ಗ್ರಾಮ ಒನ್ ಕೇಂದ್ರದಲ್ಲಿ ಕೆಲಸ ಮಾಡಿಕೊಂಡಿದ್ದ ಮಹಮದ್ ಶೇಖ್ ಅವರು ಆನ್‌ಲೈನ್ ಗೇಮ್ ಆಟದ ಚಟಕ್ಕೆ ಹಣ ಕಳೆದುಕೊಂಡಿದ್ದಾರೆ. ಅದಾಗಿಯೂ ಆನ್‌ಲೈನ್ ಗೇಮ್ ವ್ಯಾಮೋಹ ಬಿಡದ ಅವರು ಸಾಲ ಮಾಡಿ ಆ ಆಟ ಆಡಿದ್ದು, ಮನೆಯಲ್ಲಿ ಬೈದ ಕಾರಣ ಮನೆ ಬಿಟ್ಟು ಹೋಗಿದ್ದಾರೆ!
ಯಲ್ಲಾಪುರದ ಜಯಂತಿ ನಗರದಲ್ಲಿ ಮಹಮದ್ ಇಂತ್ಯಾಮ ಗೌಸಲಿ ಶೇಖ್ (24) ಅವರು ವಾಸವಾಗಿದ್ದರು. ತಮ್ಮ ಮೊಬೈಲಿನಲ್ಲಿ ಅವರು `ಬಿಗ್ ಡ್ಯಾಡಿ’ ಎಂಬ ಆನ್ ಲೈನ್ ಗೇಮ್ ಆಡುತ್ತಿದ್ದರು. ತಮ್ಮಲ್ಲಿದ್ದ ಹಣವನ್ನೆಲ್ಲ ಆ ಆಟದ ಮೇಲೆ ಸುರಿದಿದ್ದ ಮಹಮದ್ ಅವರು ಆ ಆಟ ಆಡುವುದಕ್ಕಾಗಿ ಸಾಲವನ್ನು ಮಾಡಿದ್ದರು. ಆದರೆ, ಹಣ ಗೆದ್ದ ಉದಾಹರಣೆಗಳಿರಲಿಲ್ಲ. ಅದಾಗಿಯೂ, ಅವರ ಆನ್‌ಲೈನ್ ಆಟದ ವ್ಯಾಮೋಹ ಕಡಿಮೆ ಆಗಿರಲಿಲ್ಲ.
ಫೆಬ್ರವರಿ 4ರ ರಾತ್ರಿ ಮನೆಗೆ ಬಂದ ನಂತರವೂ ಮಹಮದ್ ಶೇಖ್ ಅವರು ಮೊಬೈಲ್ ನೋಡುತ್ತಿದ್ದರು. ಬೆಂಬಿಡದೇ ಅವರು `ಬಿಗ್ ಡ್ಯಾಡಿ’ ಎಂಬ ಆಟ ಆಡುತ್ತಿದ್ದರು. ಇದನ್ನು ನೋಡಿದ ಕುಟುಂಬದವರು `ಇನ್ಮುಂದೆ ಆ ಆಟ ಆಡಬೇಡ’ ಎಂದು ಸಲಹೆ ನೀಡಿದರು. ಈ ವಿಷಯವಾಗಿ ಮನೆಯಲ್ಲಿ ಕೆಲ ವಾಗ್ವಾದ-ಗೊಂದಲ ಉಂಟಾಗಿದ್ದು, ಮಹಮದ್ ಶೇಖ್ ಅವರು ಇದರಿಂದ ಮಾನಸಿಕವಾಗಿ ಕುಗ್ಗಿದರು.
ಆ ದಿನ ರಾತ್ರಿ ಮನೆಯಲ್ಲಿ ಮಲಗಿದ್ದ ಅವರು ಮರು ದಿನ ಮನೆಯಲ್ಲಿ ಕಾಣಲಿಲ್ಲ. ಸಂಜೆಯವರೆಗೆ ಹುಡುಕಾಟ ನಡೆಸಿದರೂ ಮಹಮದ್ ಶೇಖ್ ಅವರ ಸುಳಿವು ಸಿಗಲಿಲ್ಲ. ಹೀಗಾಗಿ ಸಿವಿಲ್ ಇಂಜಿನಿಯರ್ ಆಗಿರುವ ಜಾವಿದ್ ಗೌಸ್ ಅಲಿ ಶೇಖ್ ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಈ ಎಲ್ಲಾ ವಿಷಯ ಆಲಿಸಿದ ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದು, ಮಹಮದ್ ಶೇಖ್ ಅವರ ಶೋಧ ಶುರು ಮಾಡಿದ್ದಾರೆ.
`ಜೂಜಾಟ ಜೀವನಕ್ಕೆ ಮಾರಕ’