ಶಿರಸಿ-ಹುಬ್ಬಳ್ಳಿ ಬಸ್ಸು ಹತ್ತಿದ್ದ ದೀಪಾ ಪ್ರಭು ಅವರಿಗೆ ಅದೇ ಬಸ್ಸಿನ ಬಾಗಿಲು ಬಡಿದಿದೆ. ಪರಿಣಾಮ ಅವರ ಕಾಲು ಕಟ್ ಆಗಿದೆ.
Advertisement. Scroll to continue reading.
ಶಿರಸಿ ಎಕ್ಕಂಬಿಯ ದೀಪಾ ಪ್ರಭು ಅವರು ಮಾರ್ಚ 4ರ ಸಂಜೆ ಶಿರಸಿಗೆ ಬಂದಿದ್ದರು. ಮಗಳು ದೀಪ್ತಿ ಪ್ರಭು ಹಾಗೂ ಪತಿ ಗೋಪಾಲ ಪ್ರಭು ಅವರ ಜೊತೆ ದೀಪಾ ಪ್ರಭು ಅವರು ಟಿಎಸ್‌ಎಸ್ ಸೂಪರ್ ಮಾರ್ಟಿಗೆ ಹೋಗಿದ್ದರು. ವಿವಿಧ ವಸ್ತು ಖರೀದಿ ನಂತರ ಅವರು ಪೇಟೆ ಸಂಚಾರ ಮಾಡಿದ್ದರು.
ದೀಪಾ ಪ್ರಭು ಅವರು ತಮ್ಮ ಪತಿ ಹಾಗೂ ಮಗಳ ಜೊತೆ ಮಹಾಸತಿ ಸರ್ಕಲ್ ಕಡೆ ನಡೆದು ಹೋಗುವಾಗ ಶಿರಸಿಯಿಂದ ಹುಬ್ಬಳ್ಳಿಗೆ ಹೋಗುವ ಬಸ್ ಆಗಮಿಸಿತು. ಗೋಪಾಲ ಪ್ರಭು ಅವರು ಆ ಬಸ್ಸಿಗೆ ಅಡ್ಡಲಾಗಿ ಕೈ ಮಾಡಿದರು. ಬಸ್ಸು ಓಡಿಸುತ್ತಿದ್ದ ಮಹ್ಮದ್ ಅಸ್ಲಂ ಅವರು ತಮ್ಮ ವಾಹನ ನಿಲ್ಲಿಸಿದ್ದು, ನಿರ್ವಾಹಕ ಮಹೇಂದ್ರಪ್ಪ ಎಂ ಅವರು ಪ್ರಯಾಣಿಕರನ್ನು ಹತ್ತಿಸಿಕೊಂಡರು. ದೀಪಾ ಪ್ರಭು ಅವರು ಬಸ್ಸಿನ ಒಳಗೆ ಕಾಲಿಟ್ಟ ಕೂಡಲೇ ಮಹ್ಮದ್ ಅಸ್ಲಂ ಅವರು ಬಸ್ಸನ್ನು ಮುಂದೆ ಬಿಟ್ಟರು.
ಈ ವೇಳೆ ಬಸ್ಸಿನ ಬಾಗಿಲು ಸರಿಯಾಗಿ ಹಾಕಿರಲಿಲ್ಲ. ದೀಪಾ ಪ್ರಭು ಅವರು ಸಹ ಬಸ್ಸಿನ ಒಳಗೆ ಬಂದು ಕುಳಿತಿರಲಿಲ್ಲ. ಹೀಗಾಗಿ ಬಸ್ಸಿನ ಬಾಗಿಲು ದೀಪಾ ಪ್ರಭು ಅವರ ಕಾಲಿಗೆ ಬಡಿದಿದ್ದು, ಗಂಭೀರ ಪ್ರಮಾಣದಲ್ಲಿ ಗಾಯವಾಯಿತು. ಬಾಗಿಲು ಗುದ್ದಿದ ರಭಸಕ್ಕೆ ಕಾಲು ಮುರಿಯಿತು. ಬಸ್ ಚಾಲಕ ಹಾಗೂ ನಿರ್ವಾಹಕರ ಬೇಜವಬ್ದಾರಿ ಹಾಗೂ ಆತುರದ ನಿರ್ಧಾರದಿಂದ ಈ ಅವಘಡ ನಡೆದ ಬಗ್ಗೆ ಗೋಪಾಲ ಪ್ರಭು ಅವರು ದೂರಿದರು.