ಯಲ್ಲಾಪುರದ ಆನಗೋಡು ಗ್ರಾಮ ಪಂಚಾಯತ ಅವಧಿಯ ಸದಸ್ಯರ ಅಧಿಕಾರ ಅವಧಿ ಮುಕ್ತಾಯವಾಗಿದೆ. ಐದು ವರ್ಷದ ಅವಧಿಯಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದವರಿಗೆ ಗ್ರಾಮ ಪಂಚಾಯತ ಸಿಬ್ಬಂದಿ ವರ್ಗ ಸನ್ಮಾನಿಸಿದೆ.
2021ರಲ್ಲಿ ಆನಗೋಡು ಗ್ರಾಮ ಪಂಚಾಯತ ಚುನಾವಣೆ ನಡೆದಿದ್ದು, ತೀವೃ ಪೈಪೋಟಿಯಿಂದ ಜನಪ್ರತಿನಿಧಿಗಳು ಆಯ್ಕೆ ಆಗಿದ್ದರು. ಮೊದಲ ಅವಧಿಗೆ ಪರಮೇಶ್ವರ ಗಾಂವ್ಕರ್ ಅವರು ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು. ಎರಡುವರೆ ವರ್ಷದ ನಂತರದ ಎರಡನೇ ಅವಧಿಗೆ ಮೀನಾಕ್ಷಿ ಭಟ್ಟ ಅವರು ಗ್ರಾಮ ಪಂಚಾಯತ ಅಧ್ಯಕ್ಷರಾಗಿ ಆಯ್ಕೆ ಆದರು. ಅವರ ಅಧ್ಯಕ್ಷ ಅವಧಿಯಲ್ಲಿ ಉಳಿದ ಸದಸ್ಯರು ಗ್ರಾಮ ಪಂಚಾಯತ ಅಭಿವೃದ್ಧಿಗೆ ಶ್ರಮಿಸಿದ್ದು, ಅದರ ಪರಿಣಾಮವಾಗಿ ಕೆರೆ ನಿರ್ಮಾಣ, ಅಲ್ಲಲ್ಲಿ ರಸ್ತೆ ದುರಸ್ಥಿ, ಕಾಲುವೆ ನಿರ್ಮಾಣ ಸೇರಿ ವಿವಿಧ ಕೆಲಸಗಳು ನಡೆದಿವೆ. ವೈಯಕ್ತಿಕ ಕೆಲಸಗಳಿಗೂ ಗ್ರಾಮ ಪಂಚಾಯತ ಸಹಕಾರ ನೀಡಿದೆ.
2026ರ ಫೆಬ್ರವರಿ 8ರಂದು ಆ ಎಲ್ಲಾ ಸದಸ್ಯರ ಅಧಿಕಾರ ಅವಧಿ ಮುಕ್ತಾಯವಾಗಿದೆ. ಈ ಹಿನ್ನಲೆ ಅಧಿಕಾರ ಅವಧಿ ಪೂರ್ಣಗೊಳಿಸಿದ ಗ್ರಾ ಪಂ ಸದಸ್ಯರಿಗೆ ಕಚೇರಿ ಸಿಬ್ಬಂದಿ ಗೌರವಿಸಿದ್ದಾರೆ. ಬುಧವಾರ ಗ್ರಾ ಪಂ ಸಭಾ ಭವನದಲ್ಲಿ ನಡೆದ ಸಮಾರಂಭದಲ್ಲಿ ಪಿಡಿಓ ರಾಜೇಶ ಶೇಟ್ ಅವರು ಸದಸ್ಯರ ಸೇವೆ ಸ್ಮರಿಸಿದ್ದಾರೆ. ಮಿನಾಕ್ಷಿ ತಿಮ್ಮಣ್ಣ ಭಟ್, ಕೆ ಟಿ ಹೆಗಡೆ, ಆರ್ ಆರ್ ಗಾಂವ್ಕರ್, ಪರಮೇಶ್ವರ ಗಾಂವ್ಕರ, ಕುಸುಮಾ ಬಾಬು ಸಿದ್ದಿ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಜನ ನೀಡಿದ ಸಹಕಾರದ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ. ಪ್ರಮುಖರಾದ ನರಸಿಂಹ ಭಟ್ಟ ಬೋಳಪಾಲ, ಆರ್ ಜಿ ಬಟ್ಟ ಮೇಗಿನಮನೆ, ಕೆ ಎನ್ ಭಟ್ಟ, ಜಿ ಜಿ ಭಟ್ಟ, ದತ್ತಾತ್ರೆಯ ಭಟ್ಟ, ಕೆ ಎಸ್ ಭಟ್ಟ ಹಾಗೂ ಆನಗೋಡಿನ ಫ್ರೆಂಡ್ಸ್ ಸ್ಪೋಟ್ಸ್ ಕ್ಲಬ್ ಸದಸ್ಯರು ಈ ಘಳಿಗೆಗೆ ಸಾಕ್ಷಿಯಾಗಿದ್ದಾರೆ.