ಮುರುಡೇಶ್ವರದ ಸಮೀಪ ರಸ್ತೆ ಬದಿಯಿಂದ ನಡೆದು ಹೋಗುತ್ತಿದ್ದ ಮಹಿಳೆಗೆ ಬೈಕು ಡಿಕ್ಕಿಯಾಗಿದ್ದು, ಗಾಯಗೊಂಡ ಆ ಮಹಿಳೆ ಪರಿಸ್ಥಿತಿ ಗಂಭೀರವಾಗಿದೆ.
ಭಟ್ಕಳದ ಹಾಲಿಬಡ್ರು ಕಮಟೆಕೇರೆ ನಿವಾಸಿ ಗೌರಿ ಶನಿಯಾರ ದೇವಡಿಗ (66) ಅವರು ಬೈಕ್ ಗುದ್ದಿದ್ದರಿಂದ ನೋವು ಅನುಭವಿಸುತ್ತಿದ್ದಾರೆ. ಫೆ 16ರಂದು ಉತ್ತರಕೊಪ್ಪ-ಬಸ್ತಿ ರಸ್ತೆಯಲ್ಲಿ ಅವರು ನಡೆದು ಹೋಗುತ್ತಿದ್ದರು. ಉತ್ತರಕೊಪ್ಪ ಕಡೆಯಿಂದ ಬಸ್ತಿ ಕಡೆಗೆ ವೇಗವಾಗಿ ಬೈಕ್ ಓಡಿಸಿಕೊಂಡು ಬಂದ ಹೆಗಡೆಗದ್ದೆಯ ರವಿ ಮಾಸ್ತಿ ನಾಯ್ಕ ಅವರು ಗೌರಿ ದೇವಾಡಿಗ ಅವರಿಗೆ ಹಿಂದಿನಿAದ ಡಿಕ್ಕಿ ಹೊಡೆದರು.
ಹಾಲಿಬಡ್ರು ಶ್ರೀ ಶಿವಲಿಂಗೇಶ್ವರ ದೇವಸ್ಥಾನದ ಹತ್ತಿರ ಈ ಅಪಘಾತ ನಡೆದಿದ್ದು, ನಿಧಾನವಾಗಿ ನಡೆದು ಹೋಗುತ್ತಿದ್ದ ಗೌರಿ ನಾಯ್ಕ ಅವರಿಗೆ ವೇಗವಾಗಿ ಬಂದ ಬೈಕ್ ಗುದ್ದಿತು. ಆ ಡಿಕ್ಕಿ ರಭಸಕ್ಕೆ ಗೌರಿ ನಾಯ್ಕ ಅವರು ನೆಲಕ್ಕೆ ಬಿದ್ದು ಪೆಟ್ಟು ಮಾಡಿಕೊಂಡರು.
ಈ ಅಪಘಾತದ ಪರಿಣಾಮ ಗೌರಿ ನಾಯ್ಕ ಅವರ ತಲೆಗೆ ಗಂಭೀರ ಪ್ರಮಾಣದಲ್ಲಿ ಗಾಯವಾಗಿದೆ. ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೈಕ್ ಸವಾರನಾದ ಉತ್ತರಕೊಪ್ಪ ಹೆಗಡೆಗದ್ದೆ ನಿವಾಸಿ ರವಿ ಮಾಸ್ತಿ ನಾಯ್ಕ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಚಿತ್ರಾಪುರದ ಕೇಂಬ್ರೆ ನೆಲ್ಲಿಕೊಡ್ಲು ನಿವಾಸಿ ನಾಗರಾಜ ತಂದೆ ರಾಮಚಂದ್ರ ದೇವಡಿಗ ಅವರು ಈ ಬಗ್ಗೆ ದೂರು ನೀಡಿದ್ದಾರೆ.
`ನಿಧಾನವಾಗಿ ಬೈಕ್ ಓಡಿಸಿ. ಸಂಚಾರಿ ನಿಯಮ ಪಾಲಿಸಿ’