`ಸರ್ಕಾರ ಸೂಚಿಸಿದ ಎಲ್ಲಾ ಕಾಮಗಾರಿಗಳನ್ನು ಮಾರ್ಚ 15ರ ಒಳಗೆ ಮುಗಿಸುವುದರೊಂದಿಗೆ ಅನುದಾನವನ್ನು ಸರಿಯಾಗಿ ಬಳಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಅನುದಾನ ಮರಳದಂತೆ ಎಚ್ಚರಿಕೆವಹಿಸಬೇಕು’ ಎಂದು ಮೀನುಗಾರಿಕೆ ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ ಎಸ್ ವೈದ್ಯ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಬುಧವಾರ ಹೊನ್ನಾವರ ತಾಲೂಕಾ ಪಂಚಾಯತ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, `ಆರೋಗ್ಯ ಇಲಾಖೆಯಿಂದ ಯಾವುದೇ ಔಷಧವನ್ನು ಹೊರಗಿನ ಮೆಡಿಕಲ್‌ನಿಂದ ತರುವಂತೆ ಚೀಟಿ ಬರೆದುಕೊಡಬಾರದು, ಜನರು ಔಷಧಕ್ಕಾಗಿ ಅಲೆದಾಡುವಂತಾಗಬಾರದು. ಅಂತಹ ಪ್ರಕರಣಗಳು ಕಂಡುಬoದಲ್ಲಿ ಶಿಸ್ತು ಕ್ರಮ ಜರುಗಿಸಲಾಗುತ್ತದೆ’ ಎಂದು ಎಚ್ಚರಿಸಿದರು. `ಮಾರ್ಚ 18 ರಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ನಡೆಯುತ್ತಿದ್ದು, ತಾಲೂಕಿನಲ್ಲಿ ಈ ಬಾರಿ ಶೇ 100ರಷ್ಟ್ಟು ಫಲಿತಾಂಶ ಬರಬೇಕು’ ಎಂದು ಸೂಚಿಸಿದರು. `ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಗೆ ಬರುವ ವಿಧ್ಯಾರ್ಥಿಗಳಿಗೆ ಉಚಿತ ಹಾಗೂ ವಿಶೇಷÀ ಬಸ್ ವ್ಯವಸ್ಥೆ ಕಲ್ಪಿಸಿ’ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕರಿಗೆ ಸೂಚಿಸಿದರು. ತಾಲೂಕಿನಲ್ಲಿ ಶಾಲೆ, ಅಂಗನವಾಡಿ, ಅಕ್ಷರ ದಾಸೋಹ ಕೊಠಡಿ, ಹಾಗೂ ಶಾಲಾ ಶೌಚಾಲಯಗಳಿಗೆ ಕಟ್ಟಡಗಳ ಅಗತ್ಯವಿದ್ದಲ್ಲಿ ಕೂಡಲೆ ಗುರುತಿಸಿ ಪಟ್ಟಿಮಾಡಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ರೈತರ ಹಿತದೃಷ್ಟಿಯಿಂದ ಅಡಿಕೆ ಬೆಳಗೆ ಸಂಬAಧಿಸಿದAತೆ ಎಲೆ ಚುಕ್ಕಿರೋಗ ನಿಯಂತ್ರಣಕ್ಕೆ ಕ್ರಮ ವಹಿಸುವಂತೆ ತೋಟಗಾರಿಕಾ ಇಲಾಖಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. `ಅರಣ್ಯ ಇಲಾಖೆಯ ಕಟ್ಟಿಗೆ ಡಿಪೋಗಳಲ್ಲಿ ಅಗತ್ಯವಿರುವ ಕಟ್ಟಿಗೆ ಸಂಗ್ರಹಕ್ಕೆ ಕ್ರಮಕೈಗೊಳ್ಳಬೇಕು’ ಎಂದರು.
`ಸಿ.ಎಸ್.ಆರ್. ಯೋಜನೆಯಡಿ ಹಿರಿಯ ಪ್ರಾಥಮಿಕ ಶಾಲೆ ನಗರಬಸ್ತಿಕೇರಿ (30 ಲಕ್ಷ),ಸರಳಗಿ – ಉಪ್ಪೋಣಿ (60 ಲಕ್ಷ),ಉರ್ದು ಶಾಲೆ ನಗರಬಸ್ತಿಕೇರಿ (16 ಲಕ್ಷ), ಗಾಳಗುರು ನಗರಬಸ್ತಿಕೇರಿ (16 ಲಕ್ಷ), ನಗರೆ 2 ನಗರಬಸ್ತಿಕೇರಿ (16 ಲಕ್ಷ), ಉರ್ದು ಶಾಲೆ ಸರಳಗಿ (30 ಲಕ್ಷ), ಬೈಲಗದ್ದೆ ಮಹಿಮೆ (30 ಲಕ್ಷ),ಉಪ್ಪೋಣೀ (16 ಲಕ್ಷ), ಮಾಳ್ಕೋಡ ಇಡಗುಂಜಿ, (26 ಲಕ್ಷ), ಬೊಮ್ಮನಕೋಡ್ಲು ರಸ್ತೆ (45 ಲಕ್ಷ), ರಿಟೇನಿಂಗ್ ವಾಲ್ (50 ಲಕ್ಷ), ಒಟ್ಟಾರೆ, 15 ಕಲಿಕಾ ಕೊಠಡಿಗಳು, 01 ರಸ್ತೆ ಹಾಗೂ 01 ರಿಟೇನಿಂಗ್ ವಾಲ್.) ಸಂಬoಧಿಸಿದoತೆ ಅನುದಾನ ಬಿಡುಗಡೆಯಾಗಿದ್ದು ತಾಲೂಕಿನಲ್ಲಿಯೇ ಅತೀ ಹೆಚ್ಚಿನ ಪ್ರಮಾಣದಲ್ಲಿ ಇದೆ ಮೊದಲನೇ ಬಾರಿಗೆ ಸಾಧ್ಯವಾಗಿದೆ’ ಎಂದರು.