ಶಿರಸಿ ಗಣೇಶ ನಗರದ ದಿನ್ಯ ಹೆಗಡೆ ಅವರು ಭಟ್ಕಳದ ಬಳಿ ವೇಗವಾಗಿ ಕಾರು ಓಡಿಸಿದ್ದು, ಆ ಕಾರು ಪೊಲೀಸ್ ಅಧಿಕಾರಿಯೊಬ್ಬರಿಗೆ ಗುದ್ದಿದೆ. ಪೊಲೀಸ್ ಜೊತೆ ಅವರ ಪತ್ನಿಗೂ ಪೆಟ್ಟಾಗಿದೆ.
ಶಿರಸಿ ಗಣೇಶ ನಗರದಲ್ಲಿ ದಿವ್ಯಾ ರಘುಪತಿ ಹೆಗಡೆ (29) ಅವರು ವಾಸವಾಗಿದ್ದಾರೆ. ಫೆಬ್ರವರಿ 15ರಂದು ಅವರು ಕುಂದಾಪುರದಿAದ ಹೊನ್ನಾವರ ಕಡೆ ಹೊರಟಿದ್ದರು. ರಾಷ್ಟಿಯ ಹೆದ್ದಾರಿಯಲ್ಲಿ ವೇಗವಾಗಿ ಕಾರು ಓಡಿಸಿಕೊಂಡು ಬಂದ ಅವರು ಸಂಜೆಯಾದರೂ ಕಾರಿನ ವೇಗ ಕಡಿಮೆ ಮಾಡಲಿಲ್ಲ. 7.20ರ ವೇಳೆಗೆ ಅವರು ಭಟ್ಕಳ ತಲುಪಿದ್ದು, ಆಗ ಕಾರು ಇನ್ನಷ್ಟು ವೇಗವಾಗಿ ಚಲಿಸಿತು.
ಇದೇ ವೇಳೆ ಭಟ್ಕಳ ಪುರವರ್ಗದ ಚರ್ಚ ಎದುರು ಎಸೈ ಅಂತೋನ್ ಫರ್ನಾಂಡಿಸ್ ಅವರು ಬೈಕಿನಲ್ಲಿ ಹೋಗುತ್ತಿದ್ದರು. ಆ ಬೈಕಿನಲ್ಲಿ ಅಂತೋನ್ ಫರ್ನಾಂಡಿಸ್ ಅವರ ಪತ್ನಿ ಜೋಸ್ಟಿನ್ ಫರ್ನಾಂಡಿಸ್ ಅವರು ಕುಳಿತಿದ್ದರು. ಅಂತೋನ್ ಫರ್ನಾಂಡಿಸ್ ಅವರು ತಮ್ಮ ಬೈಕಿಗೆ ಇಂಡಿಕೇಟರ್ ಹಾಕಿ ಹೆದ್ದಾರಿಯಲ್ಲಿ ತಿರುಗುವ ಪ್ರಯತ್ನ ಮಾಡಿದ್ದರು. ಅದೇ ವೇಳೆ ಜೋರಾಗಿ ಕಾರು ಓಡಿಸಿಕೊಂಡು ಬಂದ ದಿವ್ಯಾ ಹೆಗಡೆ ಅವರು ಅಂತೋನ್ ಫರ್ನಾಂಡಿಸ್ ಅವರ ಬೈಕಿಗೆ ಗುದ್ದಿದರು.
ಕಾರು ಗುದ್ದಿದ ರಭಸಕ್ಕೆ ಅಂತೋನ್ ಫರ್ನಾಂಡಿಸ್ ಅವರ ಜೊತೆ ಜೋಸ್ಟಿನ್ ಫರ್ನಾಂಡಿಸ್ ಅವರು ಸಹ ನೆಲಕ್ಕೆ ಬಿದ್ದರು. ಆ ಅಪಘಾತದಲ್ಲಿ ಅಂತೋನ್ ಫರ್ನಾಂಡಿಸ್ ಅವರ ಕಾಲು, ಕೈ, ಹಣೆಗೆ ಗಾಯವಾಯಿತು. ಜೋಸ್ಟಿನ್ ಫರ್ನಾಂಡಿಸ್ ಅವರ ತಲೆಗೆ ಪೆಟ್ಟು ಬಿದ್ದಿತು. ನ್ಯೂಸ್ ಪೆಪರ್ ಎಜೆಂಟ್ ಫ್ರಾನ್ಸಿಸ್ ಡಿಸೋಜಾ ಅವರು ಈ ಅಪಘಾತದ ಬಗ್ಗೆ ಮಾಹಿತಿ ನೀಡಿದ್ದು, ವೇಗವಾಗಿ ಕಾರು ಓಡಿಸಿದ ಧನ್ಯ ಹೆಗಡೆ ಅವರ ವಿರುದ್ಧ ಭಟ್ಕಳ ಶಹರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದರು.
`ಅತಿ ವೇಗ ಅಪಾಯಕ್ಕೆ ಕಾರಣ’