 920ರೂ ಹಣ ಸಿಕ್ಕಿದೆ. ಇದರಿಂದ ಖುಷಿಯಾದ ಜೈನಬಾ ಮುಲ್ಲಾ ಅವರು ಫೆ 9ರವರೆಗೆ ಹಂತ ಹಂತವಾಗಿ 12.43 ಲಕ್ಷ ರೂ ಹೂಡಿಕೆ ಮಾಡಿದ್ದಾರೆ.
ಅದಾದ ನಂತರ ರುಕ್ಸನಾ ಖಾನ್ ಅವರ ಜೊತೆಗಿನ ಸಂಪರ್ಕ ಕಡಿತವಾಗಿದೆ. ಜೈನಬಾ ಮುಲ್ಲಾ ಅವರಿಗೆ ಹೂಡಕೆ ಹಣವೂ ಸಿಕ್ಕಿಲ್ಲ. ಲಾಭವೂ ಬಂದಿಲ್ಲ. ಮೋಸ ಹೋಗಿದನ್ನು ಅರಿತ ಅವರು ಸೈಬರ್ ಅಪರಾಧ ಪೊಲೀಸ್ ಠಾಣೆಗೆ ಹೋಗಿ ಅಳಲು ತೋಡಿಕೊಂಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿದು, ತನಿಖೆ ಚುರುಕುಗೊಳಿಸಿದ್ದಾರೆ.
`ಆಮೀಷಕ್ಕೆ ಒಳಗಾಗಿ ಮೋಸ ಹೋಗಬೇಡಿ’