ಗೋಕರ್ಣದ ವೈಲ್ಡ್ ವಿಲೇಜ್ ಸ್ಟೇ’ನಲ್ಲಿ ವಿದೇಶಿಗರು ರಹಸ್ಯವಾಗಿ ವಾಸವಾಗಿದ್ದು, ಆ ಬಗ್ಗೆ ಅರಿವಿದ್ದರೂ ಮಾಲಕರು ಸರ್ಕಾರಕ್ಕೆ ಮಾಹಿತಿ ನೀಡಿಲ್ಲ. ಈ ಹಿನ್ನಲೆ ರೆಸಾರ್ಟ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.
ವಿದೇಶಿ ಪ್ರಜೆಗಳು ವಸತಿ ಹೂಡಿದರೆ ರೆಸಾರ್ಟ ಮಾಲಕರು ಪೊಲೀಸರಿಗೆ ಮಾಹಿತಿ ಕೊಡುವುದು ಕಡ್ಡಾಯ. ಇದಕ್ಕಾಗಿ `ಸಿ’ ನಮೂನೆ ಅರ್ಜಿ ತುಂಬಿ ಅದನ್ನು ಪೊಲೀಸರಿಗೆ ಕೊಡಬೇಕು ಎಂಬುದು ನಿಯಮ. ಈ ಬಗ್ಗೆ ಪೊಲೀಸರು ಎಲ್ಲಾ ರೆಸಾರ್ಟ ಮಾಲಕರಿಗೂ ಅರಿವು ಮೂಡಿಸಿದ್ದು, ಆ ಬಗ್ಗೆ ತಿಳಿದಿದ್ದರೂ ಗೋಕರ್ಣ ಭೀಮಕೊಂಡದ ವೈಲ್ಡ್ ವಿಲೇಜ್ ಸ್ಟೇ ಮಾಲಕರು ಆ ನಿಯಮ ಪಾಲಿಸಿಲ್ಲ.
ಕಳೆದ ಎರಡು ದಿನಗಳಿಂದ ವೈಲ್ಡ್ ವಿಲೇಜ್ ಸ್ಟೇ ಒಳಗೆ ಸ್ಯಾಂಟಿಯಾಗೊ ಆಸ್ಕರ್ ಲುಕ್ ಮೆರ್ಲೊ ಹಾಗೂ ಆತನ ತಾಯಿ ವಾಸವಾಗಿದ್ದಾರೆ. ಅವರ ದಾಖಲೆಗಳ ಆಧಾರದಲ್ಲಿ ಅವರು ವಿದೇಶಿಗರು ಎಂದು ರೆಸಾರ್ಟ ಮಾಲಕ ಮಾಲಕ ಸೋಮಾ ಗಣಪು ಗೌಡ ಹಾಗೂ ವ್ಯವಸ್ಥಾಪಕ ಗಣೇಶ ಸೋಮಾ ಗೌಡ ಅವರಿಗೆ ಗೊತ್ತಾಗಿದೆ. ಅದಾಗಿಯೂ ಅವರು ಈ ಬಗ್ಗೆ ಪೊಲೀಸರಿಗೆ ತಿಳಿಸಿಲ್ಲ.
ಈ ವಿಷಯ ಪೊಲೀಸರಿಗೆ ಬೇರೆಯವರ ಮೂಲಕ ಗೊತ್ತಾಗಿದ್ದು, ಸಿ ಪಾರಂ ಭರ್ತಿ ಮಾಡದ ಸೋಮಾ ಗಣಪು ಗೌಡ ಹಾಗೂ ಗಣೇಶ ಸೋಮಾ ಗೌಡ ವಿರುದ್ದ ಗೋಕರ್ಣ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆ ಮೂಲಕ ಪಿಸೈ ಅನೀಲ ಬಿ ಎಂ ಅವರಿಬ್ಬರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ.