• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Mobile addiction Son dies after mother cannot bear the pain!

ಮೊಬೈಲ್ ಮೋಹ: ತಾಯಿ ಪೆಟ್ಟು ಸಹಿಸದ ಮಗ ಸಾವು!

March 13, 2026
ಬಲೆಗೆ ಬಿದ್ದ ಭ್ರಷ್ಟ ಲೆಕ್ಕಾಧಿಕಾರಿ!

ಬಲೆಗೆ ಬಿದ್ದ ಭ್ರಷ್ಟ ಲೆಕ್ಕಾಧಿಕಾರಿ!

March 13, 2026
Aggashikumbri who gave up food and water!

ಅನ್ನ-ನೀರು ತ್ಯಜಿಸಿದ ಅಗ್ಗಾಶಿಕುಂಬ್ರಿ!

March 13, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Mobile addiction Son dies after mother cannot bear the pain!

ಮೊಬೈಲ್ ಮೋಹ: ತಾಯಿ ಪೆಟ್ಟು ಸಹಿಸದ ಮಗ ಸಾವು!

March 13, 2026
ಬಲೆಗೆ ಬಿದ್ದ ಭ್ರಷ್ಟ ಲೆಕ್ಕಾಧಿಕಾರಿ!

ಬಲೆಗೆ ಬಿದ್ದ ಭ್ರಷ್ಟ ಲೆಕ್ಕಾಧಿಕಾರಿ!

March 13, 2026
Aggashikumbri who gave up food and water!

ಅನ್ನ-ನೀರು ತ್ಯಜಿಸಿದ ಅಗ್ಗಾಶಿಕುಂಬ್ರಿ!

March 13, 2026
ADVERTISEMENT
  • Home
  • Janamata
Friday, March 13, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಅನ್ನ-ನೀರು ತ್ಯಜಿಸಿದ ಅಗ್ಗಾಶಿಕುಂಬ್ರಿ!

Achyutkumar by Achyutkumar
March 13, 2026
Aggashikumbri who gave up food and water!
514
VIEWS
Share on FacebookShare on WhatsappShare on Twitter
ADVERTISEMENT

ಯಲ್ಲಾಪುರ ಟಿಎಂಎಸ್ ಮಾಜಿ ಅಧ್ಯಕ್ಷ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ಅವರು ಶುಕ್ರವಾರದಿಂದ ಅನ್ನ-ನೀರು ತ್ಯಜಿಸಿದ್ದಾರೆ. 85 ವರ್ಷದ ಅವರು ಟಿಎಂಎಸ್ ಆಡಳಿತಾಧಿಕಾರಿ ಭಾಸ್ಕರ್ ನಾಯ್ಕ ಅವರ ವಿರುದ್ಧ ಆರೋಪ ಮಾಡಿದ್ದು, ನ್ಯಾಯಕ್ಕಾಗಿ ಉಪವಾಸ ಸತ್ಯಾಗ್ರಹ ಶುರು ಮಾಡಿದ್ದಾರೆ. ಮೂರನೇ ದಿನ ಮೂರನೇ ಹಂತದ ಪ್ರತಿಭಟನೆ ಮುಂದುವರೆಸಿದ್ದು, ಈ ಹಿಂದೆ ಘೋಷಿಸಿದ ಹಾಗೇ ಟಿಎಂಎಸ್ ಕಚೇರಿ ಎದುರು ಧರಣಿ ಕುಳಿತಿದ್ದಾರೆ.

Advertisement. Scroll to continue reading.
ADVERTISEMENT

ರೈತರ ಹಿತಾಸಕ್ತಿಗೆ ವಿರುದ್ಧವಾಗಿ ಟಿ ಎಂ ಎಸ್ ಆಡಳಿತಾಧಿಕಾರಿ ಭಾಸ್ಕರ ನಾಯ್ಕ ಅವರು ವರ್ತಿಸುತ್ತಿದ್ದಾರೆ ಎಂಬುದು ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ಅವರ ಆರೋಪ. `ಆಡಳಿತಾಧಿಕಾರಿಯಾಗಿ ಅಧಿಕಾರವಹಿಸಿಕೊಂಡ ನಂತರ ಭಾಸ್ಕರ ನಾಯ್ಕ ಅವರು ಕೆಲ ಠರಾವು ಮಾಡಿದ್ದಾರೆ. ಆ ಠರಾವುಗಳಿಂದ ಸಂಘದ ಸದಸ್ಯರಿಗೆ ಅನ್ಯಾಯವಾಗುತ್ತಿದೆ. ಆ ಠರಾವುಗಳನ್ನು ರದ್ಧು ಮಾಡಬೇಕು. ಜೊತೆಗೆ ಆಡಳಿತಾಧಿಕಾರಿಯಾಗಿರುವ ಭಾಸ್ಕರ ನಾಯ್ಕ ಅವರನ್ನು ವಜಾ ಮಾಡಬೇಕು’ ಎಂಬುದು ಅಗ್ಗಾಶಿಕುಂಬ್ರಿ ಅವರ ಬೇಡಿಕೆ.

ADVERTISEMENT

ಯಲ್ಲಾಪುರ ಟಿಎಂಎಸ್’ಗೆ ಸಾವಿರಾರು ಸಂಖ್ಯೆಯ ಸದಸ್ಯರಿದ್ದಾರೆ. ಆದರೆ, ಈ ಹೋರಾಟದಲ್ಲಿ ನೂರರ ಸಂಖ್ಯೆಯಲ್ಲಿ ಮಾತ್ರ ಸದಸ್ಯರು ಭಾಗವಹಿಸಿದ್ದಾರೆ. ಟಿಎಂಎಸ್ ಸದಸ್ಯರಲ್ಲದ ಕೆಲವರು ಸಹ ಪ್ರತಿಭಟನೆಯಲ್ಲಿ ಕಾಣಿಸಿಕೊಂಡಿದು, ಅಗ್ಗಾಶಿಕುಂಬ್ರಿ ಅವರ ಹೋರಾಟಕ್ಕೆ ಬಿಜೆಪಿಯ ಪ್ರಮುಖರು ಬೆಂಬಲ ನೀಡಿದ್ದಾರೆ. ಹೀಗಾಗಿ ಬಿಜೆಪಿ ಕಾರ್ಯಕರ್ತರು ಆಗಾಗ ಪ್ರತಿಭಟನಾ ಸ್ಥಳಕ್ಕೆ ಬಂದು ಹೋಗುತ್ತಿದ್ದಾರೆ. ಬಿಜೆಪಿಯ ಘಟಾನುಘಟಿ ನಾಯಕರು ಧರಣಿಗೆ ಬೆಂಬಲ ನೀಡಿದರೂ ನಿರೀಕ್ಷೆಗೆ ತಕ್ಕ ಹಾಗೇ ಜನ ಬೆಂಬಲ ಸಿಕ್ಕಿಲ್ಲ.

ADVERTISEMENT

ಇನ್ನೂ ಸೊಸೈಟಿ ವಿಷಯದಲ್ಲಿ ರಾಜಕಾರಣಿಗಳು ಕೈಯಾಡಿಸುತ್ತಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷದವರು ಸೊಸೈಟಿ ರಾಜಕಾರಣದಲ್ಲಿ ಅನಗತ್ಯವಾಗಿ ಮೂಗು ತೂರಿಸಿದ್ದರಿಂದ ಅಗ್ಗಾಶಿಕುಂಬ್ರಿ ಅವರ ಹೋರಾಟಕ್ಕೆ ರೈತರು ದೊಡ್ಡ ಪ್ರಮಾಣದಲ್ಲಿ ಬೆಂಬಲ ನೀಡುತ್ತಿಲ್ಲ. ಈ ಪ್ರತಿಭಟನೆ ವಿಷಯವಾಗಿ ಪರ-ವಿರೋಧ ಚರ್ಚೆ ನಡೆಯುತ್ತಿದ್ದರೂ, ಯಾವುದೇ ಒಂದು ಪಕ್ಷದ ಕಡೆ ಒಲವು ತೋರಿದರೂ ಭವಿಷ್ಯದಲ್ಲಿ ಸಮಸ್ಯೆ ಉಂಟಾಗುವ ಬಗ್ಗೆ ಸಾಮಾನ್ಯ ರೈತರು ಮಾತನಾಡುತ್ತಿದ್ದಾರೆ. ಈ ಕ್ಷೇತ್ರದ ಮಟ್ಟಿಗೆ ಅನೇಕ ಸನ್ನಿವೇಶದಲ್ಲಿ ಬಿಜೆಪಿಯ ದೊಡ್ಡ ದೊಡ್ಡ ಘಟಾನುಘಟಿಗಳೇ ಕಾಂಗ್ರೆಸ್ ನಾಯಕರಿಗೆ ಶರಣಾದ ಸನ್ನಿವೇಶಗಳಿವೆ. ಹೀಗಾಗಿ `ಸದ್ಯ ಅಗ್ಗಾಶಿಕುಂಬ್ರಿ ಅವರ ಬೆಂಬಲಕ್ಕೆ ನಿಂತ ಕೆಲ ಬಿಜೆಪಿಗರ ಜೊತೆ ಗುರುತಿಸಿಕೊಂಡರೂ ಆ ನಾಯಕರು ಭವಿಷ್ಯದಲ್ಲಿ ರಾಜಿ ಆದರೆ, ತಮಗೆ ಸಮಸ್ಯೆ ಆಗಬಹುದು’ ಎಂಬುದು ಸಾಮಾನ್ಯ ರೈತರ ಚಿಂತನೆ.

ಶುಕ್ರವಾರ ಬೆಳಗ್ಗೆ 11 ಗಂಟೆಗೆ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ಅವರು ಧರಣಿ ಶುರು ಮಾಡಿದ್ದು, ಮಧ್ಯಾಹ್ನದ ವೇಳೆಗೆ ಅವರ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ. ವೈದ್ಯರು ಬಂದು ತಪಾಸಣೆ ಮಾಡಿದ್ದಾರೆ. ಧರಣಿ ವೇಳೆ ವಿವಿಧ ಸಂಘ-ಸAಸ್ಥೆಯವರು ಆಗಮಿಸಿ ಧರಣಿ ಹಿಂಪಡೆಯುವAತೆ ಮನವಿ ಮಾಡಿದ್ದಾರೆ. ಉಪವಾಸದ ಬದಲು ಹೀಗೆ ಪ್ರತಿಭಟನೆ ನಡೆಸುವಂತೆಯೂ ಕೋರಿದ್ದಾರೆ. ಆದರೆ, ಅದಕ್ಕೆ ಅಗ್ಗಾಶಿಕುಂಬ್ರಿ ಅವರು ಒಪ್ಪಿಲ್ಲ. ಧರಣಿ ಶುರುವಾಗುವ ವೇಳೆ ಕೆಲವರು ಆಗಮಿಸಿ ಭಗವದ್ಗೀತೆ ಪಠಿಸಿದ್ದಾರೆ. ಅನೇಕರು ಭಜನೆಯನ್ನು ಮಾಡಿದ್ದಾರೆ. ಸ್ಥಳದಲ್ಲಿ ಪೊಲೀಸರನ್ನು ಹೊರತುಪಡಿಸಿ ಬೇರೆ ಇಲಾಖೆ ಅಧಿಕಾರಿಗಳು ಕಾಣಿಸಲಿಲ್ಲ.

 

ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋