ಕಾರವಾರದ ನಗೆಕೋವೆ ಬಳಿ ಉಲ್ಲಾಸ ನಾಯ್ಕ ಅವರ ಮನೆ ಮುಂದೆ ನಡೆದು ಹೋಗುತ್ತಿದ್ದ ದಾಕ್ಷಾಯಣಿ ಗೌಡ ಅವರಿಗೆ ಮಿನಿ ಲಾರಿ ಗುದ್ದಿದ್ದು, ದಾಕ್ಷಾಯಣಿ ಗೌಡ ಅವರು ಸಾವನಪ್ಪಿದ್ದಾರೆ.
ಕಾರವಾರದ ನಗೆಕೋವೆ ಗ್ರಾಮದಲ್ಲಿ ದಾಕ್ಷಾಯಣಿ ಯಶ್ವಂತ ಗೌಡ (15) ಅವರು ವಾಸವಾಗಿದ್ದರು. ಹೈಸ್ಕೂಲ್ ವಿದ್ಯಾರ್ಥಿನಿಯಾಗಿದ್ದ ಅವರು ಬಾಲ್ಯದಿಂದಲೂ ಪ್ರತಿಭಾನ್ವಿತರಾಗಿದ್ದರು. ಭಾನುವಾರ ಮಧ್ಯಾಹ್ನ ತಮ್ಮ ತಾಯಿ ಜಯಲಕ್ಷಿ ಗೌಡ ಅವರ ಜೊತೆ ದಾಕ್ಷಾಯಣಿ ಗೌಡ ಅವರು ರಸ್ತೆ ಬದಿ ನಡೆದು ಹೋಗುತ್ತಿದ್ದರು. ನಗೆ ಗ್ರಾಮದಿಂದ ಕೋವೆ ಗ್ರಾಮದ ಕಡೆ ಹೋಗುವಾಗ ಎದುರಿನಿಂದ ಐಸರ್ ಲಾರಿ ವೇಗವಾಗಿ ಬಂದಿತು.
ಕೋವೆಯ ಕಡೆ ಹೋಗುತ್ತಿದ್ದ ದಾಕ್ಷಾಯಣಿ ಗೌಡ ಅವರಿಗೆ ಆ ಲಾರಿ ಗುದ್ದಿತು. ಎದುರಿನಿಂದ ಲಾರಿ ಗುದ್ದಿದ ರಭಸಕ್ಕೆ ದಾಕ್ಷಾಯಣಿ ಗೌಡ ಅವರು ಮಾರಣಾಂತಿಕವಾಗಿ ಗಾಯಗೊಂಡರು. ಅದಾದ ನಂತರ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಅಲ್ಲಿನ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದರು. ಲಾರಿ ಓಡಿಸುತ್ತಿದ್ದ ಕೆರವಡಿಯ ಕಿರಣ ದೇವಿದಾಸ ನಾಯ್ಕ ಅವರು ಅಪಘಾತದ ನಂತರ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದು, ಸ್ಥಳೀಯರು ಚಾಲಕನನ್ನು ಹಿಡಿದರು.
`ನಿಧಾನವಾಗಿ ವಾಹನ ಓಡಿಸಿ. ಮಕ್ಕಳಿರುವ ಕಡೆ ವಾಹನ ನಿಲ್ಲಿಸಿ, ನಂತರ ಮುಂದೆ ಚಲಾಯಿಸಿ’