ಹಾಲಿನ ಡೈರಿಯಲ್ಲಿ ಕೆಲಸ ಮಾಡುವ ರಾಮಕುಮಾರ್ ಜಾದವ್ ಅವರೇ ಎಮ್ಮೆಗಳನ್ನು ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದು, ಅಂಕೋಲಾ ಪೊಲೀಸರು ಇದಕ್ಕೆ ತಡೆ ಒಡ್ಡಿದ್ದಾರೆ. ಲಾರಿಗೆ ಅಡ್ಡಲಾಗಿ ಕೈ ಮಾಡುವ ಮೂಲಕ ಪೊಲೀಸರು ಆರು ಎಮ್ಮೆ ಹಾಗೂ ಐದು ಎಮ್ಮೆ ಕರುವಿನ ಜೀವ ಕಾಪಾಡಿದ್ದಾರೆ.
Advertisement. Scroll to continue reading.
ಮಾರ್ಚ 5ರಂದು ಹರಿಯಾಣದಿಂದ ಮಂಗಳೂರಿಗೆ ಅಕ್ರಮವಾಗಿ ಜಾನುವಾರು ಸಾಗಾಟ ನಡೆದಿತ್ತು. ಹರಿಯಾಣದ ಚಾಲಕ ಬುಲಷಣ್ ಶ್ರೀರಾಮ ಸ್ವರೂಪ ಅವರು ಬಿಹಾರದ ಹಾಲಿನ ಡೈರಿಯಲ್ಲಿ ಕೆಲಸ ಮಾಡುವ ರಾಮಕುಮಾರ ಜಾದವ್ ಅವರ ಸಹಯೋಗದಲ್ಲಿ ಆರು ಎಮ್ಮೆಗಳನ್ನು ಲಾರಿಗೆ ತುಂಬಿದ್ದರು. ಐದು ಕರುಗಳು ಸಹ ಉಸಿರಾಡಲು ಸಾಧ್ಯವಾಗದ ರೀತಿಯಲ್ಲಿ ಲಾರಿಯಲ್ಲಿದ್ದವು. ಅವುಗಳಿಗೆ ಮೇವು-ನೀರು ಸಹ ಕೊಡದೇ ಹಿಂಸಾತ್ಮಕ ರೀತಿಯಲ್ಲಿ ಹಗ್ಗದಿಂದ ಬಿಗಿಯಲಾಗಿತ್ತು.
ಆ ಲಾರಿ ಅಂಕೋಲಾ ತಾಲೂಕು ಪ್ರವೇಶಿಸಿತು. ಹೆಬ್ಬುಳ ಬಳಿಯ ನ್ಯೂ ಆಶ್ವಾಸ್ ಹೊಟೇಲ್ ಹತ್ತಿರ ಅಂಕೋಲಾ ಪೊಲೀಸರು ಲಾರಿಗೆ ಅಡ್ಡಲಾಗಿ ಕೈ ಮಾಡಿದರು. ಲಾರಿಯೊಳಗಿದ್ದ ಎಲ್ಲಾ ಜಾನುವಾರುಗಳನ್ನು ಅವರು ಕಟುಕರ ಕೈಯಿಂದ ತಪ್ಪಿಸಿದರು. ಅಕ್ರಮ ಜಾನುವಾರು ಸಾಗಾಟಗಾರರನ್ನು ವಶಕ್ಕೆಪಡೆದು ಕಾನೂನು ಕ್ರಮ ಜರುಗಿಸಿದರು.