ವೇಗವಾಗಿ ಬೈಕ್ ಓಡಿಸುವ ಬನವಾಸಿಯ ನಾಗರಾಜ ಕೆಳಗಿನಮನೆ ಅವರು ತಮ್ಮ ಬೈಕನ್ನು ಗಿರಿಜಮ್ಮ ಚೆನ್ನಯ್ಯ ಅವರಿಗೆ ಗುದ್ದಿದ್ದಾರೆ. ಈ ಅಪಘಾತದಲ್ಲಿ ಗಿರಿಜಮ್ಮ ಚೆನ್ನಯ್ಯ ಅವರ ತಲೆಗೆ ಗಂಭೀರ ಪ್ರಮಾಣದಲ್ಲಿ ಗಾಯವಾಗಿದೆ.
ಶಿರಸಿ ಬನವಾಸಿಯ ಯಡೂರಬೈಲಿನ ನಾಗರಾಜ ಯಲ್ಲಪ್ಪ ಕೆಳಗಿನಮನೆ ಅವರು ವೇಗವಾಗಿ ಬೈಕ್ ಓಡಿಸುತ್ತಾರೆ. ಬೇರೆಯವರ ಜೀವಕ್ಕೆ ಅಪಾಯವಾಗುವ ಬಗ್ಗೆ ಅರಿವಿದ್ದರೂ ಅವರು ಸಂಚಾರಿ ನಿಯಮಗಳನ್ನು ಉಲ್ಲಂಘಿಸುತ್ತಾರೆ. ಜನವರಿ 1ರಂದು ಸಹ ಅವರು ಬನವಾಸಿ-ಸೊರಬಾ ರಸ್ತೆಯಲ್ಲಿ ವೇಗವಾಗಿ ಬೈಕ್ ಓಡಿಸಿದ್ದು, ಆ ಬೈಕು ಅಪಘಾತಕ್ಕೀಡಾಗಿದೆ.
ಆ ದಿನ ಮಧ್ಯಾಹ್ನ ಬನವಾಸಿಯ ಟಿ ಎಂ ಎಸ್ ಹತ್ತಿರ ಗಿರಿಜಮ್ಮ ಬಸಪ್ಪ ಚೆನ್ನಯ್ಯ ಅವರು ನಡೆದು ಹೋಗುತ್ತಿದ್ದರು. ಎಂದಿನAತೆ ನಾಗರಾಜ ಕೆಳಗಿನಮನೆ ಅವರು ವೇಗವಾಗಿ ಬೈಕ್ ಓಡಿಸಿಕೊಂಡು ಅಲ್ಲಿಗೆ ಬಂದರು. ಬೈಕು ಅವರ ನಿಯಂತ್ರಣ ತಪ್ಪಿದ್ದು, ಗಿರಿಜಮ್ಮ ಚೆನ್ನಯ್ಯ ಅವರಿಗೆ ಗುದ್ದಿತು. ಪರಿಣಾಮ ಗಿರಿಜಮ್ಮ ಚೆನ್ನಯ್ಯ ಅವರು ನೆಲಕ್ಕೆ ಅಪ್ಪಳಿಸಿದ್ದು, ಅವರ ತಲೆಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟಾಯಿತು.
ಕೂಲಿ ಕೆಲಸ ಮಾಡಿಕೊಂಡಿದ್ದ ಗಿರಿಜಮ್ಮ ಚೆನ್ನಯ್ಯ ಅವರು ನಾಗರಾಜ ಕೆಳಗಿನಮನೆ ಅವರ ಅತಿ ವೇಗದ ಬೈಕ್ ಚಾಲನೆಯಿಂದ ಸಮಸ್ಯೆಗೆ ಸಿಲುಕಿದರು. ಅಪಘಾತಕ್ಕೆ ಕಾರಣರಾದ ನಾಗರಾಜ ಕೆಳಗಿನಮನೆ ಅವರ ವಿರುದ್ಧ ಬನವಾಸಿ ದೊಡ್ಡಕೇರಿಯ ನಂದಕುಮಾರ ನಾಗರಾಜ ಚೆನ್ನಯ್ಯ ಅವರು ಪೊಲೀಸ್ ದೂರು ನೀಡಿದರು. ಬನವಾಸಿ ಪೊಲೀಸರು ಪ್ರಕರಣ ದಾಖಲಿಸಿದರು.