ಕಾರವಾರ ಡಿಡಿಪಿಐ ಕಚೇರಿಯಲ್ಲಿ ಶಿಕ್ಷಣಾಧಿಕಾರಿಯಾಗಿ ಕರ್ತವ್ಯ ನಿಭಾಯಿಸುತ್ತಿರುವ ಶುಭ ಶುಭ ನಾಯಕ ಅವರು ತಮ್ಮ ಶೈಕ್ಷಣಿಕ ಸೇವೆಯ ಜೊತೆ ಮಕ್ಕಳಲ್ಲಿ ಪ್ರೇರಣಾದಾಯಕ ವಿಷಯ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಶಾಲಾ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವಲ್ಲಿ ಶುಭ ನಾಯ್ಕ ಅವರ ಶ್ರಮ ಅಪಾರವಾಗಿದ್ದು, ಈ ಸೇವೆ ಗುರುತಿಸಿ ಮುದುಗಾ ಜನತಾ ವಿದ್ಯಾಲಯದವರು ಅವರನ್ನು ಸನ್ಮಾನಿಸಿದ್ದಾರೆ.
Advertisement. Scroll to continue reading.
ಶುಭಾ ನಾಯಕ ಅವರು ತಮ್ಮ ಬಿಡುವಿನ ವೇಳೆ ಮಕ್ಕಳ ಜೊತೆ ಬೆರೆಯುತ್ತಾರೆ. ಶಾಲಾ ಮಕ್ಕಳಿಗೆ ಅಗತ್ಯವಿರುವ ಕೌಶಲ್ಯದ ಬಗ್ಗೆ ಅರಿವು ಮೂಡಿಸಲು ಅವರು ಪ್ರಯತ್ನಿಸುತ್ತಿದ್ದಾರೆ. ವಿವಿಧ ಕಾರ್ಯಕ್ರಮಗಳಿಗೆ ತೆರಳಿದಾಗಲೂ ಅವರು ಪ್ರೇರಣಾದಾಯಕ ಮಾತುಗಳಿಂದ ಮಕ್ಕಳಿಗೆ ಸಾಧನೆ ಮಾಡಲು ಪ್ರಚೋದಿಸುತ್ತ ಬಂದಿದ್ದಾರೆ. ಈ ಎಲ್ಲಾ ಹಿನ್ನಲೆ ಅವರನ್ನು ಜನತಾ ವಿದ್ಯಾಲಯ ಪ್ರೌಢಶಾಲೆ, ಮುದಗ ಹಾಗೂ ಕಡಲು ಇಕೋ ಕ್ಲಬ್ ವತಿಯಿಂದ ಗೌರವಿಸಲಾಗಿದೆ.
`ಶುಭಾ ನಾಯಕ ಅವರು ಎಸ್ ಎಸ್ ಎಲ್ ಸಿ ನೋಡಲ್ ಆಫಿಸರ್ ಆಗಿದ್ದಾರೆ. ಗುಣಾತ್ಮಕ ಶಿಕ್ಷಣ ಒದಗಿಸುವುದರ ಜೊತೆ ಮಕ್ಕಳಲ್ಲಿ ಉತ್ತಮ ಫಲಿತಾಂಶ ಬರುವ ನಿಟ್ಟಿನಲ್ಲಿಯೂ ಅವರು ಶ್ರಮಿಸುತ್ತಿದ್ದಾರೆ’ ಎಂದು ಜ್ಞಾನ-ವಿಜ್ಞಾನ ಸಮಿತಿಯ ಜಿಲ್ಲಾ ಸಂಚಾಲಕರಾದ ಶ್ರೀ ಜೈ ರಂಗನಾಥ ಬಿ ಎಸ್ ಅವರು ಈ ವೇಳೆ ವಿವರಿಸಿದರು. `ಶುಭಾ ನಾಯಕ ಅವರು ಮಾನವೀಯ ನೆಲೆಯಲ್ಲಿ ಕೆಲಸ ಮಾಡುತ್ತಿದ್ದು, ಆಧುನಿಕ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ಹೊಂದಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ’ ಎಂದು ಮುಖ್ಯ ಶಿಕ್ಷಕಿ ವೀಣಾ ಮಾಳಿಗೇರ್ ಅವರು ಹೇಳಿದರು. ಸಹಾಯಕ ಶಿಕ್ಷಕಕರಾದ ಸ್ಮಿತಾ ನಾಯ್ಕ್. ನಿಕಿತಾ ನಾಯ್ಕ್, ಕ್ಷಮ ನಾಯ್ಕ್, ಪೂರ್ಣಿಮಾ ನಾಯ್ಕ್ ಭಾರತಿ ಐಸಾಕ್, ಟೀನಾ ಅಸ್ನೋಟಿಕರ, ವಿಠಲ್ ವಿ ಗಾಡ ಇತರರು ಇದ್ದರು. ಮಹಿಳಾ ದಿನಾಚರಣೆ ಅಂಗವಾಗಿ ಈ ಸನ್ಮಾನ ಕಾರ್ಯಕ್ರಮ ನಡೆಯಿತು.