ಕಾರವಾರದ ಮಾಜಾಳಿ ಬಳಿಯಿರುವ ವಿಠಲ ರುಕುಮಾಯಿ ದೇವಸ್ಥಾನದ ಸಮೀಪ ಗುರುವಾರ ರಾತ್ರಿ ಬೈಕ್ ಅಪಘಾತಕ್ಕೀಡಾಗಿದ್ದು, ಇಬ್ಬರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ. ಈ ಮೊದಲು ವ್ಯಕ್ತಿಯೊಬ್ಬರು ಸಾವನಪ್ಪಿದ ಬಗ್ಗೆ ಮಾಹಿತಿ ಬಂದಿದ್ದು, ನಂತರ ಅವರು ಉಸಿರಾಡುತ್ತಿರುವುದು ಗಮನಕ್ಕೆ ಬಂದಿದೆ. ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಗೋವಾಗೆ ಕಳುಹಿಸಲಾಗಿದೆ.
ಬೈಕಿನಲ್ಲಿ ಯುವಕರಿಬ್ಬರು ತೆರಳುತ್ತಿದ್ದಾಗ ಬೈಕಿನ ನಿಯಂತ್ರಣ ತಪ್ಪಿದ ಬಗ್ಗೆ ಅಂದಾಜಿಸಲಾಗಿದೆ. ರಸ್ತೆ ಪಕ್ಕ ಯುವಕರಿಬ್ಬರು ರಕ್ತದ ಮೊಡವಿನಲ್ಲಿ ಬಿದ್ದಿರುವುದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಚಿತ್ತಾಕುಲ ಠಾಣೆ ಪೊಲೀಸರು ಸ್ಥಳಕ್ಕೆ ಹೊಗಿ ನೋಡಿದಾಗ ಇಬ್ಬರು ಅಲ್ಲಿ ನರಳಾಡುತ್ತಿದ್ದು, ಅವರನ್ನು ಪೊಲೀಸರು ತುರ್ತಾಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಆಂಬುಲೆನ್ಸ ಬರುವುದು ತಡವಾಗುವ ಮಾಹಿತಿ ಅರಿತು ಪಿಎಸ್‌ಐ ಪರಶುರಾಮ ಮಿರ್ಚಗಿ ಪೊಲೀಸ್ ವಾಹನದಲ್ಲಿಯೇ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಸ್ಥಿತಿ ಗಂಭೀರವಾಗಿದ್ದರೂ ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಮುಂದುವರೆದಿದೆ. ಸಾವನಪ್ಪಿದ ಯುವಕನ ಹೆಸರು-ವಿಳಾಸ ಗೊತ್ತಾಗಿಲ್ಲ. ಗಾಯಾಳು ಸಹ ಮಾತನಾಡುವ ಸ್ಥಿತಿಯಲ್ಲಿಲ್ಲ. ವಾಹನ ಸಂಖ್ಯೆ ಆಧಾರದಲ್ಲಿ ಪೊಲೀಸರು ಕುಟುಂಬದವರನ್ನು ಸಂಪರ್ಕಿಸುತ್ತಿದ್ದಾರೆ.