`ಸಾಮಾಜಿಕ ಸೇವೆ ಮಾಡುವಲ್ಲಿ ಕಾರವಾರದ ಸದಾಶಿವಗಡ ಲಯನ್ಸ ಕ್ಲಬ್ ಮುಂಚೂಣಿಯಲ್ಲಿದ್ದು, ಅದರ ಸೇವೆ ನಿರಂತರವಾಗಿರಲಿ’ ಎಂದು ಲಯನ್ಸ್ ಕ್ಲಬ್ಬಿನ ಡೆಸ್ಟಿಕ್ ಗವರ್ನರ್ ಜೈಮೊಲ್ ನಾಯ್ಕ ಅವರು ಹೇಳಿದ್ದಾರೆ.
ವಾರ್ಷಿಕ ಭೇಟಿ ಕಾರ್ಯಕ್ರಮದ ಅಂಗವಾಗಿ ಅಸ್ನೋಟಿ ಶಿವಾಜಿ ಮಂದಿರಕ್ಕೆ ಆಗಮಿಸಿದ ಅವರು ಲಯನ್ಸ ಸೇವೆಯನ್ನು ಶ್ಲಾಘಿಸಿದರು. `ಗ್ರಾಮೀಣ ಭಾಗದ ಜನರ ಜೀವನ ಮಟ್ಟ ಸುಧಾರಣೆಗೆ ಲಯನ್ಸ ಕ್ಲಬ್ ಶ್ರಮಿಸುತ್ತಿದೆ. ಇದಕ್ಕೆ ಪೂರಕವಾಗಿ ಶಿವಾಜಿ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಆಹಾರ ಧಾನ್ಯ ಹಾಗೂ ಪ್ರೇಮ ಆಶ್ರಮ ಟ್ರಸ್ಟ್ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿನಿಯರ ಅನುಕೂಲಕ್ಕೆ ಬರ್ನಿಂಗ್ ಕಂಟ್ರೋಲ್ ಮಿಶನ್ ಒದಗಿಸುವೆ’ ಎಂದು ಅವರು ಘೋಷಿಸಿದರು.
ಲಯನ್ಸ ಪ್ರಮುಖರಾದ ಡಾ ಕೀರ್ತಿ ನಾಯ್ಕ ಅವರು `ಕಾರವಾರ ತನ್ನ ಜನ್ಮಭೂಮಿಯಾಗಿದ್ದು, ಇಲ್ಲಿ ಭೇಟಿ ನೀಡುವುದು ಖುಷಿ ನೀಡುತ್ತದೆ. ಸೇವೆ ಮಾಡುವ ಮನಸ್ಸಿರುವವರಿಗೆ ಲಯನ್ಸ ಕ್ಲಬ್ ಅವಕಾಶ ನೀಡುತ್ತಿದೆ’ ಎಂದರು. ವೇದಿಕೆಯಲ್ಲಿದ್ದ ರಾಹುಲ್ ವೇರೇಕರ್, ರಾಜೇಶ ಸಾಲೇಹಿತ್ತಲ, ಅನೀಲ ಶೇಠ್ ಅವರು ಮಾತನಾಡಿದರು.
ಲಯನ್ಸ್ ಕ್ಲಬ್ಬಿನ ಅಧ್ಯಕ್ಷ ನಯೀಮ್ ಮುಖಾದಮ್ ಅವರು ಅಧ್ಯಕ್ಷತೆವಹಿಸಿದ್ದರು. ಕ್ಲಬ್ಬಿನ ಮಾಜಿ ಅಧ್ಯಕ್ಷರಾದ ರಾಮಚಂದ್ರ ಅಂದ್ಲಮನೆ, ಸುನೀಲ್ ಐಗಳ್ ಹಾಗೂ ಜಯಶೀಲಾ ಬಿಷ್ಟಣ್ಣನವರ ಅವರು ವೇದಿಕೆಯಲ್ಲಿದ್ದರು. ಜೆ ಬಿ ತಿಪ್ಪೇಸ್ವಾಮಿ ಅವರು ವರದಿ ವಾಚಿಸಿದ್ದು, ಸಂದೀಪ್ ಅಣ್ವೇಕರ ಅವರು ಕಾರ್ಯಕ್ರಮ ನಿರ್ವಹಿಸಿದರು. ರೋಶನ್ ರೇವಣಕರ ಅವರು ಪರಿಚಯ ಭಾಷಣ ಮಾಡಿದರು. ಸೋನಿಯಾ ಅಣ್ವೇಕರ ಅವರು ಧ್ವಜವಂದನೆ ನೆರವೇರಿಸಿದರು. ಗಣೇಶ ಬಿಷ್ಟಣ್ಣನವರ ಅವರು ವಂದಿಸಿದರು.