ಶಿರಸಿಯ ಅಲ್ಬೇರ್ ಸ್ಕೂಲಿನಲ್ಲಿ ಪೇಂಟಿoಗ್ ಕೆಲಸ ಮುಗಿಸಿದ ಅಲ್ತಾಪ ಮೊಹ್ಮದ್ ಅವರು ಕೈ-ಕಾಲು ತೊಳೆಯುವ ವೇಳೆ ಕುಸಿದು ಬಿದ್ದು ಸಾವನಪ್ಪಿದ್ದಾರೆ. ಆ ಪ್ರದೇಶದಲ್ಲಿ ಅರೆಬರೆ ಸಂಪರ್ಕದ ವಿದ್ಯುತ್ ತಂತಿಗಳು ಬಿದ್ದಿದ್ದು, ವಿದ್ಯುತ್ ಸ್ಪರ್ಶದಿಂದ ಅವರು ಸಾವನಪ್ಪಿದ ಸಂಶಯಗಳಿವೆ.
ಮoಗಳೂರಿನ ಪರಂಗಿಪೇಟೆಯ ಅಲ್ತಾಪ ಮೊಹ್ಮದ್ (31) ಅವರು ಪೇಂಟಿoಗ್ ಕೆಲಸಕ್ಕಾಗಿ ಶಿರಸಿಗೆ ಬಂದಿದ್ದರು. ಶಿರಸಿ ಹೆಲಿಪ್ಯಾಡ್ ಬ್ಯಾಣದ ಹತ್ತಿರವಿರುವ ಅಲ್ಬೇರ್ ಸ್ಕೂಲಿನಲ್ಲಿ ಅವರು ಪೇಂಟಿoಗ್ ಕೆಲಸಕ್ಕೆ ನಿಯೋಜನೆಯಾಗಿದ್ದರು. ಫೆಬ್ರವರಿ 7ರಂದು ಪೇಂಟಿoಗ್ ಕೆಲಸ ಮುಗಿಸಿದ ಅವರು ಕೈ-ಕಾಲು ತೊಳೆಯುವುದಕ್ಕಾಗಿ ನೀರಿರುವ ಸ್ಥಳಕ್ಕೆ ಹೋಗಿದ್ದರು. ಅಲ್ಲಿಯೇ ಕುಸಿದು ಬಿದ್ದರು.
ಅಸ್ವಸ್ಥಗೊಂಡಿದ್ದ ಅಲ್ತಾಪ ಮಹ್ಮದ್ ಅವರನ್ನು ಆಸ್ಪತ್ರೆಗೆ ಕರೆತರಲಾಯಿತು. ಆದರೆ, ಅಷ್ಟರೊಳಗೆ ಅವರು ಸಾವನಪ್ಪಿರುವ ಬಗ್ಗೆ ವೈದ್ಯರು ಘೋಷಿಸಿದರು. ಅಲ್ತಾಪ ಮೊಹ್ಮದ್ ಅವರು ಕುಸಿದು ಬಿದ್ದ ಸ್ಥಳದಲ್ಲಿ ವಿದ್ಯುತ್ ಪರಿಕ್ಕರಗಳು ಬಿದ್ದಿರುವುದನ್ನು ಅವರ ಸಹೋದ್ಯೋಗಿ ಪಿ ಎಚ್ ಅಬ್ಬಾಸ್ ಅವರು ಗಮನಿಸಿದ್ದರು. ವಿದ್ಯುತ್ ಆಘಾತ ಅಥವಾ ಹೃದಯಘಾತದಿಂದ ಅವರು ಸಾವನಪ್ಪಿರುವ ಶಂಕೆವ್ಯಕ್ತಪಡಿಸಿದರು. ಈ ಬಗ್ಗೆ ತನಿಖೆಗಾಗಿ ಪಿ ಎಚ್ ಅಬ್ಬಾಸ್ ಅವರು ಪೊಲೀಸ್ ದೂರು ನೀಡಿದ್ದು, ಶಿರಸಿ ಮಾರುಕಟ್ಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದರು.