ಹಳಿಯಾಳ ಕಾಳಗಿನಕೊಪ್ಪದ ಮಾದೇವಿ ಮೇತ್ರಿ ಅವರನ್ನು ಹುಕ್ಕೇರಿಯ ಗಣೇಶ ಹಳವಾರ್ ಅವರು ಹಿಂಬಾಲಿಸುತ್ತಿದ್ದು, `ನಿನ್ನ ಮಗಳನ್ನು ನನಗೆ ಮದುವೆ ಮಾಡಿಕೊಡು’ ಎಂದು ದುಂಬಾಲು ಬಿದ್ದಿದ್ದಾರೆ.
ಹಳಿಯಾಳದ ಕಾಳಗಿನಕೊಪ್ಪದಲ್ಲಿ ಮಾದೇವಿ ಮಂಜುನಾಥ ಮೇತ್ರಿ ಅವರು ವಾಸವಾಗಿದ್ದಾರೆ. ಕೂಲಿ ಕೆಲಸ ಮಾಡಿ ಅವರು ಬದುಕು ಕಟ್ಟಿಕೊಂಡಿದ್ದಾರೆ. ಹೀಗಿರುವಾಗ ಹುಕ್ಕೇರಿ ಗುಡಿಕ್ಷೇತ್ರದ ಗಣೇಶ ಅರ್ಜುನ ಹಳವಾರ ಅವರು ಮಾದೇವಿ ಮೇತ್ರಿ ಅವರ ಮಗಳನ್ನು ಮದುವೆ ಆಗಲು ಬಯಸಿದ್ದು, ಇದನ್ನು ಮಾದೇವಿ ಮೇತ್ರಿ ಅವರು ಒಪ್ಪುತ್ತಿಲ್ಲ.
ಈ ಹಿನ್ನಲೆ ಗಣೇಶ ಹಳವಾರ್ ಅವರು ಕಳೆದ ಆರು ತಿಂಗಳಿನಿAದ ಮಾದೇವಿ ಮೇತ್ರಿ ಅವರನ್ನು ಕಾಡಿಸುತ್ತಿದ್ದಾರೆ. `ನಿನ್ನ ಮಗಳನ್ನು ನನಗೆ ಕೊಡು’ ಎಂದು ಅವರು ಪದೇ ಪದೇ ಫೋನ್ ಮಾಡುತ್ತಿದ್ದಾರೆ. `ನಿನಗೆ ಮಾತ್ರ ಮಗಳನ್ನು ಕೊಡುವುದಿಲ್ಲ’ ಎಂದು ಮಾದೇವಿ ಮೇತ್ರಿ ಅವರು ಹೇಳಿದ್ದು, ಅದಾಗಿಯೂ ಗಣೇಶ ಹಳವಾರ್ ಫೋನ್ ಮಾಡುವುದನ್ನು ಬಿಟ್ಟಿಲ್ಲ. `ಪದೇ ಪದೇ ಫೋನ್ ಮಾಡಬೇಡ’ ಎಂದು ಸೂಚಿಸಿದರೂ ಆತನ ಕಾಟ ಕಡಿಮೆ ಆಗಿಲ್ಲ.
ಫೆ 14ರ ರಾತ್ರಿ ಮತ್ತೆ ಫೋನ್ ಮಾಡಿದ ಗಣೇಶ ಹಳವಾರ್ ಅವರು `ಮದುವೆ ಮಾಡಿಕೊಡು’ ಎಂದು ಹೇಳಿದ್ದಾರೆ. `ಮದುವೆ ಮಾಡಿಸದಿದ್ದರೆ ಮಗಳ ಜೊತೆ ನಿನ್ನನ್ನು ಸಾಯಿಸುವೆ’ ಎಂದು ಹೆದರಿಸಿದ್ದಾರೆ. ಹೀಗಾಗಿ ಮಾದೇವಿ ಮೇತ್ರಿ ಅವರು ರಕ್ಷಣೆಗಾಗಿ ಪೊಲೀಸರ ಮೊರೆ ಹೋಗಿದ್ದು, ಗಣೇಶ ಹಳವಾರ್ ವಿರುದ್ಧ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.