ಭಟ್ಕಳದಲ್ಲಿ ಮಹಿಳೆಯೊಬ್ಬರು ಓಡಿಸುತ್ತಿದ್ದ ಕಾರಿಗೆ ಅರ್ಚರು ಓಡಿಸುತ್ತಿದ್ದ ಬೈಕು ಡಿಕ್ಕಿ ಹೊಡೆದಿದೆ. ಬೈಕಿನಿಂದ ಬಿದ್ದ ಅರ್ಚಕರು ಆಸ್ಪತ್ರೆ ಸೇರಿದ್ದಾರೆ.
ಭಟ್ಕಳ ನಗರದ ಖಲೀಫಾ ಸ್ಟ್ರೀಟ್ ನಿವಾಸಿ ಸುಹೇಮಾ ಕೊಂ ಮಹ್ಮದ್ ಇಮ್ರಾನ್ ಅಯ್ದುರುಸಾ ಅವರು ಫೆ 5ರಂದು ವೇಗವಾಗಿ ಕಾರು ಓಡಿಸುತ್ತಿದ್ದರು. ಹೊನ್ನಾವರದಿಂದ ಕುಂದಾಪುರ ಕಡೆ ಹೊರಟಿದ್ದ ಆ ಕಾರು ರಂಗಿನಕಟ್ಟಾ ರಾಷ್ಟ್ರೀಯ ಹೆದ್ದಾರಿಯ ಬಳಿ ಏಕಾಏಕಿ ಎಡಭಾಗಕ್ಕೆ ತಿರುಗಿತು. ಈ ವೇಳೆ ಹಿಂದಿನಿAದ ಬರುತ್ತಿದ್ದ ಬೈಕು ಆ ಕಾರಿಗೆ ಡಿಕ್ಕಿ ಹೊಡೆಯಿತು. ಆ ಬೈಕು ಓಡಿಸುತ್ತಿದ್ದ ಉತ್ತರ ಕೊಪ್ಪದ ಅರ್ಚಕ ಪ್ರಸಾದ ಗಣಪತಿ ಹೆಗಡೆ (28) ಅವರು ನೆಲಕ್ಕೆ ಬಿದ್ದು ಪೆಟ್ಟು ಮಾಡಿಕೊಂಡರು.
ಯಾವುದೇ ಸಿಗ್ನಲ್ ನೀಡದೆ ಮಹಿಳೆ ಕಾರನ್ನು ಯು ಟರ್ನ ಮಾಡಿದ ಕಾರಣ ಅರ್ಚಕರು ಸಮಸ್ಯೆಗೆ ಸಿಲುಕಿದರು. ಬೈಕಿನಿಂದ ಬಿದ್ದ ಅವರನ್ನು ಅಲ್ಲಿದ್ದ ಜನ ಆಸ್ಪತ್ರೆಗೆ ಕಳುಹಿಸಿದರು. ಸದ್ಯ ಅರ್ಚಕರು ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆದಿದ್ದಾರೆ. ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಪ್ರಸಾದ ಹೆಗಡೆ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ನಂತರ ಕುಂದಾಪುರದ ಚಿನ್ಮಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ದೇವಸ್ಥಾನದ ಅರ್ಚಕ ಮುಂಡಳ್ಳಿಯ ಮಂಜುನಾಥ ವೆಂಕಟ್ರಮಣ ಭಟ್ಟ ಕಾರು ಚಾಲಕಿ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ.