ಕೊಲೆ ಯತ್ನಕ್ಕೆ ಸಂಬಂಧಿಸಿದ ಆರೋಪಿಗೆ ಚಾಕು ತಾಗಿ ಆತ ಮೃತಪಡಲು ಕಾರಣನಾದ ಮಹಮ್ಮದ ಫಾರೂಕ್ ಮಹಮ್ಮದ ಷಫೀವುಲಾ ಪಟೇಲ್ ಅವರ ಮೇಲಿನ ಆಪಾದನೆಯು ರುಜುವಾತಾಗಿದ್ದು, ಆರೋಪಿಗೆ 10 ವರ್ಷ ಸಾದಾ ಕಾರಾಗೃಹ ಶಿಕ್ಷೆ ಹಾಗೂ ರೂ10000 ದಂಡ ಹಾಗೂ ಮೃತನ ಅವಲಂಬಿತ ತಾಯಿಗೆ 50,000ರೂ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
ಶಿರಸಿಯ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನ್ಯಾಯಾಧೀಶರಾದ ಕಿರಣ ಕಿಣಿ ತೀರ್ಪು ನೀಡಿದ್ದಾರೆ. ಆರೋಪಿತನು ಸಿರ್ಸಿ ನಗರದ ಸಿರ್ಸಿ-ಕರಿಗುಂಡಿ ರಸ್ತೆಯಲ್ಲಿ ಕಸ್ತೂರಬಾನಗರ ಕ್ರಾಸ್ ಹತ್ತಿರ ರಸ್ತೆ ಬಳಿ 2019ರಲ್ಲಿ ಮಹಮ್ಮದ ಅನೀಸ್ ತಹಶೀಲ್ದಾರ ಇತನು ತನ್ನ ಮೋಟಾರ್ ಸೈಕಲ್ ಮೇಲೆ ಕುಳಿತ್ತಿದ್ದಾಗ ಆತನನ್ನು ಕೊಲೆ ಮಾಡುವ ಉದ್ದೇಶದಿಂದ ಇತರೆ ಆರೋಪಿತರು ಸೇರಿಕೊಂಡು ಮಾರುತಿ ಕಾರ್ ನಲ್ಲಿ ಹೋಗಿ, ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದಿದ್ದರು
ನಂತರ ಕಾರಿನಲ್ಲಿದ್ದ ಕಬ್ಬಿಣದ ಪೈಪ್, ಬಡಿಗೆ ರಾಡನಿಂದ ಹೊಡೆದು ಚಾಕುವಿನಿಂದ ಹೊಟ್ಟೆ, ಎದೆಗೆ, ಕೈ ಕಾಲುಗಳಿಗೆ ಚುಚ್ಚುವಾಗ ಸಾಕ್ಷಿದಾರ ಮಹಮ್ಮದ ಅನೀಸ್ ತಹಶೀಲ್ದಾರ ಇತನು ಜೋರಾಗಿ ಕೂಗಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಆ ವೇಳೆ ಆರೋಪಿತರು ಮಹಮ್ಮದ ಅನೀಸ್ ತಹಶೀಲ್ದಾರ ಇತನಿಗೆ ಹೊಡೆಯುವಾಗ ತಮ್ಮ ಕೈಯಲ್ಲಿದ್ದ ಚಾಕುವಿನಿಂದ ಇರಿದರೆ ಆತನು ಸಾಯುತ್ತಾನೆ ಅಂತಾ ಗೊತ್ತಿದ್ದೂ ತನ್ನ ಬಳಿಯಿದ್ದ ಚಾಕುವಿನಿಂದ ಮೃತ ಅಸ್ಲಂ ಸೈಯ್ಯದ ಇತನಿಗೆ ಹಿಂದಿನಿದ ಇರಿದು ಕೊಲೆ ಮಾಡಿದ್ದಲ್ಲದೇ, ಇತರೆ ಆರೋಪಿತರು ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ತಾವು ಕೃತ್ಯದ ವೇಳೆ ಧರಿಸಿದ ರಕ್ತ ತಾಗಿದ ಬಟ್ಟೆಗಳನ್ನು ಕುಮಟಾದ ಸಂತೆಗುಳಿಯಲ್ಲಿ ಮತ್ತು ಇನ್ನೊಬ್ಬ ಆರೋಪಿಯ ಮನೆಯ ಅಡಿಗೆ ಕೋಣೆಯಲ್ಲಿರುವ ಒಲೆಯಲ್ಲಿ ಹಾಕಿ ಸಾಕ್ಷ್ಯ, ನಾಶ ಪಡಿಸಿದಲ್ಲದೇ, ಇತರೇ ಆರೋಪಿತರಿಗೆ ತನ್ನ ಮನೆಯಲ್ಲಿ ಆಶ್ರಯ ನೀಡಿ ತಲೆಮರೆಸಿಕೊಳ್ಳಲು ಸಹಕರಿಸಿದಲ್ಲದೇ, ತನ್ನ ಕಾರನಲ್ಲಿ ಆರೋಪಿತನ ಮನೆಗೆ ಕರೆದುಕೊಂಡು ಹೋಗಿ ಆಶ್ರಯ ನೀಡಿದಲ್ಲದೇ, ಆರೋಪಿತರು ಆರೋಪಿತರು ಪರಾರಿಯಾಗಿ ತಲೆಮರೆಸಿಕೊಳ್ಳಲು ಸಹಕರಿಸುವ ಉದ್ದೇಶದಿಂದ ಮತ್ತು ಆರೋಪಿತರು ಕುಮಟಾದ ಮಿರ್ಜಾನ್ ನಲ್ಲಿ ಹಾಗೂ ಕುಮಟಾದ ಸಂತೆಗುಳಿಯಲ್ಲಿ ಉಳಿಯಲು ಆಶ್ರಯ, ಊಟ, ವಾಹನದ ವ್ಯವಸ್ಥೆ ಮಾಡಿದ ಅಪರಾಧ ಬಗ್ಗೆ, ಆರೋಪಿತರ ವಿರುದ್ಧ ದೋಷಾರೋಪಣೆ ಪತ್ರ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿ ವಿಚಾರಣೆ ನಡೆಸಲಾಗಿತ್ತು.
ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯ ಅಂದಿನ ತನಿಖಾಧಿಕಾರಿಯಾದ ಪೊಲೀಸ್ ಉಪ ನಿರೀಕ್ಷಕ ಶಶಿಕುಮಾರ ಸಿ.ಆರ್ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು ಹಾಗೂ ಪೊಲೀಸ್ ಹೆಡ್ ಕಾನ್ಸಟೆಬಲ್ ರಾದ ಬಿ.ಆರ್. ಹನುಮಂತ ಹಾಗೂ ರಮೇಶ ಮುಚ್ಚಿಂಡಿ ಇವರು ಸಾಕ್ಷಿ ವಿಚಾರಣೆಯ ಕಾಲಕ್ಕೆ ಸಾಕ್ಷಿದಾರರನ್ನು ಸಮಯೋಜಿತ ಪ್ರಕರಣದಲ್ಲಿ ಹಾಜರು ಪಡಿಸಿ ಆರೋಪಿತರನ್ನು ಶಿಕ್ಷೆಗೆ ಗುರಿಪಡಿಸುವಲ್ಲಿ ಸಹಕರಿಸಿದ್ದರು.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ರಾಜೇಶ್ ಎಂ. ಮಳಗಿಕರ್ ಪ್ರಕರಣದ ವಿದ್ಯಮಾನಗಳನ್ನು ಮತ್ತು ಸಾಕ್ಷಿದಾರರ ಸಾಕ್ಷಕಿವನ್ನು ಗಂಭೀರವಾಗಿ ತೆಗೆದುಕೊಂಡು ಆರೋಪಿತನಿಗೆ ಶಿಕ್ಷೆ ವಿಧಿಸಬೇಕೆಂದು ಸುದೀರ್ಘ ವಾದ ಮಂಡಿಸಿದ್ದರು.