ಆದಾಯಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ಸರಾಯಿ ಸೇವಿಸುತ್ತಿದ್ದ ಶಿರಸಿಯ ಗಣೇಶ ಜಡೆ ಅವರು ಮಾನಸಿಕ ವೇದನೆ ಸಹಿಸಿಕೊಳ್ಳಲಾಗದೇ ಸಾವನಪ್ಪಿದ್ದಾರೆ. ಬಾಗಿಲು ತಟ್ಟಿದರೂ ಮಾತನಾಡದ ಮಗನನ್ನು ಕಿಟಕಿ ಕಿಂಡಿಯಲ್ಲಿ ನೋಡಿದ ಅನ್ನಪೂರ್ಣ ಜಡೆ ಅವರು ಆಘಾತಕ್ಕೆ ಒಳಗಾಗಿದ್ದಾರೆ.
ಶಿರಸಿಯ ಬನವಾಸಿ ರಸ್ತೆಯ ಗಾಯತ್ರಿ ನಗರದಲ್ಲಿ ಗಣೇಶ ಮೋಹನ ಜಡೆ (40) ಅವರು ವಾಸವಾಗಿದ್ದರು. ಕೂಲಿ ಕೆಲಸ ಮಾಡಿಕೊಂಡು ಅವರು ಬದುಕು ಕಟ್ಟಿಕೊಂಡಿದ್ದರು. ನಿತ್ಯವೂ ಸರಾಯಿ ಕುಡಿಯುವ ಚಟ ಹೊಂದಿದ್ದ ಅವರು ದುಡಿಮೆಯ ಹಣವನ್ನು ವ್ಯಸನಕ್ಕೆ ಮೀಸಲಿರಿಸಿದ್ದರು. ಕುಡಿತ ಒಳ್ಳೆಯದಲ್ಲ ಎಂದು ಬುದ್ದಿ ಹೇಳಿದರೂ ಅದನ್ನು ಕೇಳುತ್ತಿರಲಿಲ್ಲ.
ಫೆಬ್ರವರಿ 24ರ ರಾತ್ರಿ ಮನೆಗೆ ಬಂದ ಗಣೇಶ ಜಡೆ ಅವರು ನೇರವಾಗಿ ತಮ್ಮ ಕೋಣೆಗೆ ಹೋದರು. ಬಾಗಿಲಿಗೆ ಚಿಲಕ ಹಾಕಿಕೊಂಡ ಅವರು ಎಷ್ಟು ಹೊತ್ತಾದರೂ ಹೊರಗೆ ಬರಲಿಲ್ಲ. ಅನ್ನಪೂರ್ಣ ಜಡೆ ಅವರು ಮಗನನ್ನು ಕರೆದರು. ಆದರೂ, ಹೊರ ಬಾರದ ಕಾರಣ ಕಿಟಕಿಯ ಕಿಂಡಿಯಿAದ ಮಗನನ್ನು ನೋಡುವ ಪ್ರಯತ್ನ ಮಾಡಿದರು.
ಆದರೆ, ಮನೆಯೊಳಗಿನ ಫ್ಯಾನಿಗೆ ಗಣೇಶ ಜಡೆ ಅವರು ನೇತಾಡುತ್ತಿದ್ದರು. ಬಾಗಿಲು ಒಡೆದು ತಾಯಿ ಒಳಗೆ ಬರುವಷ್ಟರಲ್ಲಿ ಗಣೇಶ ಜಡೆ ಅವರ ದೇಹ ತಣ್ಣಗಾಗಿತ್ತು. ಈ ಸಾವಿನ ಬಗ್ಗೆ ಅನ್ನಪೂರ್ಣ ಜಡೆ ಅವರು ಶಿರಸಿ ಗ್ರಾಮೀಣ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದರು.