ಕಾರವಾರದ ಪ್ರಶಾಂತ ಗೋವೇಕರ್ ಅವರು ಮಹಿಳೆಯೊಬ್ಬರಿಗೆ ನಾಯಿ ಮಾರಾಟ ಮಾಡಿದ್ದು, ಅದರ ಹಣಪಡೆಯಲು ಹೋಗಿ ಪೆಟ್ಟು ತಿಂದಿದ್ದಾರೆ. ಮಹಿಳೆಯರಿಬ್ಬರು ಸೇರಿ ಪ್ರಶಾಂತ ಗಾಂವ್ಕರ್ ಅವರಿಗೆ ಕೆಟ್ಟದಾಗಿ ಬೈದು ಥಳಿಸಿದ್ದಾರೆ.
ಕಾರವಾರದ ಕಿನ್ನರ ಬಳಿಯ ಸಿದ್ಧವಾಡದಲ್ಲಿ ಪ್ರಶಾಂತ ದತ್ತರಾಮ ಗೋವೆಕರ್ ಅವರು ವಾಸವಾಗಿದ್ದಾರೆ. ವ್ಯಾಪಾರಿಯಾಗಿ ಅವರು ಬದುಕು ಕಟ್ಟಿಕೊಂಡಿದ್ದಾರೆ. ಪ್ರಶಾಂತ ಗೋವೆಕರ್ ಅವರು ತಾವು ಸಾಕಿದ್ದ ನಾಯಿಯನ್ನು ಸದಾಶಿವಗಡ ಕಣಸಗಿರಿಯ ಸುಮಾ ಸುಧಾಕರ ಪಡವಾಳಕರ್ ಅವರಿಗೆ ಮಾರಾಟ ಮಾಡಿದ್ದಾರೆ. ಆದರೆ, ಸುಮಾ ಪಡವಾಳಕರ್ ಅವರು ನಾಯಿ ಖರೀದಿಸಿದ ಹಣ ಪಾವತಿ ಮಾಡಿಲ್ಲ.
ಹೀಗಾಗಿ ಫೆಬ್ರವರಿ 7ರಂದು ಪ್ರಶಾಂತ ಗೋವೇಕರ್ ಅವರು ಸದಾಶಿವಗಡದ ಕಡೆ ಹೋಗಿದ್ದಾರೆ. ಕಣಸಗಿರಿಯಲ್ಲಿರುವ ಸುಮಾ ಪಡವಾಳಕರ್ ಅವರ ಮನೆಗೆ ಹೋಗಿ ನಾಯಿ ಖರೀದಿಸಿದ ಹಣ ಕೇಳಿದ್ದಾರೆ. ಈ ವೇಳೆ ಈ ಹಿಂದೆಪಡೆದಿದ್ದ 10 ತೊಲೆ ಬಂಗಾರ ಹಾಗೂ 5 ಲಕ್ಷ ರೂ ಹಣಪಡೆದ ಬಗ್ಗೆಯೂ ವಿಚಾರಿಸಿದ್ದು, ಅದರ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಇದರಿಂದ ಸುಮಾ ಪಡವಾಳಕರ್ ಅವರ ಸಿಟ್ಟು ನೆತ್ತಿಗೇರಿದೆ.
ಮನೆಯಲ್ಲಿದ್ದ ಕತ್ತಿ ಹಿಡಿದು ಹೊರಬಂದ ಸುಮಾ ಪಡವಾಳಕರ್ ಅವರು ಪ್ರಶಾಂತ ಅವರ ಕಡೆ ತಮ್ಮ ಆಯುಧ ಬೀಸಿದ್ದಾರೆ. ಮನೆಯಲ್ಲಿದ್ದ ಸುಮಾ ಅವರ ಮಗಳು
ಈಗಾಗಲೇ 10 ತೊಲೆ ಬಂಗಾರ, ಐದು ಲಕ್ಷ ರೂ ಹಣಪಡೆದ ಬಗ್ಗೆ ವಿಚಾರಣೆ ಶ್ರೇಯಾ ಪಡವಾಳಕರ್ ಅವರು ಈ ಹೊಡೆದಾಟಕ್ಕೆ ಕೈ ಜೋಡಿಸಿದ್ದಾರೆ. ಅಮ್ಮ-ಮಗಳು ಸೇರಿ ಪ್ರಶಾಂತ ಗೋವೆಕರ್ ಅವರಿಗೆ ಥಳಿಸಿದ್ದು, ಕತ್ತಿಯ ಏಟು ಅವರನ್ನು ಗಾಯಗೊಳಿಸಿದೆ.
ಅಲ್ಲಿಂದ ಓಡಿ ತಪ್ಪಿಸಿಕೊಂಡ ಪ್ರಶಾಂತ ಗೋವೆಕರ್ ಅವರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಚಿತ್ತಾಕುಲ ಪೊಲೀಸರ ಬಳಿ ತಮಗೆ ನ್ಯಾಯಯುತವಾಗಿ ಬರಬೇಕಾದ ನಾಯಿ ಹಣದ ಬಗ್ಗೆ ಹೇಳಿದ್ದಾರೆ. ಹಣ ಕೇಳಲು ಹೋದಾಗ ನಡೆದ ಹೊಡೆದಾಟದ ಬಗ್ಗೆ ವಿವರಿಸಿ ಆ ಅಮ್ಮ-ಮಗಳ ವಿರುದ್ಧ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸಿದ್ದಾರೆ.