ಕಾರವಾರದ ನಂದನಗದ್ದಾದಲ್ಲಿ ಪದ್ಮನಾಭ ಪ್ರಸಾದ ಏಜ್ಯುಕೇಶನ್ ಸೊಸೈಟಿಯ ಮೈಟಿ ಕಿಡ್ಸ ಪೂರ್ವ ಪ್ರಾಥಮಿಕ ಶಾಲೆಯ ಎಂಟನೇ ವಾರ್ಷಿಕ ಸ್ನೇಹ ಸಮ್ಮೇಳನ ಬಾಡದ ಬೃಂದಾವನ ಸಭಾಂಗಣದಲ್ಲಿ ನಡೆದಿದ್ದು, ಚಿಣ್ಣರ ಕಾರ್ಯಕ್ರಮಗಳು ನೋಡುಗರ ಕಣ್ಮನ ಸೆಳೆದಿವೆ.
Advertisement. Scroll to continue reading.
ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದಲಿತ ಸಾಹಿತ್ಯ ಪರಿಷತ್ತಿನ ಕಾರ್ಯಾಧ್ಯಕ್ಷರಾದ ಗಣೇಶ ಬಿಷ್ಟಣ್ಣನವರ ಅವರು `ನಂದಗೋಕುಲದ ವೇದಿಕೆ ನಂದಕೋಗುಲವನ್ನೇ ಸೃಷ್ಠಿ ಮಾಡಿದೆ. ಚಿಣ್ಣರ ಕಲರವ ಕರ್ಣಗಳಲ್ಲಿ ನಾವಿನ್ಯತೆಯ ಕಂಪನ್ನು ತರುತ್ತಿದೆ’ ಎಂದು ಬಣ್ಣಿಸಿದ್ದಾರೆ. `ಸಹೋದರಿ ಸುಮಾ ಎಲಿಗಾರವರ ಶ್ರಮ ಸಾರ್ಥಕವಾಗಿದ್ದು, ಮಕ್ಕಳನ್ನು ಜ್ಞಾನದ ಕಣಜವಾಗಿ ಮಾಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ’ ಎಂದು ಹೇಳಿದ್ದಾರೆ. ಇ ಎಸ್ ಐ ಹಾಸ್ಪಿಟಲ್ ಕಾರವಾರದ ವೈದ್ಯಾಧಿಕಾರಿಗಳಾದ ಡಾ ರೇಣು ಎಮ್ ಡಿ ಅವರು `ಬಾಲ್ಯದ ದಿನಗಳು ಜೀವನದ ಅಮೂಲ್ಯವಾದ ದಿನಗಳುಬದುಕಿನುದ್ದಕ್ಕೂ ನಮ್ಮೊಂದಿಗೆ ಮೆಲುಕು ಹಾಕುತ್ತವೆ’ ಎಂದು ಬಾಲ್ಯದ ದಿನಗಳನ್ನು ಸ್ಮರಿಸಿದ್ದಾರೆ. `ಪಾಲಕರು ಮಕ್ಕಳ ಮೇಲೆ ಒತ್ತಡ ಹೇರಬೇಡಿ’ ಎಂದವರು ಮನವಿ ಮಾಡಿದ್ದಾರೆ.
ಕಾರವಾರ ನಗರಸಭೆ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಮನೋಜ ಬಾಂದೇಕರ ಅವರು `ನಮ್ಮ ಕಾರವಾರದಲ್ಲಿರುವ ಉತ್ತಮ ಪೂರ್ವ ಪ್ರಾಥಮಿಕ ಶಾಲೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಹೆಮ್ಮೆ ಎನಿಸಿದೆ. ಈ ಶಾಲೆಯ ಪ್ರಾಚಾರ್ಯರು ಹಾಗೂ ಎಲ್ಲಾ ಶಿಕ್ಷಕರ ಪ್ರಾಮಾಣಿಕ ಸೇವೆ ಯಶಸ್ಸಿಗೆ ಕಾರಣ’ ಎಂದಿದ್ದಾರೆ. ನಿವೃತ್ತ ಜಂಟಿ ನಿರ್ದೇಶಕರಾದ ಮಾರುತಿ ಯಲಿಗಾರ ಅವರು `ಉತ್ತಮ ಭವಿಷ್ಯಕ್ಕೆ ಉತ್ತಮ ಶಿಕ್ಷಣ ಅಗತ್ಯ’ ಎಂದಿದ್ದಾರೆ. ಪ್ರಾಚಾರ್ಯರಾದ ಸುಮಾ ಯಲಿಗಾರ ಅವರು ಅಧ್ಯಕ್ಷತೆವಹಿಸಿದ್ದರು. ಸೆಂಟ್ ಜೋಸೆಫ್ ಕಾಲೇಜಿನ ಉಪನ್ಯಾಸಕರಾದ ಜಯಶೀಲಾ ಗಣೇಶ ಬಿಷ್ಟಣ್ಣನವರ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಗೌರವ ನಾಯ್ಕ ಹಾಗೂ ಉನೈಜಾ ಸುಲ್ತಾನ ಅವರ ನೃತ್ಯಗಳಂತೂ ನೆರೆದವರನ್ನು ರಂಜಿಸಿದವರು. ಸುಕೀರ್ತಿ ಯಲಿಗಾರ ಸ್ವಾಗತಿಸಿದರು. ದೀಪಾ ಸೋನಿ ನಿರೂಪಿಸಿದರು. ಸೃಷ್ಟಿ ಯಲಿಗಾರ ವರದಿ ವಾಚಿಸಿದರು. ಸುಮಾ ಕುಡ್ತರಕರ್ ವಂದಿಸಿದರು. ಸೌಮ್ಯ ವೈಗಂಕರ್, ನಂದಿತಾ ಮೇತ್ರಿ, ದೀಪಾ ಹುಲಸ್ವಾರ, ಸ್ಮೀತಾ ಉಳ್ವೇಕರ್, ಅನಿರುದ್ದ ಕಾಂಬ್ಳೆ ಕಾರ್ಯಕ್ರಮ ಸಂಘಟಿಸಿದ್ದರು.