ದಾಖಲಾತಿ ಬದಲಾವಣೆ ಬಯಸಿ ಬಂದವರ ಬಳಿ 18 ಸಾವಿರ ರೂ ಹಣ ಬೇಡಿದ ಸರ್ಕಾರಿ ಸಿಬ್ಬಂದಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಹಣಪಡೆಯುವಾಗಲೇ ಗ್ರಾಮ ಲೆಕ್ಕಾಧಿಕಾರಿ ಸಿಕ್ಕಿಬಿದ್ದಿದ್ದು, ಸದ್ಯ ಜೈಲು ಸೇರಿದ್ದಾರೆ.
Advertisement. Scroll to continue reading.
ಜೊಯಿಡಾದ ರಾಮನಗರದಲ್ಲಿ ಸಂತೋಷ ಮ್ಯಾಗೇರಿ ಅವರು ಗ್ರಾಮ ಲೆಕ್ಕಾಧಿಕಾರಿಯಾಗಿ ಕೆಲಸ ಮಾಡಿಕೊಂಡಿದ್ದರು. ಜನರನ್ನು ಅವರು ಅನಗತ್ಯವಾಗಿ ಕಾಡಿಸುತ್ತಿದ್ದರು. ಅದರಂತೆ, ರಾಮನಗರದ ಸಂದೇಶ ಗುರ್ಜರ್ ಅವರ ಕೆಲಸ ಮಾಡಿಕೊಡಲು ಸಹ ತೊಂದರೆ ಕೊಡುತ್ತಿದ್ದರು. ದಾಖಲೆ ತಿದ್ದುಪಡಿಗೆ ಹೋಗಿದ್ದ ಸಂದೇಶ ಗುರ್ಜರ್ ಅವರ ಬಳಿ 18 ಸಾವಿರ ರೂ ಹಣ ಬೇಡಿದ್ದರು.
ಈ ಹಿನ್ನಲೆ ಸಂದೇಶ ಗುರ್ಜರ್ ಅವರು ಲೋಕಾಯುಕ್ತ ದೂರು ನೀಡಿದ್ದು, ಹಣಪಡೆಯುವ ವೇಳೆಯಲ್ಲಿಯೇ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದರು. ಲಂಚ ನೀಡಲು ಇಚ್ಚಿಸದ ಸಂದೇಶ ಗುರ್ಜರ್ ಅವರು ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಸಂತೋಷ ಮ್ಯಾಗರಿ ಅವರು ಸಿಕ್ಕಿಬಿದ್ದರು. ಲೋಕಾಯುಕ್ತ ಪೊಲೀಸರು ಲಂಚದ ಹಣದ ಜೊತೆ ಗ್ರಾಮ ಲೆಕ್ಕಾಧಿಕಾರಿಯನ್ನು ವಶಕ್ಕೆಪಡೆದರು. ರಾಮನಗರದಲ್ಲಿರುವ ಕಚೇರಿಯಲ್ಲಿ ಮುಂಗಡವಾಗಿ 13 ಸಾವಿರ ರೂ ಹಣಪಡೆಯುವಾಗ ಈ ದಾಳಿ ನಡೆದಿದ್ದು, ಲೋಕಾಯುಕ್ತರು ಕಾನೂನು ಕ್ರಮ ಜರುಗಿಸಿದರು.