ಹೊನ್ನಾವರದ ಹೆರಂಗಡಿ ಬಳಿ ಸರ್ಕಾರಿ ಬಸ್ಸು ಓಮಿನಿಗೆ ಗುದ್ದಿದೆ. ಪರಿಣಾಮ ಓಮಿನಿ ಓಡಿಸುತ್ತಿದ್ದ ವ್ಯಕ್ತಿಯೊಬ್ಬರು ಅಲ್ಲಿಯೇ ಸಾವನಪ್ಪಿದ್ದಾರೆ. ಈ ಅಪಘಾತದಲ್ಲಿ ಬಸ್ಸಿನಲ್ಲಿದ್ದ ಕೆಲ ಪ್ರಯಾಣಿಕರಿಗೆ ಸಹ ಗಾಯಗಳಾಗಿವೆ.
ಮಾಹಿತಿಗಳ ಪ್ರಕಾರ, ಬಸ್ಸು ವೇಗವಾಗಿ ಬರುತ್ತಿತ್ತು. ಓಮಿನಿ ಸಹ ಅದೇ ಪ್ರಮಾಣದ ವೇಗದಲ್ಲಿತ್ತು. ಹೆರಂಗಡಿ ಬಳಿ ಈ ಎರಡು ವಾಹನಗಳು ಮುಖಾಮುಖಿಯಾಗಿದ್ದು, ಓಮಿನಿ ಸಂಪೂರ್ಣವಾಗಿ ಜಖಂ ಆಯಿತು. ಓಮಿನಿ ಒಳಗಿದ್ದ ಚಾಲಕ ಸಹ ಅಲ್ಲಿಯೇ ಸಿಕ್ಕಿ ಬಿದ್ದಿದ್ದರು. ಅವರನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ನಡೆದರೂ ಪ್ರಯೋಜನ ಆಗಲಿಲ್ಲ.
ಸಾವನಪ್ಪಿದ ಓಮಿನಿ ಚಾಲಕ ಸಿದ್ದಾಪುರ ತಾಲೂಕಿನವರಾಗಿದ್ದಾರೆ. ಅವರ ಹೆಸರು ಹಾಗೂ ವಿಳಾಸದ ಮಾಹಿತಿ ಖಚಿತವಾಗಿಲ್ಲ. ಭಟ್ಕಳದಿಂದ ಸಿದ್ದಾಪುರದತ್ತ ಒಮಿನಿಗೆ ಗೇರುಸೊಪ್ಪದಿಂದ ಹೊನ್ನಾವರ ಕಡೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸು ಡಿಕ್ಕಿ ಹೊಡೆದಿದೆ. ಆಸ್ಪತ್ರೆಯಲ್ಲಿನ ವೈದ್ಯರು ಓಮಿನಿ ಚಾಲಕನ ಸಾವನ್ನು ದೃಢಪಡಿಸಿದ್ದಾರೆ. ಅಪಘಾತದ ವೇಳೆ ಬಸ್‌ನಲ್ಲಿದ್ದ ಕೆಲ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತದಿಂದ ಸಂಚಾರ ದಟ್ಟಣೆ ಉಂಟಾಗಿದ್ದು, ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ