ಯುಗಾದಿ ಹಬ್ಬದ ವೇಳೆ ಪ್ಲಾಸ್ಟಿಕ್ ಕೊಟ್ಟೆಯಲ್ಲಿ ಗಾಂಜಾಹಿಡಿದು ಅಲೆದಾಡುತ್ತಿದ್ದ ವ್ಯಕ್ತಿಯನ್ನು ಮುಂಡಗೋಡು ಪೊಲೀಸರು ಪತ್ತೆ ಮಾಡಿದ್ದಾರೆ. ಆ ಗಾಂಜಾವನ್ನು ವಶಕ್ಕೆಪಡೆದು ಆರೋಪಿಯನ್ನು ಬಂಧಿಸಿದ್ದಾರೆ.
ಮುoಡಗೋಡದ ಬಸ್ ಡಿಪೋ ಹತ್ತಿರ ವ್ಯಕ್ತಿಯೊಬ್ಬರು ಪ್ಲಾಸ್ಟಿಕ್ ಕೊಟ್ಟೆ ಹಿಡಿದು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದರು. ಪೊಲೀಸರು ಆ ವ್ಯಕ್ತಿಯನ್ನು ವಿಚಾರಿಸಿದಾಗ ಇಂದೂರ ಗ್ರಾಮದ ಅಕ್ಷರ ಮೌಲಾಸಾಬ ಸೈಯದ್ ಅಲಿ ಎಂದವರು ಪರಿಚಯಿಸಿಕೊಂಡರು. ಕೈಯಲ್ಲಿದ್ದ ಕ್ಯಾರಿಬ್ಯಾಗ್ ನೋಡಿದಾಗ ಅದರಲ್ಲಿ ಗಾಂಜಾ ಕಾಣಿಸಿತು. ಕೂಡಲೇ ಪೊಲೀಸರು ಮೇಲಧಿಕಾರಿಗಳಿಗೆ ಮಾಹಿತಿ ನೀಡಿ, ಗಾಂಜಾ ವ್ಯಾಪಾರಿಯನ್ನು ವಶಕ್ಕೆಪಡೆದರು.
ವಿಚಾರಣೆ ವೇಳೆ ಕುಂದಗೋಳದ ಸದ್ದಾಂ ಅಳಕಟ್ಟಿ ಅವರಿಂದ ಗಾಂಜಾ ಖರೀದಿಸಿರುವುದಾಗಿ ಅಕ್ಷರ ಮೌಲಾಸಾಬ ಸೈಯದ್ ಅಲಿ ಬಾಯ್ಬಿಟ್ಟರು. ಆ ಗಾಂಜಾ ಮಾರಾಟ ಮಾಡಿ ಹಣ ಮಾಡುವ ಉದ್ದೇಶ ಹೊಂದಿದನ್ನು ತಿಳಿಸಿದರು. ಅದರ ಪ್ರಕಾರ, ಮುಂಡಗೋಡ ಪಟ್ಟಣದ ಶಿರಸಿ-ಹುಬ್ಬಳ್ಳಿ ಮಾರ್ಗದ ಕೆ ಎಸ್ ಆರ್ ಟಿ ಸಿ ಬಸ್ ಡಿಪೋ ಹತ್ತಿರ ಬರುವ ಜನರಿಗೆ ಅಕ್ಷರ ಮೌಲಾಸಾಬ ಸೈಯದ್‌ಅಲಿ ಗಾಂಜಾ ಮಾರುವ ಸಿದ್ಧತೆಯಲ್ಲಿದ್ದರು. ಆ ವೇಳೆಯಲ್ಲಿಯೇ ಪೊಲೀಸರ ದಾಳಿ ನಡೆದಿದ್ದರಿಂದ 184 ಗ್ರಾಂ ಗಾಂಜಾ ಸಿಕ್ಕಿತು. 12 ಸಾವಿರ ರೂ ಮೌಲ್ಯದ ಆ ಗಾಂಜಾವನ್ನು ಪೊಲೀಸರು ಜಪ್ತು ಮಾಡಿದ್ದು, ಆರೋಪಿ ಕಿಸೆಯಲ್ಲಿದ್ದ 360ರೂ ಹಣವನ್ನು ನ್ಯಾಯಾಲಯಕ್ಕೆ ಒಪ್ಪಿಸಿದರು. ಪ್ರಕರಣವನ್ನು ದಾಖಲಿಸಿದರು.
ಮುಂಡಗೋಡ ಸಿಪಿಐ ರಂಗನಾಥ ನೀಲಮ್ಮನವರ್, ಪಿಸೈ ಮಂಜುನಾಥ ಗೌಡರ, ಎಸೈ ಸೋಮಶೇಖರ ಮೇತ್ರಿ ಅವರ ಜೊತೆ ಪೊಲೀಸ್ ಸಿಬ್ಬಂದಿ ಕೋಟೇಶ ನಾಗರವಳ್ಳಿ, ಅಣ್ಣಪ್ಪ ಬುಡಿಗೇರ, ಮಹಾಂತೇಶ ಮುಧೋಳ, ನಾಗಪ್ಪ ಮೊರಟಗಿ ಹಾಗೂ ಬಸವರಾಜ ಒಡೆಯರ ಈ ಕಾರ್ಯಾಚರಣೆಯಲ್ಲಿದ್ದರು.