ವಿವಿಧ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿರುವ ಶಿರಸಿಯ ನಕಲಿ ಪತ್ರಕರ್ತ ರವೀಶ ಹೆಗಡೆ ಜೈಲು ಸೇರಿದ್ದಾರೆ.
ಶಿರಸಿ ಸೊಂಡ್ಲೆಬೈಲಿನ ರವೀಶ ಹೆಗಡೆ ಅವರು ಸ್ವಸ್ತಿಕ್ ಮಿಡಿಯಾ ಎಂಬ ಹೆಸರಿನ ಅಡಿ ರವೀಶ ಹೆಗಡೆ ಜಾಲತಾಣಗಳಲ್ಲಿ ಬರಹ ಪ್ರಕಟಿಸುತ್ತಿದ್ದು, ಪತ್ರಕರ್ತ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಅವರ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಅನೇಕ ದೂರುಗಳಿವೆ. ಆ ಪೈಕಿ ವಂಚನೆ ಪ್ರಕರಣಗಳು ಹೆಚ್ಚಿದ್ದು, ಸದ್ಯ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣವೊಂದರಲ್ಲಿ ರವೀಶ ಹೆಗಡೆ ಅವರು ಬಂಧನಕ್ಕೆ ಒಳಗಾಗಿದ್ದಾರೆ.
ಕಾರು ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂಪಾಯಿಪಡೆದು ವಂಚನೆ ಎಸಗಿದ್ದ ಆರೋಪದ ಅಡಿ ಪೊಲೀಸರು ರವೀಶ ಹೆಗಡೆ ಅವರನ್ನು ನ್ಯಾಯಾಲಯಕ್ಕೆ ಒಪ್ಪಿಸಿದರು. ವಿಚಾರಣೆ ನಡೆಸಿದ ನ್ಯಾಯಾಲಯವೂ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿತು. ಸದ್ಯ ಹೊನ್ನಾವರದ ಹೊಸಾಕುಳಿಯ ಗಣೇಶ್ ಹೆಗಡೆ ಅವರಿಗೆ ಕಡಿಮೆ ಬೆಲೆಯಲ್ಲಿ ಕಾರು ಕೊಡಿಸುವುದಾಗಿ ನಂಬಿಸಿ 5.55 ಲಕ್ಷಕ್ಕೂ ಅಧಿಕ ಹಣಪಡೆದು ವಂಚಿಸಿದ ಆರೋಪದ ಅಡಿ ರವೀಶ ಹೆಗಡೆ ಅವರು ಜೈಲಿಗೆ ಹೋಗಿದ್ದಾರೆ.
ಕಾರು ಕೊಡದೇ ಹಣವನ್ನು ಮರಳಿಸದೇ ಮೋಸ ಮಾಡಿದ ಬಗ್ಗೆ ಗಣೇಶ ಹೆಗಡೆ ಅವರು ದೂರು ನೀಡಿದ್ದು, ಬೆಂಗಳೂರಿನಲ್ಲಿ ಅಡಗಿದ್ದ ರವೀಶ ಹೆಗಡೆ ಅವರನ್ನು ಪೊಲೀಸರು ಹುಡುಕಿದ್ದಾರೆ. ವಿಶೇಷ ತಂಡದ ಜೊತೆ ಪೊಲೀಸರು ರವೀಶ ಹೆಗಡೆ ಅವರನ್ನು ವಶಕ್ಕೆಪಡೆದಿದ್ದಾರೆ.