• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ದಂಪತಿ ಮರಣಕ್ಕೆ ಇಲಿ ಪಾಷಣ ಕಾರಣ!

February 15, 2026

ವಾದದಿಂದ ವಾಗ್ವಾದ-ಹೊಡೆದಾಟ: ಹಳೆ ಪ್ರಕರಣಕ್ಕೆ ಹೊಸ ಸ್ವರೂಪ!

February 15, 2026

ಮಹಿಳೆ ಆತ್ಮಹತ್ಯೆ

February 15, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ದಂಪತಿ ಮರಣಕ್ಕೆ ಇಲಿ ಪಾಷಣ ಕಾರಣ!

February 15, 2026

ವಾದದಿಂದ ವಾಗ್ವಾದ-ಹೊಡೆದಾಟ: ಹಳೆ ಪ್ರಕರಣಕ್ಕೆ ಹೊಸ ಸ್ವರೂಪ!

February 15, 2026

ಮಹಿಳೆ ಆತ್ಮಹತ್ಯೆ

February 15, 2026
ADVERTISEMENT
  • Home
  • Janamata
Sunday, February 15, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ವಾದದಿಂದ ವಾಗ್ವಾದ-ಹೊಡೆದಾಟ: ಹಳೆ ಪ್ರಕರಣಕ್ಕೆ ಹೊಸ ಸ್ವರೂಪ!

Achyutkumar by Achyutkumar
February 15, 2026
283
VIEWS
Share on FacebookShare on WhatsappShare on Twitter
ADVERTISEMENT

ನಾಲ್ಕು ತಿಂಗಳ ಹಿಂದೆ ಶಿರಸಿಯಲ್ಲಿ ವಕೀಲರ ನಡುವೆ ನಡೆದಿದ್ದ ಹೊಡೆದಾಟ ಪ್ರಕರಣಕ್ಕೆ ದಾಖಲಾದ ಪೊಲೀಸ್ ದೂರುಗಳಿಗೆ ಹೈಕೋರ್ಟ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಇದರ ಬೆನ್ನಲ್ಲೆ ಮತ್ತೆ ಎರಡು ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ!

ADVERTISEMENT

2025ರ ನವೆಂಬರ್ 11ರಂದು ಶಿರಸಿಯಲ್ಲಿ ವಕೀಲರ ಸಭೆಯಲ್ಲಿ ನಡೆದ ಹೋಡೆದಾಟ ನಡೆದಿತ್ತು. ಅಧಿಕಾರ ಅವಧಿ ಮುಗಿದರೂ ಆಗದ ಹೊಸ ನೇಮಕಾತಿ, ಸದಸ್ಯತ್ವ ರದ್ಧತಿಯ ಬಗ್ಗೆ ಪ್ರಶ್ನೆ ಮಾಡಿದ್ದು ಸೇರಿ ವಿವಿಧ ವಿಷಯಗಳು ಹೊಡೆದಾಟಕ್ಕೆ ಕಾರಣವಾಗಿದ್ದವು. ಎರಡು ಬಣಗಳ ನಡುವೆ ನಡೆದ ವಾದ-ವಾಗ್ವಾದ ಗೊಂದಲ ಸೃಷ್ಠಿಸಿತ್ತು. ಈ ವಿಷಯವಾಗಿ ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ವಿವಿಧ ದೂರುಗಳು ದಾಖಲಾಗಿದ್ದವು. ಜಾತಿ ನಿಂದನೆ, ಹಲ್ಲೆ ಹಾಗೂ ಮಹಿಳೆಯ ಮೈ ಮುಟ್ಟಿದ ಬಗ್ಗೆ ದೂರಿನ ಆರೋಪಗಳಿದ್ದು, ಆ ಎಲ್ಲಾ ಪ್ರಕರಣಗಳಿಗೂ ಹೈಕೋರ್ಟ ತಡೆಯಾಜ್ಞೆ ನೀಡಿದೆ. ಸದ್ಯ ಇದೇ ವಿಷಯದ ಮುಂದುವರೆದ ಭಾಗವಾಗಿ ಮತ್ತೆರಡು ಪೊಲೀಸ್ ಕೇಸ್ ದಾಖಲಾಗಿದೆ!

ADVERTISEMENT

ವಕೀಲ ಆರ್ ಎಸ್ ಹೊಸೂರು ಅವರು ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಗೆ ತೆರಳಿ ಆ ದಿನ ನಡೆದ ಕಹಿ ಘಟನೆಗಳ ಬಗ್ಗೆ ವಿವರಿಸಿದ್ದಾರೆ. ಮರಾಠಿಕೊಪ್ಪದ ವಕೀಲ ಸಿ ಎಫ್ ಈರೇಶ್, ಸಿದ್ದಾಪುರದ ವಕೀಲ ಮಂಜುನಾಥ ನಾಯ್ಕ, ಶಿರಸಿ ಆಳ್ಮನೆಯ ವಕೀಲ ವಿ ಎಂ ಹೆಗಡೆ, ರಾಮನಬೈಲಿನ ವಕೀಲ ರಾಜೀವ ರೇವಣಕರ್ ಅವರ ವಿರುದ್ಧ ಆರ್ ಎಸ್ ಹೊಸೂರು ಅವರು ಆರೋಪ ಮಾಡಿದ್ದಾರೆ. `ಸಂಘದ ಚುನಾವಣೆಯಲ್ಲಿ ತಮಗೆ ಸಹಕರಿಸಿಲ್ಲ ಎಂಬ ಕಾರಣಕ್ಕೆ ಮಾಜಿ ಅಧ್ಯಕ್ಷ ಸಿ ಎಫ್ ಈರೇಶ್ ಅವರು ದ್ವೇಷದಿಂದ ಇದ್ದರು. ಆ ದಿನ 80ಕ್ಕೂ ಅಧಿಕ ಸದಸ್ಯರಿದ್ದರೂ ಸಹ ಅವರು ಸಂಘದ ಸಭೆ ಮುಂದೂಡಿರುವುದಾಗಿ ವೇದಿಕೆ ಮೇಲೆ ಘೋಷಿಸಿದರು. ಆ ವೇಳೆ ಅದನ್ನು ರಾಜೇಶ್ ಶೆಟ್ಟಿ ಅವರು ಪ್ರಶ್ನಿಸಿದ್ದು, ಎದುರುದಾರರಾದ ನಾಲ್ಕು ವಕೀಲರು ಸೇರಿ ಗಲಾಟೆ ಶುರು ಮಾಡಿದರು’ ಎಂದು ಆರ್ ಎಸ್ ಹೊಸೂರು ಅವರು ಹೇಳಿದ್ದಾರೆ. `ಈ ವೇಳೆ ಸಮಾಧಾನ ಮಾಡಲು ಮುಂದಾದ ತಮಗೂ ಆ ನಾಲ್ವರು ವಕೀಲರು ಕುತ್ತಿಗೆ ಹಿಡಿದು ಕೊಲೆ ಪ್ರಯತ್ನ ಮಾಡಿದ್ದಾರೆ. ರಿಟ್ ಪಿಟಿಶನ್ ಹಾಕಿದನ್ನು ಪ್ರಶ್ನಿಸಿ ಬೈದಿದ್ದಾರೆ. ಇದರಿಂದ ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಜೀವ ಬೆದರಿಕೆಯಿದೆ’ ಎಂದು ಆರ್ ಎಸ್ ಹೊಸೂರು ಅವರು ಪೊಲೀಸರ ಬಳಿ ವಿವರಿಸಿದ್ದಾರೆ. ಜೊತೆಗೆ ರಕ್ಷಣೆ ಕೋರುವಂತೆಯೂ ಮನವಿ ಮಾಡಿದ್ದಾರೆ.

ADVERTISEMENT

ಇದೇ ವಿಷಯವಾಗಿ ರಾಮನಬೈಲಿನ ವಕೀಲ ರಾಜೇಶ ವಿ ಶೆಟ್ಟಿ ಅವರು ಸಹ ಪೊಲೀಸರ ಬಳಿ ಇನ್ನಷ್ಟು ವಿಷಯ ಪ್ರಸ್ತಾಪಿಸಿದ್ದಾರೆ. ವಕೀಲರಾದ ಸಿ ಎಫ್ ಈರೇಶ್, ಮಂಜುನಾಥ ನಾಯ್ಕ, ವಿ ಎಂ ಹೆಗಡೆ ಹಾಗೂ ರಾಜೀವ ರೇವಣಕರ್ ಅವರ ವಿರುದ್ಧ ರಾಜೇಶ ಶೆಟ್ಟಿ ಅವರು ಆರೋಪ ಮಾಡಿದ್ದಾರೆ. `ಸಂಘದ ಸಭೆಯಲ್ಲಿ ಪ್ರಶ್ನಿಸಿದ ಕಾರಣ ನೀನು ಸಂಘದ ಸದಸ್ಯನಲ್ಲ ಎಂದು ವಕೀಲ ಸಿ ಎಫ್ ಈರೇಶ್ ಅವರು ಕೂಗಾಡಿದ್ದು, ನಾನು ಇನ್ನೂ ಒಂದು ಅವಧಿಗೆ ಅಧ್ಯಕ್ಷನಾಗಬೇಕಿದೆ. ಅದಕ್ಕೆ ಅವಕಾಶ ಕೊಡದೇ ನನ್ನ ವಿರುದ್ಧ ರಿಟ್ ಹೋಗುವಿರಾ?’ ಎಂದು ಪ್ರಶ್ನಿಸಿದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸುಳ್ಳು ಕೇಸ್ ದಾಖಲಿಸುವುದಾಗಿ ಬೆದರಿಸಿ ಕುತ್ತಿಗೆ ಹಿಡಿದ ಬಗ್ಗೆಯೂ ವಿವರಿಸಿದ್ದು, ಆ ವೇಳೆ ಇನ್ನಿತರ ವಕೀಲರು ಹೊಡೆದಾಟ ಬಿಡಿಸಿರುವುದಾಗಿ ರಾಜೇಶ ಶೆಟ್ಟಿ ಅವರು ಹೇಳಿದ್ದಾರೆ.

ಆ ದಿನ ನಡೆದಿದ್ದೇನು? ಆ ಸುದ್ದಿ ಇಲ್ಲಿ ಓದಿ: ವಾದದಿಂದ ವಾಗ್ವಾದ!

ಶಿರಸಿ ಮಾರುಕಟ್ಟೆ ಠಾಣೆ ಪೊಲೀಸರು ಈ ಎರಡು ಪ್ರಕರಣ ದಾಖಲಿಸಿದ್ದು, ಸತ್ಯಾಸತ್ಯತೆಯ ಪರಿಶೀಲನೆ ಶುರು ಮಾಡಿದ್ದಾರೆ.

ADVERTISEMENT
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋