ಬೇಡ್ತಿ-ವರದಾ ನದಿ ಜೋಡಣೆ ವಿಷಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದ್ದಾರೆ. ಈ ವಿಷಯವಾಗಿ ಅವರು ಈ ಬಾರಿ ಒಂದೇ ವಾಕ್ಯದಲ್ಲಿ ಉತ್ತರಿಸಿ ಪ್ರಶ್ನೆಯ ಸುರಿಮಳೆಯಿಂದ ತಪ್ಪಿಸಿಕೊಂಡಿದ್ದಾರೆ.
ADVERTISEMENT
ಹಾವೇರಿಯ ಹೆಲಿಪ್ಯಾಡಿಗೆ ಬಂದಿದ್ದ ಸಿಎಂ ಸಿದ್ದರಾಮಯ್ಯ ಅವರನ್ನು ಪತ್ರಕರ್ತರು ಮುತ್ತಿಗೆ ಹಾಕಿದ್ದು, ಬಗೆ ಬಗೆಯ ಪ್ರಶ್ನೆ ಕೇಳಿದರು. ಈ ವೇಳೆ `ಬೇಡ್ತಿ-ವರದಾ ನದಿ ತಿರುವು ವಿಷಯವಾಗಿ ಉತ್ತರ ಕನ್ನಡ ಜಿಲ್ಲೆಯವರು ವಿರೋಧಿಸುತ್ತಿದ್ದಾರೆ’ ಎಂದು ಪತ್ರಕರ್ತರೊಬ್ಬರು ಪ್ರಸ್ತಾಪಿಸಿದರು.
ಮುಖ್ಯಮಂತ್ರಿಗಳ ಹಿಂದಿದ್ದ ವ್ಯಕ್ತಿಯೊಬ್ಬರು `ಈ ವಿಷಯವಾಗಿ ಈಗಾಗಲೇ ಡಿಪಿಆರ್ ಸಿದ್ಧಪಡಿಸಲಾಗಿದೆ. ಅದನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ’ ಎಂದರು. ಅದಾದ ನಂತರ ಸಿದ್ಧರಾಮಯ್ಯ ಅವರು ಸಹ ಕೇಂದ್ರ ಸರ್ಕಾರದ ಕಡೆ ತಮ್ಮ ಮಾತು ತಿರುಗಿಸಿದರು.
ADVERTISEMENT
ಬೇಡ್ತಿ – ವರದಾ ನದಿಯ ಜೋಡಣೆ ಬಗ್ಗೆ ಉತ್ತರ ಕನ್ನಡ ಜನತೆ ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದ್ಧರಾಮಯ್ಯ ಅವರು `ಡಿಪಿಆರ್ ನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದ್ದು, ಅವರು ತೀರ್ಮಾನ ಕೈಗೊಳ್ಳಬೇಕಾಗಿದೆ. ಕೇಂದ್ರ ಸರ್ಕಾರ ಯಾವುದರ ಬಗ್ಗೆಯೂ ತೀರ್ಮಾನ ಮಾಡುತ್ತಿಲ್ಲ. ಹಾಗಾಗಿ ನಮಗೆ ಅವರು ತೀರ್ಮಾನ ಕೈಗೊಳ್ಳುವ ಬಗ್ಗೆ ಭರವಸೆಯೂ ಇಲ್ಲ, ನಂಬಿಕೆಯೂ ಇಲ್ಲ’ ಎಂದು ಹೇಳಿದರು.
ಪತ್ರಕರ್ತರು ಕೇಳಿದ್ದೇನು? ಸೀಎಂ ಹೇಳಿದ್ದೇನು? ವಿಡಿಯೋ ಇಲ್ಲಿ ನೋಡಿ..