• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Swarnavalli's vow Bhajan campaign for the survival of the river

ಸ್ವರ್ಣವಲ್ಲಿ ಶ್ರೀಗಳ ಶಪಥ: ನದಿ ಉಳಿವಿಗಾಗಿ ಭಜನಾ ಅಭಿಯಾನ

March 11, 2026
House News MLA questions missing work

ಸದನದ ಸಮಾಚಾರ: ಕಾಣೆಯಾದ ಕಾಮಗಾರಿ ಪ್ರಶ್ನಿಸಿದ ಶಾಸಕ

March 11, 2026
ಸಮಾಜ ಸೇವಕನಿಂದ ಶೈಕ್ಷಣಿಕ ಕೊಡುಗೆ

ಸಮಾಜ ಸೇವಕನಿಂದ ಶೈಕ್ಷಣಿಕ ಕೊಡುಗೆ

March 11, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Swarnavalli's vow Bhajan campaign for the survival of the river

ಸ್ವರ್ಣವಲ್ಲಿ ಶ್ರೀಗಳ ಶಪಥ: ನದಿ ಉಳಿವಿಗಾಗಿ ಭಜನಾ ಅಭಿಯಾನ

March 11, 2026
House News MLA questions missing work

ಸದನದ ಸಮಾಚಾರ: ಕಾಣೆಯಾದ ಕಾಮಗಾರಿ ಪ್ರಶ್ನಿಸಿದ ಶಾಸಕ

March 11, 2026
ಸಮಾಜ ಸೇವಕನಿಂದ ಶೈಕ್ಷಣಿಕ ಕೊಡುಗೆ

ಸಮಾಜ ಸೇವಕನಿಂದ ಶೈಕ್ಷಣಿಕ ಕೊಡುಗೆ

March 11, 2026
ADVERTISEMENT
  • Home
  • Janamata
Wednesday, March 11, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಸದನದ ಸಮಾಚಾರ: ಕಾಣೆಯಾದ ಕಾಮಗಾರಿ ಪ್ರಶ್ನಿಸಿದ ಶಾಸಕ

Achyutkumar by Achyutkumar
March 11, 2026
House News MLA questions missing work
209
VIEWS
Share on FacebookShare on WhatsappShare on Twitter
ADVERTISEMENT

ಉತ್ತರ ಕನ್ನಡ ಉಸ್ತುವಾರಿ ಸಚಿವರೂ ಆಗಿರುವ ಮೀನುಗಾರಿಕಾ ಸಚಿವ ಮಂಕಾಳು ವೈದ್ಯ ಅವರಿಗೆ ವಿಧಾನ ಪರಿಷತ್ ಶಾಸಕ ಗಣಪತಿ ಉಳ್ವೇಕರ್ ಅವರು ವಿವಿಧ ಬಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ಚುಕ್ಕಿ ಗುರುತಿನ ಪ್ರಶ್ನೆಗೆ ಸೂಕ್ತ ಉತ್ತರ ಸಿಗದ ಕಾರಣ ಗಣಪತಿ ಉಳ್ವೇಕರ್ ಅವರು ಸದನಲ್ಲಿ ಎದ್ದು ನಿಂತು ಪ್ರಶ್ನಿಸಿದ್ದು, ಅದಕ್ಕೆ ಮಂಕಾಳು ವೈದ್ಯ ಅವರು ಸಮಾಧಾನದ ಉತ್ತರ ನೀಡಿದ್ದಾರೆ.

Advertisement. Scroll to continue reading.
ADVERTISEMENT

ಬಂದರು ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳು ಭರ್ತಿ ಮಾಡಲು ಕೈಗೊಂಡ ಕ್ರಮ, ಹುದ್ದೆ ನೇಮಕಾತಿ ವಿಷಯದಲ್ಲಿನ ಗೊಂದಲ, ನಿರ್ದೇಶಕ ಹುದ್ದೆಗೆ ಅರ್ಹತೆಯ ಕುರಿತು ಗಣಪತಿ ಉಳ್ವೇಕರ್ ಅವರು ಪ್ರಶ್ನಿಸಿದ್ದಾರೆ. ಅದರೊಂದಿಗೆ ಕಾರವಾರದ ಸದಾಶಿವಗಡದಲ್ಲಿ ತೇಲುವ ಜಟ್ಟಿ ಎಲ್ಲಿದೆ? ಎಂದು ಕಾಣಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಮಂಕಾಳು ವೈದ್ಯ ಅವರು `ಬಂದರು ನಿರ್ದೇಶಕಕ್ಕೆ ಸಂಬAಧಿಸಿ ಮೂರು ಹುದ್ದೆ ಖಾಲಿ, ಒಂದು ಹೊರ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಲಾಗಿದೆ’ ಎಂದಿದ್ದಾರೆ. `ಇನ್ನೆರಡು ಹುದ್ದೆಯನ್ನು ಆದಷ್ಟು ಬೇಗ ಭರ್ತಿ ಮಾಡಬೇಕು’ ಎಂದು ಗಣಪತಿ ಉಳ್ವೇಕರ್ ಅವರು ಆಗ್ರಹಿಸಿದ್ದು, ಅದಕ್ಕೂ ಮಂಕಾಳು ವೈದ್ಯ ಅವರು ಭರವಸೆ ನೀಡಿದ್ದರೆ. ಈ ವೇಳೆ ಸಭಾಪತಿ ಬಸವರಾಜ ಹೊರಟ್ಟಿ ಅವರು `ಎರಡು ತಿಂಗಳು ಅಥವಾ ನಾಲ್ಕು ತಿಂಗಳ ಒಳಗೆ ಹುದ್ದೆ ಭರ್ತಿ ಮಾಡುತ್ತೇನೆ ಎಂದು ಖಚಿತವಾಗಿ ತಿಳಿಸಬೇಕು’ ಎಂದು ತಾಕೀತು ಮಾಡಿದ್ದಾರೆ.

ADVERTISEMENT

`ಹುದ್ದೆಗೆ ಅರ್ಜಿ ಕರೆಯಲಾಗಿದೆ. ಯಾರೂ ಅರ್ಜಿ ಹಾಕುತ್ತಿಲ್ಲ’ ಎಂದು ಈ ವೇಳೆ ಮಂಕಾಳು ವೈದ್ಯ ಅವರು ಸದನಕ್ಕೆ ತಿಳಿಸಿದ್ದು, ಶೀಘ್ರದಲ್ಲಿಯೇ ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ. ಅದಾದ ನಂತರ `ಕಾರವಾರದ ಸದಾಶಿವಗಡದಲ್ಲಿ ತೇಲುವ ಜಟ್ಟಿ ನಿರ್ಮಿಸಲಾಗಿದೆ ಎಂದು ತಮಗೆ ಉತ್ತರ ಸಿಕ್ಕಿದೆ. ಆದರೆ, ಆ ಜಟ್ಟಿ ಎಲ್ಲಿದೆ?’ ಎಂದು ಗಣಪತಿ ಉಳ್ವೇಕರ್ ಅವರು ಪ್ರಶ್ನಿಸಿದ್ದಾರೆ. `ಹಿಂದಿನ ಸರ್ಕಾರದವರು ಸಿಆರ್‌ಜಡ್ ಅನುಮತಿಪಡೆಯದೇ ತೇಲುವ ಜಟ್ಟಿ ನಿರ್ಮಿಸಿದ್ದರು. ಸದ್ಯ ತೇಲುವ ಜಟ್ಟಿ ತೆರವು ಮಾಡಲಾಗಿದ್ದು, ಸಿಆರ್‌ಜಡ್ ಅನುಮತಿಪಡೆದು ಅದನ್ನು ಮತ್ತೆ ನಿರ್ಮಿಸುತ್ತೇವೆ’ ಎಂದು ಮಂಕಾಳು ವೈದ್ಯ ಅವರು ಹೇಳಿದ್ದಾರೆ.

ADVERTISEMENT
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋