ಹೊನ್ನಾವರದ ಹಳದಿಪುರದಲ್ಲಿ ನಡೆದ ಅವಘಡದಲ್ಲಿ ಅಡಿಕೆ ವ್ಯಾಪಾರಿಯೊಬ್ಬರು ಸಾವನಪ್ಪಿದ್ದಾರೆ.
ಬೈಕ್ ಹಾಗೂ ಕಾರಿನ ನಡುವೆ ನಡೆದ ಅಪಘಾತದಲ್ಲಿ ಹಳದಿಪುರದ ವಿನಾಯಕ ರಘುವೀರ ಶ್ಯಾನಭಾಗ (50) ಅವರ ಬದುಕು ಕೊನೆಯಾಗಿದೆ. ವಿನಾಯಕ ಶ್ಯಾನಭಾಗ ಅವರು ಅಡಿಕೆ ವ್ಯಾಪಾರಿಯಾಗಿ ಬದುಕು ಕಟ್ಟಿಕೊಂಡಿದ್ದರು. ಸ್ನೇಹಜೀವಿ ಆಗಿದ್ದ ಅವರು ಜನಪರ ನಿಲುವು ಹೊಂದಿದ್ದರು. ಸಮಾಜಮುಖಿ ವ್ಯಕ್ತಿತ್ವದಿಂದ ಅವರು ಜನ ಮನ್ನಣೆಗಳಿಸಿದ್ದರು.
ಭಾನುವಾರ ಬೆಳಗ್ಗೆ ನಡೆದ ದುರಂತದಲ್ಲಿ ಅವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡರು. ಅವರನ್ನು ಸ್ಥಳೀಯರು ರಕ್ಷಿಸುವ ಪ್ರಯತ್ನ ಮಾಡಿದರು. ಪೊಲೀಸರ ಜೊತೆ ಸೇರಿ ಅಲ್ಲಿದ್ದ ಜನ ವಿನಾಯಕ ಶ್ಯಾನಭಾಗ ಅವರನ್ನು ಹೊನ್ನಾವರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು. ಅಲ್ಲಿ ಅವರಿಗೆ ಪ್ರಾಥಮಿಕ ಚಿಕಿತ್ಸೆ ಸಿಕ್ಕಿದ್ದು, ಪರಿಸ್ಥಿತಿ ಚಿಂತಾಜನಕವಾಗಿದ್ದರಿoದ ವೈದ್ಯರು ದೊಡ್ಡ ಆಸ್ಪತ್ರೆಉ ಶಿಫಾರಸ್ಸು ಮಾಡಿದರು.
ಹೀಗಾಗಿ ವಿನಾಯಕ ಶ್ಯಾನಭಾಗ ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರಿಗೆ ಚಿಕಿತ್ಸೆ ಮುಂದುವರೆದರೂ ಅದಕ್ಕೆ ಅವರ ದೇಹ ಸ್ಪಂದಿಸಲಿಲ್ಲ. ಪರಿಣಾಮ ವಿನಾಯಕ ಶ್ಯಾನಭಾಗ ಅವರು ಅಲ್ಲಿಯೇ ಕೊನೆಯುಸಿರೆಳೆದರು.
`ನಿಧಾನವಾಗಿ ವಾಹನ ಓಡಿಸಿ. ಸಂಚಾರಿ ನಿಯಮಗಳನ್ನು ತಪ್ಪದೇ ಪಾಲಿಸಿ’