ಹೋಳಿ ಹಬ್ಬದ ಅಂಗವಾಗಿ ಸ್ನಾನಕ್ಕೆ ಹೋಗಿದ್ದ ಕಾರವಾರದ ಗಜೇಂದ್ರ ಬಿಣಗೆಕರ್ ಅವರ ಮೇಲೆ ಖಾರ್ವಿವಾಡದ ಲೋಹಿತ, ವೀರನ್ ಭಾನಾವಳಿ ಹಾಗೂ ಮತ್ತೊಬ್ಬರು ಮುಗಿ ಬಿದ್ದಿದ್ದಾರೆ. ಈ ವೇಳೆ ನಡೆದ ಹೊಡೆದಾಟ ತಪ್ಪಿಸಲು ಹೋದ ಸಿವಿಲ್ ಆಸ್ಪತ್ರೆ ಉದ್ಯೋಗಿ, ಕಳೆಶೆಟ್ಟಾದ ಅಕ್ಷಯ ನಾಯ್ಕ ಅವರ ಮೇಲೆಯೂ ಆ ಮೂರು ಜನ ದಾಳಿ ಮಾಡಿದ್ದಾರೆ.
Advertisement. Scroll to continue reading.
ಮಾರ್ಚ 4ರ ಸಂಜೆ 5ಗಂಟೆಗೆ ಕಾರವಾರ ಕಡಲತೀರದ ಹನುಮಾನ್ ಮೂರ್ತಿಯ ಬಳಿ ಈ ಹೊಡೆದಾಟ ನಡೆದಿದೆ. ಆ ದಿನ ಅಕ್ಷಯ ನಾಯ್ಕ ಅವರು ಗಜೇಂದ್ರ ಬಿಣಗೆಕರ್ ಅವರ ಜೊತೆ ಸಂಚಾರ ನಡೆಸಿದ್ದು, ಅಲ್ಲಿಯೇ ಪದ್ಮನಾಭನಗರದ ರಾಹುಲ್ ಬೆಂಗ್ರೇಜಾ, ಮಹಾದೇವಸ್ಥಾನ ಬಳಿಯ ಕೃಷ್ಣ ನಾಯ್ಕ ಆಗಮಿಸಿ ಹೋಳಿ ಹಬ್ಬದ ಸ್ನಾನ ಮಾಡುತ್ತಿದ್ದರು. ಈ ವೇಳೆ ಧಾವಿಸಿ ಬಂದ ಖಾರ್ವಿವಾಡದ ಲೋಹಿತ, ವೀರನ್ ಭಾನಾವಳಿ ಹಾಗೂ ಮತ್ತೊಬ್ಬರು ಗಜೇಂದ್ರ ಬಿಣಗೆಕರ್ ಅವರ ಮೇಲೆ ಆಕ್ರಮಣ ಮಾಡಿದರು. ಆಕ್ರಮಣ ನಡೆದಿರುವುದನ್ನು ತಪ್ಪಿಸಲು ಹೋದವರು ಹೊಡೆತ ತಿಂದರು.
ಈ ದಾಳಿಗೆ ಕಾರಣ ಏನು ಎಂಬುದು ಗೊತ್ತಾಗಲಿಲ್ಲ. ಹೊಡೆದಾಟ ತಪ್ಪಿಸಲು ಹೋದ ಅಕ್ಷಯ ನಾಯ್ಕ, ರಾಹುಲ್ ಬೆಂಗ್ರಾಜಾ ಹಾಗೂ ಕೃಷ್ಣ ನಾಯ್ಕರ ಮೇಲೆ ಏಕೆ ಅವರು ಮುಗಿಬಿದ್ದರು? ಎನ್ನುವುದು ಸಹ ಅವರಿಗೂ ಅರ್ಥವಾಗಲಿಲ್ಲ. ಬಡಿಗೆಯಿಂದ ಪೆಟ್ಟು ತಿಂದ ಅಕ್ಷಯ ನಾಯ್ಕ ಅವರು ಈ ಬಗ್ಗೆ ಪೊಲೀಸ್ ದೂರು ನೀಡಿದ್ದು, ಪೊಲೀಸರು ತನಿಖೆ ಶುರು ಮಾಡಿದ್ದಾರೆ.