ಕಾರವಾರದ ಸಿದ್ಧರದ ಶಿಕ್ಷಕ ಸುನೀಲ ಗಾಂವ್ಕರ್ ಅವರ ಸದಾಶಿವಗಡದಲ್ಲಿನ ಮನೆಯಲ್ಲಿ ಕಳ್ಳತನ ನಡೆದಿದೆ. ಶಿಕ್ಷಕರು ಶಾಲೆಗೆ ಹೋದ ಸನ್ನಿವೇಶ ನೋಡಿದ ಕಳ್ಳರು ಮನೆಗೆ ನುಗ್ಗಿ ತಮ್ಮ ಕೈ ಚಳಕ ಪ್ರದರ್ಶಿಸಿದ್ದಾರೆ.
ಕಾರವಾರದ ಸದಾಶಿವಗಡ ಬಳಿಯ ಚಿಂಚೇವಾಡದಲ್ಲಿ ಸುನೀಲ ರಾಮಚಂದ್ರ ಗಾಂವ್ಕರ್ ಅವರು ವಾಸವಾಗಿದ್ದಾರೆ. ಅವರು ಸಿದ್ಧರದ ಮಲ್ಲಿಕಾರ್ಜುನ ಹೈಸ್ಕೂಲಿನಲ್ಲಿ ಶಿಕ್ಷಕರಾಗಿದ್ದಾರೆ. ಸುನೀಲ ಗಾಂವ್ಕರ್ ಅವರ ಪುತ್ರಿ ರೀತು ಅವರು ಅಮೃತ ವಿದ್ಯಾಲಯದಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದು, ಕಳ್ಳತನ ನಡೆದಿರುವುದನ್ನು ರೀತು ಅವರೇ ಮೊದಲು ನೋಡಿದ್ದಾರೆ.
ಫೆಬ್ರವರಿ 13ರ ಬೆಳಗ್ಗೆ 9.15ಕ್ಕೆ . ಸುನೀಲ ಗಾಂವ್ಕರ್ ಅವರು ಮನೆ ಬಾಗಿಲು ಹಾಕಿದ್ದರು. ಭದ್ರವಾದ ಬೀಗವನ್ನು ಅಳವಡಿಸಿ ಅವರು ಶಾಲೆಗೆ ಹೋಗಿದ್ದರು. ರೀತು ಅವರು ಸಹ ಅಮೃತ ವಿದ್ಯಾಲಯಕ್ಕೆ ಹೋಗಿದ್ದು, ಸಂಜೆ 4 ಗಂಟೆಗೆ ಮನೆಗೆ ಮರಳಿದ್ದರು. ಮನೆ ಬಾಗಿಲು ತೆರೆದಿರುವುದನ್ನು ನೋಡಿದ ರೀತು ಅವರು ಆತಂಕಕ್ಕೆ ಒಳಗಾದರು. . ಸುನೀಲ ಗಾಂವ್ಕರ್ ಅವರು ಶಾಲೆ ಮುಗಿಸಿ ಬಂದಾಗ ಮನೆ ಬಾಗಿಲು ಮುರಿದಿದ್ದು, ಕಳ್ಳರು 48 ಸಾವಿರ ರೂ ಮೌಲ್ಯದ ಸ್ವತ್ತುಗಳನ್ನು ಕದ್ದಿರುವುದು ಗೊತ್ತಾಯಿತು.
ಕಳ್ಳರು ಮಾಡಿದ ಕಿತಾಪತಿಯ ಬಗ್ಗೆ ಸುನೀಲ ಗಾಂವ್ಕರ್ ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಚಿತ್ತಾಕುಲ ಪೊಲೀಸರು ಪ್ರಕರಣ ದಾಖಲಿಸಿದ್ದು, ಕಳ್ಳರ ಶೋಧ ನಡೆಸಿದ್ದಾರೆ.
`ಕಳ್ಳತನ ತಡೆಗೆ ಸಿಸಿ ಕ್ಯಾಮರಾ ಸಹಕಾರಿ’