ಅರಣ್ಯ ಅತಿಕ್ರಮಣದಾರರಿಗೆ ಭೂಮಿ ಹಕ್ಕು ಒದಗಿಸುವ ವಿಷಯವಾಗಿ ಮಹಜರ್ ಮಾಡಲು ರಾಜ್ಯ ಅರಣ್ಯ ಭೂಮಿ ಹಕ್ಕು ಉಸ್ತುವಾರಿ ಸಮಿತಿಯು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದು, ಆ ನಿರ್ದೇಶನಕ್ಕೆ ವ್ಯತಿರಿಕ್ತವಾಗಿ ಅಧಿಕಾರಿಗಳು ವರ್ತಿಸುತ್ತಿದ್ದಾರೆ.
`ನಿರ್ಧಿಷ್ಟ ದಾಖಲೆ ಕೊರತೆಯಿಂದ ದಾಖಲೆಗಾಗಿ ವಿವಿಧ ಅರಣ್ಯ ಭೂಮಿ ಹಕ್ಕು ಸಮಿತಿಯಲ್ಲಿ ತಿರಸ್ಕರಿಸಿದ ಅರ್ಜಿಗಳ ಕ್ಷೇತ್ರದ ಸಾಗುವಳಿ ದೃಢೀರಣಕ್ಕೆ ಉನ್ನತ ಮಟ್ಟದ ಸಮಿತಿಯಿಂದ ಮಹಜರ್ ಮಾಡಬೇಕು. ಮಹಜರ್ ವರದಿಯನ್ನು ದಾಖಲೆಯಾಗಿ ಪರಿಗಣಿಸಬೇಕು’ ಎಂದು ರಾಜ್ಯ ಉಸ್ತವಾರಿ ಸಮಿತಿಯು ಜಿಲ್ಲಾಧಿಕಾರಿಗೆ ಜನವರಿ 3ರಂದು ನಿರ್ದೇಶನ ನೀಡಿತ್ತು. ಆದರೆ, ನಿರ್ದೇಶನದ ಮೂಲ ಅಂಶವಾದ ಸಾಗುವಳಿ ಕುರುಹು ಮತ್ತು ಸಾಂದರ್ಭೀಕ ದಾಖಲೆಗಳನ್ನು ಮಹಜರು ವೇಳೆ ಅಧಿಕಾರಿಗಳು ಪರಿಗಣಿಸುತ್ತಲೇ ಇಲ್ಲ. ಅದರ ಬದಲು ಅರ್ಜಿದಾರನ ಅರ್ಜಿಗೆ ಸಂಬAಧಿಸಿ ಮೌಲ್ಯತೆಯನ್ನು ಮಾತ್ರ ಪರಿಶೀಲಿಸುತ್ತಿದ್ದು, ರಾಜ್ಯ ಮಟ್ಟದ ಉಸ್ತುವಾರಿ ಸಮಿತಿಯ ನಡವಳಿಕೆಗೆ ವ್ಯತಿರಿಕ್ತವಾಗಿ ಕೆಲಸ ಮಾಡುತ್ತಿರುವ ಬಗ್ಗೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಆಕ್ಷೇಪಿಸಿದ್ದಾರೆ.
`ಕಾನೂನು ನೀತಿ-ನಿಯಮಗಳಿಗೆ ವಿರುದ್ಧವಾಗಿ ಹಾಗೂ ಸಾಗುವಳಿ ಮಹಜರ್ ವರದಿಗೆ ಪ್ರಾತಿನಿತ್ಯ ನೀಡದೇ ಪ್ರಕ್ರಿಯೆ ಮುಂದುವರೆಸಲಾಗಿದೆ. ಅರ್ಜಿದಾರನ ಹಿಡುವಳಿ, ಆರ್ಥಿಕ ಉತ್ಪನ್ನ ಮುಂತಾದ ಷರತ್ತು ಬದ್ಧ ಪರಿಗಣನೆ ಮೇರೆಗೆ ಮಾಹಿತಿ ಸಂಗ್ರಹಿಸುವುದು ಹಾಗೂ ಅರ್ಜಿ ಮೌಲ್ಯತೆಯನ್ನ ಪರಿಶೀಲಿಸುವ ಕಾರ್ಯ ಸರಿಯಾಗಿ ನಡೆದಿಲ್ಲ. ಮಹಜರ್ ಸಂದರ್ಭದಲ್ಲಿ ಸ್ಥಳೀಯ ಮುಖಂಡರ ಹಾಜರಾತಿಗೆ ಅವಕಾಶ ನೀಡದೇ ಅರಣ್ಯವಾಸಿಗೆ ಮಾಹಿತಿಯನ್ನು ಸಹ ನೀಡದೇ ಪ್ರಕ್ರಿಯೆ ನಡೆಸಲಾಗುತ್ತಿದೆ’ ಎಂದು ರವೀಂದ್ರ ನಾಯ್ಕ ಅವರು ಮಾಹಿತಿ ನೀಡಿದ್ದಾರೆ.
`ಮಹಜರಲ್ಲಿ ಸಾಗುವಳಿಯ ವಥಯಕ್ತಿಕ ದಾಖಲೆಗಳನ್ನು ಮಾತ್ರ ದಾಖಲಿಸಿ ಸಾಗುವಳಿ ಮತ್ತು ವಾಸ್ತವ್ಯಕ್ಕೆ ಸಂಭAಧಿಸಿದ ಅರಣ್ಯವಾಸಿ ಮತ್ತು ಗ್ರಾಮದಲ್ಲಿ ಜನವಸತಿ ಇರುವ ಕುರಿತು ಸಾಂಧರ್ಭಿಕ ದಾಖಲೆಗಳನ್ನ ಮಹಜರಿನಲ್ಲಿ ಉಲ್ಲೇಖಿಸಿಲ್ಲ. ಅರ್ಜಿದಾರರ ಕುಟುಂಬದಲ್ಲ್ಲಿ ಒಂದಕ್ಕಿAತ ಹೆಚ್ಚಿನ ಅರ್ಜಿ ಸಲ್ಲಿಸಿರುವÀ ಅರ್ಜಿ ಪರಿಗಣನೆಗೆ ಅವಕಾಶ ಇಲ್ಲ ಎಂಬುದು ಕಾನೂನಿಗೆ ವ್ಯತಿರಿಕ್ತವಾದ ನೀತಿ’ ಎಂದವರು ಹೇಳಿದ್ದಾರೆ.`ಅರಣ್ಯ ಹಕ್ಕು ಸಮಿತಿಯ ಕಾರ್ಯ ಚಟುವಟಿಕೆ ಮತ್ತು ಅಧಿಕಾರಕ್ಕೆ ಹಸ್ತಕ್ಷೇಪಗೊಳಿಸಿ ರಾಜ್ಯ ಅರಣ್ಯ ಭೂಮಿ ಹಕ್ಕು ಉಸ್ತುವಾರಿ ಸಮಿತಿಯ ನಿರ್ದೇಶನಕ್ಕೆ ವ್ಯತಿರಿಕ್ತವಾಗಿ ಮಹಜರ್ ಪ್ರಕ್ರಿಯೆ ಜರುಗುತ್ತಿರುವ ಕುರಿತು ಉಸ್ತವಾರಿ ಸಮಿತಿಯಿಂದ ಪ್ರಾಧಿಕಾರದ ಗಮನಕ್ಕೆ ತರಲಾಗುತ್ತದೆ’ ಎಂದವರು ಹೇಳಿಕೆ ನೀಡಿದ್ದಾರೆ.
ಜೊತೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಕರ್ನಾಟಕ ಸರ್ಕಾರದವರ ಅಧ್ಯಕ್ಷತೆಯಲ್ಲಿ ನಡೆದ ಅರಣ್ಯ ಅನುಸೂಚಿತ ಬುಡಕಟ್ಟುಗಳು ಮತ್ತು ಇತರೇ ಪಾರಂಪರಿಕ ಅರಣ್ಯವಾಸಿಗಳ ಕಾಯಿದೆ ಅಡಿಯಲ್ಲಿನ ರಾಜ್ಯ ಮಟ್ಟದ ಉಸ್ತುವಾರಿ ಸಮಿತಿ ಸಭೆಯ ನಡವಳಿಕೆಯನ್ನು ಶಿರಸಿಯ ಅರಣ್ಯ ಭೂಮಿ ಹೋರಾಟಗಾರರ ಕಾರ್ಯಾಲಯದಲ್ಲಿ ಬಿಡುಗಡೆ ಮಾಡಿದ್ದಾರೆ. ಕಾನೂನು ಸಲಹಗಾರ ಉದಯ ನಾಯ್ಕ ಮತ್ತು ಮಂಜುನಾಥ ತಿಮ್ಮ ನಾಯ್ಕ ಬಿದ್ರಳ್ಳಿ ಅವರು ಈ ವೇಳೆ ಇದ್ದರು.