ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸುವ ಜೆ ಇ ಇ ಮುಖ್ಯ ಪರೀಕ್ಷೆಯ ಪ್ರಥಮ ಆವೃತ್ತಿಯಲ್ಲಿ ಧಾರವಾಡದ ಅರ್ಜುನ ಸಂಸ್ಥೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಈ ಕಾಲೇಜಿನ ವಿದ್ಯಾರ್ಥಿಗಳಾದ ಕೇದಾರ್ ಜೋಶಿ (ಶೇ 99.84), ಅನ್ಮೋಲ್ ಪ್ರಭು (99.75), ಅನೀಶ್ ನಾಯಕ್ (99.56), ದರ್ಶನ ಭಟ್( 98.97), ದ್ರುವಂತ್ (98.52), ವಿನೀತ್ ಚವಾಣ್ (98.05), ಆಕಾಶ್ ರಾಠೋಡ್ (97.61), ಪ್ರೀತಮ್ ಚವಾಣ್ (97.46), ಕಾರ್ತಿಕ್ ಭಜಂತ್ರಿ (96.38), ರಜತ್ ಭಟ್ (95.36),ಸೃಜನ ಪಾಟೀಲ್ (94.62), ಪ್ರಣತಿ ಮೆಣಸೂಮನೆ (94.37), ಸಿಂಚನಾ ಭಟ್ (93.92), ಭಾರ್ಗವ್ ಹೆಬ್ಬಾರ್ (93.62), ಪ್ರಗತಿ ನರೋಣಿ (93.40), ಅನನ್ಯ ಪೂಜಾರ್ (93.11), ಪೂರ್ವಿ ಹೆಗ್ಡೆ (92.04), ಸುಶಾಂತ್ ನಾಯಕ್ (91.71), ಪ್ರೀತಮ್ ಯು ವೈ (91.70), ಉದಿತ್ (90.95), ಸಚಿನ್ ಜೋಶಿ (90.85), ಅಪೂರ್ವ ಹೆಗ್ಡೆ (90.14)ರ ಸಾಧನೆ ಮಾಡಿದ್ದರೆ.
ಒಟ್ಟಾರೆಯಾಗಿ ಪರೀಕ್ಷೆಯನ್ನು ಬರೆದ ವಿದ್ಯಾರ್ಥಿಗಳ ಪೈಕಿ ಮೂವರು ಮಕ್ಕಳು ಶೇ 99ಕ್ಕಿಂತ ಹೆಚ್ಚು ಅಂಕಪಡೆದಿದ್ದಾರೆ. 10 ಮಕ್ಕಳು ಶೇ 95ಕ್ಕೂ ಅಧಿಕ ಅಂಕಗಳಿಸಿದ್ದಾರೆ. 22 ವಿದ್ಯಾರ್ಥಿಗಳು ಶೇ 90ಕ್ಕೂ ಅಧಿಕ ಅಂಕಗಳಿಸಿ ಗಮನಸೆಳೆದಿದ್ದಾರೆ. 40 ವಿದ್ಯಾರ್ಥಿಗಳು ಶೇ 85ಕ್ಕೂ ಅಧಿಕ ಅಂಕಪಡೆದು ಸಾಧನೆ ಮಾಡಿದ್ದಾರೆ. ಈ ಸಾಧನೆಯಿಂದ ಸಂಸ್ಥೆಯ ಹಿರಿಮೆ ಹೆಚ್ಚಾಗಿದ್ದು, ಧಾರವಾಡ ನಗರದಲ್ಲಿಯೇ ಪ್ರಥಮ ಸ್ಥಾನಪಡೆದ ಸಂಸ್ಥೆಯಾಗಿ ಅರ್ಜುನ ಕಾಲೇಜು ಗುರುತಿಸಿಕೊಂಡಿದೆ. ಸಾಧನೆಗೈದ ವಿದ್ಯಾರ್ಥಿಗಳನ್ನು ಸಂಸ್ಥೆಯ ಆಡಳಿತ ಮಂಡಳಿ ಪ್ರಾಚಾರ್ಯರು ಶಿಕ್ಷಕ ವೃಂದದವರು ಅಭಿನಂಧಿಸಿ ಹರ್ಷವ್ಯಕ್ತಪಡಿಸಿದ್ದಾರೆ.