ಮoಗನನ್ನು ಓಡಿಸಲು ಏರ್‌ಗನ್ ಹಿಡಿದು ಹೊರಟಿದ್ದ ಸುಬ್ರಹ್ಮಣ್ಯ ಮರಾಠಿ ಅವರು ಅದೇ ಏರ್‌ಗನ್ ಗುಂಡಿಗೆ ಬಲಿಯಾಗಿದ್ದಾರೆ. ಆಕಸ್ಮಿಕವಾಗಿ ಗುಂಡು ಸಿಡಿದ ಪರಿಣಾಮ ಅವರು ಅಲ್ಲಿಯೇ ಕುಸಿದು ಬಿದ್ದಿದ್ದು, ಕುಟುಂಬದವರು ಬಂದು ನೋಡುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ.
Advertisement. Scroll to continue reading.
ಹೊನ್ನಾವರದ ಗೇರುಸೊಪ್ಪ ಹಾಡಗೇರಿ ಗ್ರಾಮದಲ್ಲಿ ಶನಿವಾರ ಸಂಜೆ ಮಂಗನ ಗುಂಪು ಬಂದಿದ್ದು, ಅದನ್ನು ಬೆದರಿಸಲು ಹೋದ ಅದೇ ಊರಿನ ಸುಬ್ರಹ್ಮಣ್ಯ ಮಂಜ ಮರಾಠಿ ಅವರು ಗುಂಡು ಸಿಡಿದು ಸಾವನಪ್ಪಿದ್ದಾರೆ. ಕೈಯಲ್ಲಿದ್ದ ಏರ್‌ಗನ್ ಆಕಸ್ಮಿಕವಾಗಿ ಜಾರಿ ಬಿದ್ದಿದೆ. ಆಗ, ಏರ್‌ಗನ್ ತಿರುವಿ ಬಿದ್ದಿದ್ದು, ಸುಬ್ರಹ್ಮಣ್ಯ ಮರಾಠಿ ಅವರು ಸಹ ನೆಲಕ್ಕೆ ಬಿದ್ದಿದ್ದಾರೆ.
ಆ ವೇಳೆ ಏರ್‌ಗನ್ ಒಳಗಿದ್ದ ಗುಂಡು ಸುಬ್ರಹ್ಮಣ್ಯ ಮರಾಠಿ ಅವರ ಎದೆಗೆ ತಾಗಿದೆ. ಅಲ್ಲಿಯೇ ಸುಬ್ರಹ್ಮಣ್ಯ ಮರಾಠಿ ಅವರು ಕುಸಿದು ಬಿದ್ದಿದ್ದಾರೆ. ಗಾಯದ ತೀವೃತೆಯಿಂದಲೇ ಸುಬ್ರಹ್ಮಣ್ಯ ಮರಾಠಿ ಅವರು ಸಾವನಪ್ಪಿರುವುದು ಗೊತ್ತಾಗಿದೆ. ಹೊನ್ನಾವರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇನ್ನೂ 18 ವರ್ಷದ ಸುಬ್ರಹ್ಮಣ್ಯ ಮರಾಠಿ ಅವರ ಸಾವಿನಿಂದ ಊರಿನ ಜನರು ಆಘಾತಕ್ಕೆ ಒಳಗಾಗಿದ್ದಾರೆ.