ಆಟೋದಲ್ಲಿ ಹೆಚ್ಚು ಜನರನ್ನು ಹಾಕಿಕೊಂಡು ಹೊರಟಿದ್ದ ಚಾಲಕನನ್ನು ಮತ್ತೊಬ್ಬ ಚಾಲಕ ಪ್ರಶ್ನಿಸಿದ್ದು, ಇದೇ ವಿಷಯ ಅವರಿಬ್ಬರ ನಡುವಿನ ಹೊಡೆದಾಟಕ್ಕೆ ಕಾರಣವಾಗಿದೆ.
ಭಟ್ಕಳ ತಾಲೂಕಿನ ತಲಗೋಡ ಗ್ರಾಮದ ಒಂಕನ ಮನೆಯ ರಾಮಾ ಮಂಜಪ್ಪ ನಾಯ್ಕ ಹಾಗೂ ತಲಗೋಡ ಗ್ರಾಮದ ಹನುಮಂತ ಸುಬ್ರಾಯ ನಾಯ್ಕ ಅವರ ನಡುವೆ ಜಟಾಪಟಿ ನಡೆದಿದೆ. ಫೆ 3ರಂದು ಸಂಜೆ ಭಟ್ಕಳದ ಬಂದರ ರಸ್ತೆಯಲ್ಲಿರುವ ಅಟೋ ರಿಕ್ಷಾ ನಿಲ್ದಾಣದಲ್ಲಿ ಆಟೋ ಚಾಲಕ ರಾಮ ನಾಯ್ಕ ತಮ್ಮ ಅಟೋ
ರಿಕ್ಷಾದಲ್ಲಿ ೩ ಜನ ಪ್ರಯಾಣಿಕರನ್ನು ಹತ್ತಿಸಿಕೊಂಡಿದ್ದಾರೆ. ಅದಾದ ನಂತರ ಮತ್ತೆ ಎರಡು ಮಕ್ಕಳನ್ನು ಹತ್ತಿಸಿದ್ದಾರೆ. ರಿಕ್ಷಾ ಸರತಿಯಲ್ಲಿ ಕಾಯುತ್ತಿದ್ದ ಹನುಮಂತ ಸುಬ್ರಾಯ ನಾಯ್ಕ ಅವರು ಇದನ್ನು ಪ್ರಶ್ನಿಸಿದ್ದಾರೆ.
ರಾಮಾ ನಾಯ್ಕರನ್ನು ಹನುಂಮತ ನಾಯ್ಕ ಅವರು ಅಡ್ಡಗಟ್ಟಿದ್ದಾರೆ. ಅವಾಚ್ಯ ಶಬ್ದಗಳಿಂದ ಬೈದು ತಮ್ಮ ಅಟೋ ರಿಕ್ಷಾದಲ್ಲಿ ಇದ್ದ ಸ್ಟೀಲ್ ಬಾಟಲಿಯಿಂದ ಎದೆಗೆ ಹೊಡೆದಿದ್ದಾರೆ. ಕೈಯಿಂದ ಹೊಡೆದು ಉಗುರಿನಿಂದ ಕುತ್ತಿಗೆಯ ಭಾಗದಲ್ಲಿ ಪರಚಿ ದೂಡಿ ಹಾಕಿದ್ದಾರೆ. ನಂತರ ಎದುರಾಳಿಯ ಎಡಕೈಯನ್ನು ತಿರುವಿ ನೋವು ಪಡಿಸಿದ್ದು, ಕೊಲೆ ಮಾಡುವುದಾಗಿ ಜೀವದ ಬೆದರಿಕೆ ಹಾಕಿದ್ದಾರೆ.
ಈ ಕುರಿತು ರಾಮಾ ನಾಯ್ಕ ಅವರ ಪತ್ನಿ ಪಾರ್ವತಿ ನಾಯ್ಕ ಅವರು ಪೊಲೀಸ್ ದೂರು ನೀಡಿದ್ದಾರೆ.