ಶಿರಸಿ ಸುಹಾಸ ಹೆಗಡೆ ಅವರು ತಡರಾತ್ರಿಯೂ ಅಡ್ಡಾದಿಡ್ಡಿ ಓಮಿನಿ ಓಡಿಸುತ್ತಿದ್ದು, ಅದರ ಪರಿಣಾಮ ಆ ಓಮಿನಿ ಬೈಕಿಗೆ ಗುದ್ದಿದೆ. ಬೈಕು ಓಡಿಸುತ್ತಿದ್ದ ಬಾಳೆಗದ್ದೆಯ ಪ್ರಥಮ ನಾಯ್ಕ ಅವರ ತಲೆಗೆ ಗಂಭೀರ ಪ್ರಮಾಣದಲ್ಲಿ ಗಾಯವಾಗಿದೆ.
ಶಿರಸಿಯ ಹಾರೆಹುಲೆಕಲ್ ಬಳಿ ಸುಹಾಸ ಸುಧಾಕರ ಹೆಗಡೆ ಅವರು ವಾಸವಾಗಿದ್ದಾರೆ. ಸದಾ ಜೋರಾಗಿ ಓಮಿನಿ ಓಡಿಸುವ ಅವರು ರಾತ್ರಿಯೂ ಅದರ ವೇಗ ಕಡಿಮೆ ಮಾಡಿಲ್ಲ. ಮಾರ್ಚ 1ರ ರಾತ್ರಿಯೂ ಅವರು ಶಿರಸಿ-ಹುಲೆಕಲ್ ಮಾರ್ಗವಾಗಿ ಜೋರಾಗಿ ಓಮಿನಿ ಓಡಿಸಿದ್ದಾರೆ. ಕಲ್ಲೇಶ್ವರ ದೇವಸ್ಥಾನ ತಿರುವಿನ ಬಳಿ ಎದುರಿನಿಂದ ಬಂದ ಬೈಕಿಗೆ ಓಮಿನಿ ಗುದ್ದಿದ್ದಾರೆ.
ಆ ದಿನ ರಾತ್ರಿ ರುತ್ತಿದ್ದ ಬಾಳೆಗದ್ದೆ ಸಾಳ ಇಡ್ತಳ್ಳಿಯ ವಿದ್ಯಾರ್ಥಿ ಪ್ರಥಮ ರಮೇಶ ನಾಯ್ಕ (23) ಅವರು ಬೈಕ್ ಓಡಿಸಿಕೊಂಡು ಬರುತ್ತಿದ್ದು, ಸುಹಾಸ ಹೆಗಡೆ ಅವರ ಓಮಿನಿ ಗುದ್ದಿದ ರಭಸಕ್ಕೆ ಅವರು ಬೈಕಿನಿಂದ ಹಾರಿ ಬಿದ್ದಿದ್ದಾರೆ. ನಿಧಾನವಾಗಿ ಬೈಕ್ ಓಡಿಸಿದರೂ ಅಪಘಾತವಾಗಿದ್ದರಿಂದ ಅವರು ಸಾಕಷ್ಟು ನೊಂದಿದ್ದಾರೆ. ಈ ಅಪಘಾತದಲ್ಲಿ ಪ್ರಥಮ ನಾಯ್ಕ ಅವರ ತಲೆಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟಾಗಿದೆ. ಓಮಿನಿಯಲ್ಲಿದ್ದ ಸುಹಾಸ್ ಹೆಗಡೆ ಅವರ ಕಣ್ಣು-ಕೆನ್ನೆಗೂ ಗಾಯವಾಗಿದೆ.
ಈ ಅಪಘಾತದ ಬಗ್ಗೆ ಬಾಳೆಗದ್ದೆ ಬಳಿಯ ಇಡ್ತಳ್ಳಿಯ ರವಿಚಂದ್ರ ಮಂಜುನಾಥ ನಾಯ್ಕ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವೇಗವಾಗಿ ವಾಹನ ಓಡಿಸಿದ ಸುಹಾಸ ಹೆಗಡೆ ವಿರುದ್ಧ ಶಿರಸಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
`ನಿಧಾನವಾಗಿ ವಾಹನ ಓಡಿಸಿ. ಸಂಚಾರಿ ನಿಯಮ ಪಾಲಿಸಿ’