ಯಲ್ಲಾಪುರದ ಸವಣಗೇರಿಯ ಭಾಸ್ಕರ ಮರಾಠಿ ಅವರು ಮನೆಯಲ್ಲಿ ಮಲಗಿದ್ದಾಗ ಜೋರಾಗಿ ಸದ್ದು ಕೇಳಿಸಿದೆ. ಹೊರಗೆ ಬಂದು ನೋಡಿದ ಅವರಿಗೆ ವಿಠ್ಠಲ ನಾಯ್ಕ ಅವರು ರಕ್ತದ ಮಡುವಿನಲ್ಲಿ ನರಳಾಡುತ್ತಿರುವುದು ಕಾಣಿಸಿದೆ. ವಿಠ್ಠಲ ನಾಯ್ಕ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಬದುಕಿಸಿಕೊಳ್ಳಲು ಸಾಧ್ಯವಾಗಿಲ್ಲ.
ಯಲ್ಲಾಪುರದ ಸವಣಗೇರಿ ಬಳಿಯ ಬೆಳಸೂರು ಕ್ರಾಸಿನ ಬಳಿ ವಿಠ್ಠಲ ದಶರಥ ನಾಯ್ಕ (26)ಅವರು ವಾಸವಾಗಿದ್ದರು. ಕೂಲಿ ಕೆಲಸ ಮಾಡಿಕೊಂಡು ಅವರು ಕುಟುಂಬ ನೋಡಿಕೊಳ್ಳುತ್ತಿದ್ದರು. ಫೆಬ್ರವರಿ 8ರಂದು ವಿಠ್ಠಲ ನಾಯ್ಕ ಅವರು ಬೈಕಿನಲ್ಲಿ ಹೋಗುತ್ತಿದ್ದರು. ಅದೇ ವೇಳೆ ಸವಣಗೇರಿಯ ಚಾಲಕ ಭಾಸ್ಕರ ನಾಗೇಶ ಮರಾಠಿ ಅವರು ಮನೆಯಲ್ಲಿ ಮಲಗಿದ್ದರು. ಭಾಸ್ಕರ ಮರಾಠಿ ಅವರಿಗೆ ದೊಡ್ಡದಾಗಿ ಶಬ್ದವೊಂದು ಕೇಳಿದ್ದು, ನಿದ್ದೆಯಿಂದ ಎದ್ದ ಭಾಸ್ಕರ್ ಮರಾಠಿ ಅವರು ಮನೆಯಿಂದ ಹೊರಗೆ ಬಂದರು. ಆ ವೇಳೆ, ವಿಠ್ಠಲ ಮರಾಠಿ ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು.
ಇದನ್ನು ನೋಡಿದ ಭಾಸ್ಕರ ಮರಾಠಿ ಅವರು ತಕ್ಷಣ ಮಂಜುನಾಥ ಕೇಶವ ನಾಯ್ಕ ಅವರಿಗೆ ಫೋನ್ ಮಾಡಿದರು. ಮಂಜುನಾಥ ನಾಯ್ಕ ಅವರು 108ಗೆ ಫೋನ್ ಮಾಡಿದ್ದು, ಆಂಬುಲೆನ್ಸ ಮೂಲಕ ವಿಠ್ಠಲ ನಾಯ್ಕ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿ ತಪಾಸಣೆ ನಡೆಸಿದ ವೈದ್ಯರು ವಿಠ್ಠಲ ನಾಯ್ಕ ಅವರು ಸಾವನಪ್ಪಿರುವುದನ್ನು ಘೋಷಿಸಿದರು.
ಅಪರಿಚಿತ ವಾಹನಬಡಿದು ವಿಠ್ಠಲ ನಾಯ್ಕ ಅವರು ಬೈಕಿನಿಂದ ಬಿದ್ದ ಅನುಮಾನವ್ಯಕ್ತವಾಗಿದೆ. ಸದ್ಯ ವಿಠ್ಠಲ ನಾಯ್ಕ ಅವರ ದೇಹವನ್ನು ಶವಾಗಾರದಲ್ಲಿರಿಸಿದ್ದು, ಭಾಸ್ಕರ ಮರಾಠಿ ಅವರು ನೀಡಿದ ಮಾಹಿತಿ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.