ಸೊಸೈಟಿಯಲ್ಲಿ ಸಾಲ ಮಾಡಿದ್ದ ರೈತರೊಬ್ಬರು ಆ ಸಾಲ ತೀರಿಸಲಾಗದೇ ಸಾವಿಗೆ ಶರಣಾಗಿದ್ದಾರೆ. ಕಳೆದ ವರ್ಷ ಸುರಿದ ಮಳೆಯಿಂದಾಗಿ ಫಸಲು ನಷ್ಟವಾಗಿದ್ದು, ಸಾಲ ತೀರಿಸಲಾಗದ ಸಮಸ್ಯೆಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Advertisement. Scroll to continue reading.
ಮುoಡಗೋಡದ ಚಿಗಳ್ಳಿ ಬಳಿಯ ಕಾವಲಕೊಪ್ಪದಲ್ಲಿ ನರಸಿಂಗ ಪೀರಪ್ಪ ಕಿವುಡನರ (51) ಅವರು ವಾಸವಾಗಿದ್ದರು. ಅವರು 3 ಎಕರೆಗೂ ಮೀರಿ ಕೃಷಿ ಭೂಮಿ ಹೊಂದಿದ್ದರು. ಅಲ್ಲಿ ಅವರು ಭತ್ತ ಹಾಗೂ ಮೆಕ್ಕೆ ಜೋಳ ಬೆಳೆಯುತ್ತಿದ್ದರು. ಈ ಬೆಳೆ ತೆಗೆಯುವುದಕ್ಕಾಗಿ ಅವರು ಚಿಗಳ್ಳಿ ಗ್ರಾಮ ಗ್ರೂಪ್ ಸಹಕಾರಿ ಸಂಘದಲ್ಲಿ ಸಾಲ ಮಾಡಿದ್ದರು. ಅದರ ಪ್ರಕಾರ ಅವರು 1.10 ಲಕ್ಷ ರೂ ಸಾಲ ಮರು ಪಾವತಿ ಮಾಡಬೇಕಿದ್ದು, ಅದನ್ನು ಮಾಡಲು ಸಾಧ್ಯವಾಗಿರಲಿಲ್ಲ.
ಕಳೆದ ವರ್ಷ ವಿಪರೀತ ಮಳೆ ಬಂದ ಕಾರಣ ಅವರು ಹೊಲದಲ್ಲಿ ಬೆಳೆದಿದ್ದ ಭತ್ತ ಹಾಳಾಯಿತು. ಮೆಕ್ಕೆಜೋಳ ಸಹ ಸಂಪೂರ್ಣವಾಗಿ ನಾಶವಾಯಿತು. ಇದರಿಂದ ಅವರಿಗೆ ಲಾಭ ಬರಲಿಲ್ಲ. ಸೊಸೈಟಿ ಸಾಲ ತೀರಿಸಲು ಆಗಲಿಲ್ಲ. ಕಳೆದ 15 ದಿನಗಳಿಂದ ಸಾಲದ ಚಿಂತೆಯಲ್ಲಿದ್ದ ನರಸಿಂಗ ಪೀರಪ್ಪ ಕಿವುಡನರ ಅವರು ಮಾರ್ಚ 8ರ ರಾತ್ರಿ ದುಡುಕು ನಿರ್ಧಾರಕ್ಕೆ ಮುಂದಾದರು. ಮನೆ ಹಿಂದಿರುವ ಭೀಮಣ್ಣ ಅಂಬಕ್ಕನವರ್ ಅವರ ಹೊಲಕ್ಕೆ ಹೋಗಿ ಅಲ್ಲಿ ಕ್ರಿಮಿನಾಶಕ ಸೇವಿಸಿದರು.
ತಕ್ಷಣ ಅವರನ್ನು ಮುಂಡಗೋಡು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ, ಅದರಿಂದ ಪ್ರಯೋಜನ ಆಗಲಿಲ್ಲ. ಫೆ 9ರಂದು ಅವರು ಸಾವನಪ್ಪಿದರು.
`ಆತ್ಮಹತ್ಯೆ ಮಾಡಿಕೊಳ್ಳುವುದು ಅಪರಾಧ’